Kateera: ಅರ್ಜುನ ಆನೆ ತೀರಿಕೊಂಡಾಗ ಸುಮ್ಮನಿದ್ದವರು, ದರ್ಶನ್ ವಿರುದ್ಧ ದೂರು ನೀಡೋದು ಸರಿಯಾ? ಡಿ ಬಾಸ್ ಅಭಿಮಾನಿಗಳ ಪ್ರಶ್ನೆ
- Darshan kaatera movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾದ ಟ್ರೈಲರ್‌ನಲ್ಲಿ ಹಾವಿನ ವಿಷದ ಕುರಿತಾದ ಡೈಲಾಗ್‌ಗೆ ವನ್ಯರಕ್ಷಣಾ ಒಕ್ಕೂಟದವರು ದೂರು ನೀಡಿದ್ದಾರೆ ಎನ್ನುವ ಸುದ್ದಿ ಡಿಬಾಸ್ ಅಭಿಮಾನಿಗಳನ್ನು ಕೆರಳಿಸಿದೆ. ಯಾರು ಏನು ತೊಂದರೆ ಕೊಟ್ಟರೂ ಪುಟಿದೇಳುವುದು ನಮ್ಮ ಬಾಸ್ ಗೆ ಹೊಸದೇನಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
- Darshan kaatera movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾದ ಟ್ರೈಲರ್‌ನಲ್ಲಿ ಹಾವಿನ ವಿಷದ ಕುರಿತಾದ ಡೈಲಾಗ್‌ಗೆ ವನ್ಯರಕ್ಷಣಾ ಒಕ್ಕೂಟದವರು ದೂರು ನೀಡಿದ್ದಾರೆ ಎನ್ನುವ ಸುದ್ದಿ ಡಿಬಾಸ್ ಅಭಿಮಾನಿಗಳನ್ನು ಕೆರಳಿಸಿದೆ. ಯಾರು ಏನು ತೊಂದರೆ ಕೊಟ್ಟರೂ ಪುಟಿದೇಳುವುದು ನಮ್ಮ ಬಾಸ್ ಗೆ ಹೊಸದೇನಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
(1 / 8)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಇದೇ ಡಿಸೆಂಬರ್ 29ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಸಮಯದಲ್ಲಿ ಹಾವಿನ ವಿಷಕ್ಕೆ ಸಂಬಂಧಪಟ್ಟಂತೆ ದರ್ಶನ್ ಹೇಳಿರುವ ಡೈಲಾಗ್ ಹೊಸ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ದರ್ಶನ್ ಅಭಿಮಾನಿಗಳ ಫ್ಯಾನ್ಸ್ ಪುಟಗಳಲ್ಲಿ ಈ ಮುಂದಿನ ಸಂದೇಶದ ಮೂಲಕ ಡಿಬಾಸ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
(2 / 8)
"ನಮಸ್ಕಾರ ಸ್ನೇಹಿತರೇ, ಇಂದು ಕಾಟೇರ ಚಿತ್ರ ತಂಡದ ವಿರುದ್ದ ದೂರು ನೀಡಿರುವ ಪ್ರಸನ್ನ ಕುಮಾರ್ ನಿಕಟಪೂರ್ವ ವನ್ಯಜೀವಿ ಪರಿಪಾಲಕರಿಗೆ ನನದೊಂದು ಪ್ರಶ್ನೆ... (1) ಪ್ರಕೃತಿ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ತಮಗಿರುವ ಅಭಿಮಾನಕ್ಕೆ ಧನ್ಯವಾದ. ಆದರೆ ಕಳೆದ ತಿಂಗಳು ಮೈಸೂರಿನ ಅಂಬಾರಿ ಹೊರುವ ನಮ್ಮ ಪ್ರೀತಿಯ ಅರ್ಜುನ ಆನೆ ತೀರಿಕೊಂಡಾಗ ಅಲ್ಲಿದ್ದ ಮಾವುತನೇ ಹೇಳಿದ್ದರು ನಮ್ಮ ಆನೆಯ ಕಾಲಿಗೆ ಗುಂಡು ಹಾರಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು ಆವಾಗ ಏಕೆ ನೀವು ದೂರು ನೀಡಲಿಲ್ಲ..?" ಎಂದು ದರ್ಶನ್ ಸೇನಾ ಸಮಿತಿ 'ರಿ' ಯುವ ಘಟಕ ಮದ್ದೂರು ಫೇಸ್‌ಬುಕ್ ಪುಟದಲ್ಲಿ ಪ್ರಶ್ನಿಸಲಾಗಿದೆ.
(3 / 8)
ಎಲ್ಲಾ ಚಲನಚಿತ್ರಗಳಲ್ಲಿ ಚಿತ್ರದ ಮೊದಲೇ ಚಿತ್ರದಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕ ಎಂದು ಹೆಡ್ ಲೈನ್ ಹಾಕಿರುತ್ತಾರೆ. ಅದಕ್ಕೂ ಮುಂದೆ ಹೋದರೆ ನಮ್ಮ ಡಿ-ಬಾಸ್ ಅವರಿಗೆ ಪ್ರಕೃತಿ ಮತ್ತು ವನ್ಯ ಜೀವಿಗಳ ಮೇಲಿರುವ ಪ್ರೀತಿ ಮತ್ತು ಕಾಳಜಿ ಎಷ್ಟಿದೆ ಎಂದು ಇಡೀ ಕರ್ನಾಟಕದ ಜನತೆಗೆ ಗೊತ್ತಿದೆ ಎಂದು ಫೇಸ್‌ಬುಕ್ ಪುಟದಲ್ಲಿ ಬರೆಯಲಾಗಿದೆ.
(4 / 8)
ನೀವು ಯಾವುದೋ ಒಂದು ಚಿಕ್ಕ ವಿಷಯ ತೆಗೆದುಕೊಂಡು ದೂರು ನೀಡುವುದು ಎಷ್ಟು ಸರಿ ಹೇಳಿ.... ಯಾರು ಏನು ತೊಂದರೆ ಕೊಟ್ಟರು ಪುಟಿದೇಳುವುದು ನಮ್ಮ ಬಾಸ್ ಗೆ ಹೊಸದೇನಲ್ಲ ... ನೀವು ಇನ್ನ ಎಷ್ಟೇ ಈ ತರ ತೊಂದರೆ ನೀಡಿದರು ಅವರಿಗೆ ನಾವು ಎಂದು ಜೊತೆಗಿದ್ದೆವೆ...ಈ ದೂರಿನ ಹಿಂದೆ ಇರುವ ಕೈವಾಡ ಪರಭಾಷೆ ಸಿನಿಮಾಗಳಿಗೆ ನಮ್ಮ ಬಾಸ್ ಸಿನಿಮಾದ ಮೇಲಿರುವ ಭಯನ ಹೇಗೆ...? ಎಂದು ಫೇಸ್‌ಬುಕ್ ಪುಟದಲ್ಲಿ ಪ್ರಶ್ನಿಸಲಾಗಿದೆ.
(5 / 8)
ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಕಲಾವಿದರೊಬ್ಬರು "ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಎಂಬ ಡೈಲಾಗ್ ಹೊಡೆದಿದ್ದಾರೆ. ಅಂದಹಾಗೆ, ಈ ಡೈಲಾಗ್ ದರ್ಶನ್ ಅವರು ಹೇಳಿರಲಿಲ್ಲ.
(6 / 8)
"ದರ್ಶನ್ ಅವರು ಹಾವಿನ ಕುರಿತು ನೀಡಿರುವ ಹೇಳಿಕೆಯು ಸಮಾಜದ ಮೇಲೆ ಕೆಟ್ಟ ಸಂದೇಶ, ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಹೇಳಿರುವ ಡೈಲಾಗ್ ಕಾನೂನಿಗೆ ವಿರುದ್ಧವಾದದ್ದು. ಹಾವುಗಳನ್ನು ಉಳಿಸಬೇಕೇ ಹೊರತು ಕೊಲ್ಲಲು ಪ್ರಚೋದನೆ ನೀಡಬಾರದು" ಎಂದು ವನ್ಯಜೀವಿ ರಕ್ಷಣಾ ಒಕ್ಕೂಟವು ರಾಜ್ಯಪಾಲರಿಗೆ ದೂರು ನೀಡಿತ್ತು.
(7 / 8)
ಇವರೆಲ್ಲ ಎಂತಹ ನೀಚ ಜನರು ಎಂದರೆ .. ಅರ್ಜುನ ಅನ್ನುವ ನಮ್ಮ ನಾಡಿನ ಹೆಮ್ಮೆಯ ಆನೆ ಕೊಲೆಯಾದಗ ಅದಕ್ಕೆ ಗುಂಡು ಹೊಡೆದವರು ಯಾರೆಂದು ತಿಳಿದಿದ್ದರೂ ಕನಿಷ್ಟ ಪಕ್ಷ ಧ್ವನಿ ಎತ್ತಲಿಲ್ಲ ಅ ಮಾವುತ ಗೋಳಾಡಿದರು ಅವರ ಪರ ಈ ನೀಚರು ನಿಲ್ಲುವುದಿಲ್ಲ. ಪಾಪ ಬಡವ ಮಾವುತ ಕೊಲೆಗಾರ ಯಾರೆಂದು ತಿಳಿದಿದ್ದರೂ ಏನು ಮಾಡಲು ಆಗದೆ ಅಸಹಾಯಕತೆಯಿಂದ ಮೊನ್ನೆ ಅದರ 11 ದಿನದ ಕಾರ್ಯ ಮುಗಿಸಿದರು ಆವಾಗ ನಾಪತ್ತೆಯಾಗಿದ್ದ ಇವರೆಲ್ಲ ಒಂದು ದೂರು ಸಹ ನೀಡಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಡಿ ಬಾಸ್ ಅಭಿಮಾನಿಗಳು ಹೇಳುತ್ತಿದ್ದಾರೆ.
ಇತರ ಗ್ಯಾಲರಿಗಳು