O2 Movie Review: ‘ಓ2’ ಇದು ಪ್ರೀತಿಸೋ ಹೃದಯ ಮತ್ತು ಹೃದಯಾಘಾತದ ಕಥೆ! ಥ್ರಿಲ್‌ ನೀಡುತ್ತೆ ಈ ಮೆಡಿಕಲ್‌ ಥ್ರಿಲ್ಲರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  O2 Movie Review: ‘ಓ2’ ಇದು ಪ್ರೀತಿಸೋ ಹೃದಯ ಮತ್ತು ಹೃದಯಾಘಾತದ ಕಥೆ! ಥ್ರಿಲ್‌ ನೀಡುತ್ತೆ ಈ ಮೆಡಿಕಲ್‌ ಥ್ರಿಲ್ಲರ್‌

O2 Movie Review: ‘ಓ2’ ಇದು ಪ್ರೀತಿಸೋ ಹೃದಯ ಮತ್ತು ಹೃದಯಾಘಾತದ ಕಥೆ! ಥ್ರಿಲ್‌ ನೀಡುತ್ತೆ ಈ ಮೆಡಿಕಲ್‌ ಥ್ರಿಲ್ಲರ್‌

  • O2 Movie Review: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ ಓ2 ಸಿನಿಮಾ. ಅಚ್ಚರಿಯ ವಿಚಾರ ಏನೆಂದರೆ ಸ್ವತಃ ಅಪ್ಪು ಕೇಳಿ ಇಷ್ಟಪಟ್ಟ ಕೊನೇ ಕಥೆಯಿದು. ಈಗ ಇದೇ ಕಥೆ ಸಿನಿಮಾರೂಪ ಪಡೆದು ಬಿಡುಗಡೆಯೂ ಆಗಿದೆ. ಮೆಡಿಕಲ್‌ ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ

ಓ2 ಸಿನಿಮಾವನ್ನು ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ನಿರ್ದೇಶನ ಮಾಡಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮೂಡಿಬಂದ ಚಿತ್ರದಲ್ಲಿ ಆಶಿಕಾ ರಂಗನಾಥ್‌, ಪ್ರವೀಣ್‌ ತೇಜ, ರಾಘವ್‌ ನಾಯಕ್‌, ಸಿರಿ ರವಿಕುಮಾರ್, ಗೋಪಾಲ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಸ್ಟಾರ್‌ 3/5
icon

(1 / 8)

ಕಾಲಮಾನ ಬದಲಾಗಿದೆ. ಆಧುನಿಕತೆಯಲ್ಲಿ ವೈದ್ಯಕೀಯ ವಿಜ್ಞಾನವೂ ಆಕಾಶಕ್ಕೆ ಮುಟ್ಟಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಸೃಷ್ಟಿಯಾಗುತ್ತವೆ. ಇದೀಗ ಓ2 ಸಿನಿಮಾದಲ್ಲೂ ಇಂಥದ್ದೇ ವೈದ್ಯಕೀಯ ರಂಗದಲ್ಲಿನ ಬೆಳವಣಿಗೆ ಸುತ್ತ ನಡೆಯುವ ಕಥೆಯಾಗಿದೆ. 
icon

(2 / 8)

ಸತ್ತ ವ್ಯಕ್ತಿಯನ್ನು ಬದುಕಿಸಬಹುದೇ? ಇಂಥದ್ದೊಂದು ಎಳೆಯ ನಡುವೆ ಸಾಗುವ ಈ ಸಿನಿಮಾದಲ್ಲಿ, ವೈದ್ಯಕೀಯ ಕ್ಷೇತ್ರದ ರೋಚಕ ಸಂಗತಿಗಳನ್ನೂ ನೋಡುಗರ ಎದೆಗಿಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನವ ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್. 
icon

(3 / 8)

ಹೃದಯಾಘಾತವಾದ ವ್ಯಕ್ತಿಗೆ ಆ ಕ್ಷಣದ ಟ್ರೀಟ್‌ಮೆಂಟ್‌ ತುಂಬ ಮುಖ್ಯ. ಹಾಗೆ ಹಾರ್ಟ್‌ ಅಟ್ಯಾಕ್‌ ಆದ ವ್ಯಕ್ತಿಗೆ ಓ2 ಇಂಜೆಕ್ಟ್‌ ಮಾಡಿದರೆ, ಆ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದಾದ ಸಾಧ್ಯತೆಯೇ ಹೆಚ್ಚು ಎಂಬ ವಿಷಯದ ಮೇಲೆ ಈ ಸಿನಿಮಾ ಸಾಗಲಿದೆ. 
icon

(4 / 8)

ನೋಡುಗನಿಗೆ ಎಲ್ಲಿಯೂ ಇದು ಒಂದು ಸಿನಿಮಾ ರೀತಿ ಕಾಣಿಸದೆ, ವೈಜ್ಞಾನಿಕತೆಯ ಆಳಕ್ಕಿಳಿದು ಒಂದಷ್ಟು ಸಂಶೋಧನೆ ನಡೆಸಿಯೇ ನಿರ್ದೇಶಕದ್ವಯರು ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಸಿನಿಮಾ ರೋಚಕತೆಯ ಜತೆಗೇ ನೋಡಿಸಿಕೊಂಡು ಹೋಗುತ್ತದೆ. ಸೈಂಟಿಫಿಕ್‌ ಪದ ಬಳಕೆ ಜತೆಗೆ ಸಂಭಾಷಣೆಯೂ ಚಿತ್ರದ ಹೈಲೈಟ್.
icon

(5 / 8)

ಮೆಡಿಕಲ್‌ ಥ್ರಿಲ್ಲರ್‌ ಎಂದ ತಕ್ಷಣ ಬರೀ ಅದೇ ವಿಜ್ಞಾನ, ಔಷಧಿ, ಮಾತ್ರೆಗಳು ಈ ಸಿನಿಮಾದಲ್ಲಿಲ್ಲ. ಅದರಾಚೆಗೆ ಪ್ರೀತಿಯ ಬಂಧವೂ ಚಿತ್ರದ ಹೈಲೈಟ್.‌ ನಿರ್ದೇಶಕರಲ್ಲೊಬ್ಬರಾದ ರಾಘವ್‌ ನಾಯಕ್‌ ಚಿತ್ರದಲ್ಲಿ ಆಶಿಕಾ ರಂಗನಾಥ್‌ಗೆ ಜೋಡಿಯಾಗಿದ್ದಾರೆ. ಸಾವು ಬದುಕಿನ ಹೋರಾಟದ ನಡುವೆ ಈ ಜೋಡಿಯ ಪ್ರೀತಿ ಸುಳಿಗಾಳಿಯೂ ನೋಡುಗನ ಎದೆ ತಂಪಾಗಿಸುತ್ತದೆ.
icon

(6 / 8)

ಆದರೆ, ಸೈನ್ಸ್‌ ಫಿಕ್ಷನ್‌ ಸಿನಿಮಾ ಮಾಡಲು ಹೋಗಿ ಲವ್‌ಸ್ಟೋರಿ ಮಾಡಿದರಾ ನಿರ್ದೇಶಕರು? ಹೀಗೊಂದು ಪ್ರಶ್ನೆಯೂ ನೋಡುಗನಿಗೂ ಮೂಡುತ್ತದೆಯಾದರೂ, ಎರಡನ್ನೂ ಅಷ್ಟೇ ಚೆನ್ನಾಗಿಯೇ ಮಿಶ್ರಣ ಮಾಡಿ, ಎಲ್ಲಿಯೂ ಬೋರ್‌ ಹೊಡೆಸದಂತೆ ನೋಡಿಕೊಂಡಿದ್ದಾರೆ. 
icon

(7 / 8)

ವಿವಾನ್‌ ರಾಧಾಕೃಷ್ಣ ಸಂಗೀತ ಮತ್ತು ನವೀನ್‌ ಅವರ ಛಾಯಾಗ್ರಹಣ ಚಿತ್ರವನ್ನು ಮತ್ತಷ್ಟು ಮೇಲಕ್ಕೇರಿಸಿದೆ. ವೈದ್ಯೆಯಾಗಿ ಆಶಿಕಾ ವಿಭಿನ್ನ ಪಾತ್ರದ ಮೂಲಕ ಮನಸ್ಸಲ್ಲಿ ಉಳಿಯುತ್ತಾರೆ. ಪ್ರವೀಣ್‌ ತೇಜ ಎರಡು ಭಿನ್ನ ಕೋನದಲ್ಲಿ ಕಾಣಿಸುತ್ತಾರೆ. ಓಶೋ ಪಾತ್ರ ಮಾಡಿರುವ ನಿರ್ದೇಶಕ ರಾಘವ್‌ ನಾಯಕ್‌ ಚೊಚ್ಚಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ. 
icon

(8 / 8)

ಇತರ ಗ್ಯಾಲರಿಗಳು