ಕೈಯಲ್ಲಿ ಕಮಲದ ಹೂವಿಡಿದು ಪೋಸ್ ಕೊಟ್ಟ ಸಪ್ತಮಿ ಗೌಡ; ‘ಎಲ್ಲಿ ನಮ್ಮ ಕಳ್ಳ ಕೃಷ್ಣ ಯುವ..’ ಎಂದ ನೆಟ್ಟಿಗರು PHOTOS
- ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಕಾಂತಾರ ಮೂಲಕ ಖ್ಯಾತಿ ಪಡೆದರೂ, ಇತ್ತೀಚಿನ ಕೆಲ ದಿನಗಳಲ್ಲಿ ಬೇಡದ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದರಲ್ಲೂ ಯುವ ರಾಜ್‌ಕುಮಾರ್ ಡಿವೋರ್ಸ್ ಮುನ್ನೆಲೆಗೆ ಬಂದ ಬಳಿಕ, ಸಪ್ತಮಿ ಹೆಸರೂ ತಳುಕು ಹಾಕಿಕೊಂಡಿತ್ತು. ಅದೆಲ್ಲವನ್ನು ಬದಿಗಿಟ್ಟು ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೂ, ನೆಟ್ಟಿಗರು ಮಾತ್ರ ಸಪ್ತಮಿಯನ್ನು ಬಿಡುತ್ತಿಲ್ಲ.

(1 / 7)
ಸಪ್ತಮಿ ಗೌಡ ಇತ್ತೀಚಿನ ಕೆಲ ದಿನಗಳಿಂದ ಪಾಸಿಟಿವ್‌ಗಿಂತ ನೆಗೆಟಿವ್ ವಿಚಾರವಾಗಿಯೇ ಸಾಕಷ್ಟು ಸುದ್ದಿಯಲ್ಲಿದ್ದಾರೆ. (instagram\ Sapthami gowda)
(2 / 7)
ಅದರಲ್ಲೂ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಜೋಡಿಯ ಡಿವೋರ್ಸ್ ವಿಚಾರ ಮುನ್ನೆಲೆಗೆ ಬರ್ತಿದ್ದಂತೆ, ಸಪ್ತಮಿ ಹೆಸರೂ ಇದರ ನಡುವೆ ಕೇಳಿಬಂದಿತ್ತು.
(3 / 7)
ಪ್ರಕರಣ ಕೋರ್ಟ್‌ನಲ್ಲಿರುವುದರಿಂದ, ಈ ವಿಚಾರದಲ್ಲಿ ತಮ್ಮ ಹೆಸರನ್ನು ಎಳೆದು ತಂದಿದ್ದಕ್ಕೆ, ಮಾನನಷ್ಟ ಮೊಕದ್ದಮೆ ಹೂಡಿದ್ದರು ಸಪ್ತಮಿ.
(4 / 7)
ಇದೀಗ ತಿಂಗಳುಗಳು ಕಳೆದರೂ, ಸಪ್ತಮಿ ಮತ್ತು ಯುವ ರಾಜ್‌ಕುಮಾರ್ ಕುರಿತಾಗಿ ಒಂದಿಲ್ಲೊಂದು ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
(5 / 7)
ಸಪ್ತಮಿ ಗೌಡ ಇನ್‌ಸ್ಟಾದಲ್ಲಿ ಏನೇ ಪೋಸ್ಟ್ ಹಾಕಿದರೂ, ಯುವ ಅವರನ್ನು ಗಮನದಲ್ಲಿಟ್ಟುಕೊಂಡೇ ಕಾಮೆಂಟ್ ಹಾಕುತ್ತಿರುತ್ತಾರೆ. ಇದೀಗ ಕಮಲದ ಹೂವು ಹಿಡಿದು ಫೋಟೋ ಶೇರ್ ಮಾಡಿದ್ದಾರೆ.
(6 / 7)
ವಿಶೇಷ ಶೈಲಿಯಲ್ಲಿ ಸೀರೆಯುಟ್ಟು ಸಪ್ತಮಿ ಎದುರಾಗುತ್ತಿದ್ದಂತೆ, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಸೂಪರ್ ಎಂದು ಕೆಲವರು ಹೇಳಿದರೆ, ದೊಡ್ಮನೆ ಒಡತಿ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
ಇತರ ಗ್ಯಾಲರಿಗಳು