Chaithra J Achar: ಹುಚ್ಚೆಬ್ಬಿಸುವ ಫೋಟೋ ಹಂಚಿಕೊಂಡ್ರು ಚೈತ್ರಾ ಜೆ ಆಚಾರ್; ಸಪ್ತ ಸಾಗರದಾಚೆ ನಟಿಯ ಸೋಜುಗದ ಬ್ಯೂಟಿ ನೋಡಿ
- ಕನ್ನಡ ನಟಿ ಚೈತ್ರಾ ಜೆ ಆಚಾರ್ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋಗಳಿಗೆ मैं तोह तेरी जोगनिया…तू जोग लगा डे रेय… ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ಗೋಲಿಯಾನ್ ಕಿ ರಾಸ್‌ಲೀಲಾ ರಾಮ್ ಲೀಲಾ ಸಿನಿಮಾದ ಜೋಗ್ ಲಗಾ ದೇ ರೇ ಹಾಡನ್ನು ನೆನಪಿಸಿದ್ದಾರೆ.
- ಕನ್ನಡ ನಟಿ ಚೈತ್ರಾ ಜೆ ಆಚಾರ್ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋಗಳಿಗೆ मैं तोह तेरी जोगनिया…तू जोग लगा डे रेय… ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ಗೋಲಿಯಾನ್ ಕಿ ರಾಸ್‌ಲೀಲಾ ರಾಮ್ ಲೀಲಾ ಸಿನಿಮಾದ ಜೋಗ್ ಲಗಾ ದೇ ರೇ ಹಾಡನ್ನು ನೆನಪಿಸಿದ್ದಾರೆ.
(1 / 11)
ಈ ಫೋಟೋಗಳು ನೇರವಾಗಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯದ್ದು. ಆದರೆ, ಈಗ ಇದು ನೆನಪಷ್ಟೇ ಎಂದು ಚೈತ್ರಾ ಜೆ ಆಚಾರ್ ಹೇಳಿದ್ದಾರೆ. ಗೋಲಿಯಾನ್ ಕಿ ರಾಸ್‌ಲೀಲಾ ರಾಮ್ ಲೀಲಾ ಸಿನಿಮಾದ ಜೋಗ್ ಲಗಾ ದೇ ರೇ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನೂ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
(2 / 11)
ಚೈತ್ರಾ ಜೆ ಆಚಾರ್ ಅವರ ಈ ಫೋಟೋಗಳನ್ನು ಸಚಿನ್ ಥೋಮಸ್ ಕ್ಲಿಕ್ಕಿಸಿದ್ದಾರೆ. ರಮ್ಯಾ ಸೇವಂತಿಗೆ ಅವರು ಮೇಕಪ್ ಮಾಡಿದ್ದಾರೆ. ಇವರು ಧರಿಸಿರುವ ಉಡುಗೆಯು ನಾದಾ ನಮೃತಾ ನಟರಾಜನ್ ವಿನ್ಯಾಸದ್ದು.
(3 / 11)
ಚೈತ್ರಾ ಜೆ ಆಚಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
(5 / 11)
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಇವರು ರಕ್ಷಿತ್ ಶೆಟ್ಟಿ ಜತೆ ನಟಿಸಿದ್ದರು. ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು.
(6 / 11)
ಇವರು ಈಗಾಗಲೇ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚೈತ್ರಾ ಜೆ ಆಚಾರ್ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
(7 / 11)
ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಚೈತ್ರಾ ಆಚಾರ್ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು. ಗಿಲ್ಕಿ ಎಂಬ ಸಿನಿಮಾದಲ್ಲೂ ನಟಿಸಿದ್ದರು.
(8 / 11)
ರಾಜ್ ಬಿ ಶೆಟ್ಟಿ ಜತೆ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಇವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಟೋಬಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.
(9 / 11)
ಚೈತ್ರಾ ಜೆ ಆಚಾರ್ ಗಾಯಕಿಯಾಗಿಯೂ ಜನಪ್ರಿಯರು. ಇವರು ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡು ಸಖತ್ ಹಿಟ್ ಆಗಿತ್ತು.
(10 / 11)
ಕನ್ನಡ ಚಿತ್ರರಂಗದ ಭರವಸೆಯ ನಟಿಯಾಗಿ ಕಂಗೊಳಿಸುತ್ತಿರುವ ಚೈತ್ರಾ ಜೆ ಆಚಾರ್ ಅವರು ಅಪ್ಲೋಡ್ ಮಾಡುತ್ತಿರುವ ಹೊಸ ಫೋಟೋಗಳಂತೂ ತರುಣರ ಹೃದಯಲ್ಲಿ ನವಿರಾದ ಕಂಪನ ಉಂಟುಮಾಡುತ್ತಿರುವುದು ಸುಳ್ಳಲ್ಲ.
ಇತರ ಗ್ಯಾಲರಿಗಳು