ಆಂಕರ್ ಅನುಶ್ರಿ ಯೂಟ್ಯೂಬ್ ಇಂಟರ್‌ವ್ಯೂ: ಮುದ್ದಾದ ಪ್ರೇಮ, ಬ್ಲಾಕ್‌ಬಸ್ಟರ್ ಸಿನಿಮಾ, ಸೋನಲ್ ಜತೆ ನಮ್ಮ ತರುಣ- ಚಿತ್ರ ಲಹರಿ
- Anchor Anushree Interview: ಇತ್ತೀಚೆಗಷ್ಟೇ ವಿವಾಹವಾದ ಸ್ಯಾಂಡಲ್‌ವುಡ್ ಜೋಡಿ ತರುಣ್ ಸುಧೀರ್ ಮತ್ತು ಸೋನಲ್ ಜತೆಗೆ ಆಂಕರ್ ಅನುಶ್ರೀ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಹಲವು ಫನ್ ಸಂಗತಿಗಳು, ಭಾವುಕ ಸಂಗತಿಗಳ ಚರ್ಚೆಯಾಗಿವೆ.
- Anchor Anushree Interview: ಇತ್ತೀಚೆಗಷ್ಟೇ ವಿವಾಹವಾದ ಸ್ಯಾಂಡಲ್‌ವುಡ್ ಜೋಡಿ ತರುಣ್ ಸುಧೀರ್ ಮತ್ತು ಸೋನಲ್ ಜತೆಗೆ ಆಂಕರ್ ಅನುಶ್ರೀ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಹಲವು ಫನ್ ಸಂಗತಿಗಳು, ಭಾವುಕ ಸಂಗತಿಗಳ ಚರ್ಚೆಯಾಗಿವೆ.
(1 / 9)
ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ಸಂದರ್ಶನದ ಕುರಿತು ಒಂದು ಪ್ರಮೋ ಬಿಡುಗಡೆ ಮಾಡಿದ್ದಾರೆ. ಈ ಕ್ಯೂಟ್ ಜೋಡಿಯ ವಿವಾಹ, ಲವ್ ಸ್ಟೋರಿ ಕುರಿತು ಮಾತನಾಡಿದ್ದಾರೆ. "ಮುದ್ದಾದ ಪ್ರೇಮ, ಬ್ಲಾಕ್‌ಬಸ್ಟರ್ ಸಿನಿಮಾ, ಸೋನಲ್ ಜತೆ ನಮ್ಮ ತರುಣ" ಎಂದು ಪ್ರಮೋ ವಿಡಿಯೋವನ್ನು ಆಂಕರ್ ಅನುಶ್ರೀ ಹಂಚಿಕೊಂಡಿದ್ದಾರೆ.(anchor_anushree instagram)
(2 / 9)
ತಮಾಷೆ ಪ್ರಶ್ನೆಗಳು: "ಮದುವೆ ನಂತರದ ಎಲ್ಲಾ ಶಾಸ್ತ್ರಗಳು ಮುಗೀತಾ?" ಎಂದು ಅನುಶ್ರೀ ಪ್ರಶ್ನಿಸಿದಾಗ ತರುಣ್ ಮತ್ತು ಸೋನಲ್ ಗೊಳ್ಳೆಂದು ನಕ್ಕಿದ್ದಾರೆ. " ಹನಿಮೂನ್‌ಗೆ ಎಲ್ಲಿಗೆ ಹೋಗ್ತಿರಾ ಸರ್" ಎಂಬ ಪ್ರಶ್ನೆಗೆ ತರುಣ್ "ಕ್ಲೈಮೇಟು, ಬಜೆಟು... " ಎಂದು ಉತ್ತರಿಸಿದ್ದಾರೆ.
(3 / 9)
ನಟ ದರ್ಶನ್ ಬಗ್ಗೆ: ತರುಣ್ ಸೋನಲ್ ಲವ್ ಸ್ಟೋರಿ ಹಿಂದೆ ನಟ ದರ್ಶನ್ ಬೆಂಬಲ ಇರುವ ಕಥೆ ಎಲ್ಲರಿಗೂ ಗೊತ್ತಿದೆ. ಈ ಕುರಿತು ಕೂಡ ಅನುಶ್ರೀ ಪ್ರಶ್ನಿಸಿದ್ದಾರೆ. "ಅವತ್ತೊಂದಿನ ದರ್ಶನ್ ಅರ್ಧ ಗಂಟೆ ಬೇಗ ಬಂದ್ರು. ಅದೇನು ಇವಳಿಗೆ ಮಾತ್ರ ಚೆನ್ನಾಗಿ ಫ್ರೇಮ್ ಇಡ್ತಿ ನೀನು ಎಂದು ಹೇಳಿದ್ರು" ಎಂದು ಹೇಳಿ ತರುಣ್ ಉತ್ತರಿಸುವ ದೃಶ್ಯ ಪ್ರಮೋದಲ್ಲಿದೆ.
(4 / 9)
ನಿಮ್ಮಿಬ್ಬರಲ್ಲಿ ಜಾಸ್ತಿ ರೊಮ್ಯಾಂಟಿಕ್ ಯಾರು? ಎಂಬ ಪ್ರಶ್ನೆಯನ್ನೂ ಅನುಶ್ರೀ ಕೇಳಿದ್ದಾರೆ. "ನಾನು ರವಿಚಂದ್ರನ್ ಪಿಕ್ಚರ್ ತರಹ" ಎನ್ನುತ್ತ ಕೆಂಪು ಬಲೂನ್ ಅಡ್ಡ ಹಿಡಿದುಕೊಂಡು ಸೋನಲ್‌ಗೆ ಮುತ್ತು ನೀಡಿದ್ದಾರೆ ತರುಣ್.
(5 / 9)
"ಹೆಂಡತಿಗೆ ಚೆನ್ನಾಗಿ ಟೈಂ ಕೊಟ್ರೆ ಮಕ್ಕಳಾಗುತ್ತೆ, ಹಠ ಮಾಡ್ತಾವೆ" ಎಂದು ನೆನಪಿರಲಿ ಪ್ರೇಮ್ ಡೈಲಾಗು ಇದೆ. ಇಷ್ಟು ಮಾತ್ರವಲ್ಲದೆ ತರುಣ್ ಸುಧೀರ್‌ನನ್ನ ಹತ್ತಿರ ಸೆಳೆದು ಸೋನಲ್ ಮುತ್ತು ನೀಡುವ ದೃಶ್ಯವೂ ಇದೆ.
(6 / 9)
ಇಷ್ಟುಮಾತ್ರವಲ್ಲದೆ ಸೋನಾಲ್ ಗುಲಾಬಿ ಹೂವು ಹಿಡಿದುಕೊಂಡಿರುವುದು, ತರುಣ್ ಜ್ಯೂಸ್ ಕುಡಿಸಲು ಪ್ರಯತ್ನಿಸುವುದು ಇತ್ಯಾದಿ ಚಿತ್ರಣಗಳೂ ಈ ಪ್ರಮೋ ವಿಡಿಯೋದಲ್ಲಿವೆ.(anchor_anushree instagram)
(7 / 9)
ಈ ಸಂದರ್ಶನದಲ್ಲಿ ಫನ್ ಜೊತೆಗೆ ಒಂದಿಷ್ಟು ಭಾವುಕ ಅಂಶಗಳೂ ಇರುವ ಸೂಚನೆ ಇವೆ. ತರುಣ್ ಸುಧೀರ್ ತನ್ನ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಮದುವೆ ಮನೆಯಲ್ಲಿ ತಂದೆಯ ಫೋಟೋ ಇಟ್ಟು, ನನ್ನ ಮದುವೆಯನ್ನು ತಂದೆ ನೋಡ್ತಾ ಇದ್ದಾರೆ ಎಂಬ ಫೀಲ್ ಕುರಿತು ಮಾತನಾಡಿದ್ದಾರೆ.
(8 / 9)
"ಮುದ್ದಾದ ಪ್ರೇಮ, ಬ್ಲಾಕ್‌ಬಸ್ಟರ್ ಸಿನಿಮಾ, ಸೋನಲ್ ಜತೆ ನಮ್ಮ ತರುಣ" ಎಂದು ಪ್ರಮೋ ವಿಡಿಯೋವನ್ನು ಆಂಕರ್ ಅನುಶ್ರೀ ಹಂಚಿಕೊಂಡಿದ್ದಾರೆ. ಈ ಪ್ರಮೋದಲ್ಲಿ ಸಾಕಷ್ಟು ತರಲೆ, ತಮಾಷೆಯ ಪ್ರಶ್ನೆಗಳು ಇರುವ ನಿರೀಕ್ಷೆಯಿದೆ.
ಇತರ ಗ್ಯಾಲರಿಗಳು