O2 Movie Review: ‘ಓ2’ ಇದು ಪ್ರೀತಿಸೋ ಹೃದಯ ಮತ್ತು ಹೃದಯಾಘಾತದ ಕಥೆ! ಥ್ರಿಲ್ ನೀಡುತ್ತೆ ಈ ಮೆಡಿಕಲ್ ಥ್ರಿಲ್ಲರ್
- O2 Movie Review: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿದೆ ಓ2 ಸಿನಿಮಾ. ಅಚ್ಚರಿಯ ವಿಚಾರ ಏನೆಂದರೆ ಸ್ವತಃ ಅಪ್ಪು ಕೇಳಿ ಇಷ್ಟಪಟ್ಟ ಕೊನೇ ಕಥೆಯಿದು. ಈಗ ಇದೇ ಕಥೆ ಸಿನಿಮಾರೂಪ ಪಡೆದು ಬಿಡುಗಡೆಯೂ ಆಗಿದೆ. ಮೆಡಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ
- O2 Movie Review: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿದೆ ಓ2 ಸಿನಿಮಾ. ಅಚ್ಚರಿಯ ವಿಚಾರ ಏನೆಂದರೆ ಸ್ವತಃ ಅಪ್ಪು ಕೇಳಿ ಇಷ್ಟಪಟ್ಟ ಕೊನೇ ಕಥೆಯಿದು. ಈಗ ಇದೇ ಕಥೆ ಸಿನಿಮಾರೂಪ ಪಡೆದು ಬಿಡುಗಡೆಯೂ ಆಗಿದೆ. ಮೆಡಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ
(1 / 8)
ಓ2 ಸಿನಿಮಾವನ್ನು ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ನಿರ್ದೇಶನ ಮಾಡಿದ್ದಾರೆ. ಪಿಆರ್ಕೆ ಬ್ಯಾನರ್ನಲ್ಲಿ ಮೂಡಿಬಂದ ಚಿತ್ರದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ, ರಾಘವ್ ನಾಯಕ್, ಸಿರಿ ರವಿಕುಮಾರ್, ಗೋಪಾಲ್ ದೇಶಪಾಂಡೆ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ 3/5
(2 / 8)
ಕಾಲಮಾನ ಬದಲಾಗಿದೆ. ಆಧುನಿಕತೆಯಲ್ಲಿ ವೈದ್ಯಕೀಯ ವಿಜ್ಞಾನವೂ ಆಕಾಶಕ್ಕೆ ಮುಟ್ಟಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಸೃಷ್ಟಿಯಾಗುತ್ತವೆ. ಇದೀಗ ಓ2 ಸಿನಿಮಾದಲ್ಲೂ ಇಂಥದ್ದೇ ವೈದ್ಯಕೀಯ ರಂಗದಲ್ಲಿನ ಬೆಳವಣಿಗೆ ಸುತ್ತ ನಡೆಯುವ ಕಥೆಯಾಗಿದೆ.
(3 / 8)
ಸತ್ತ ವ್ಯಕ್ತಿಯನ್ನು ಬದುಕಿಸಬಹುದೇ? ಇಂಥದ್ದೊಂದು ಎಳೆಯ ನಡುವೆ ಸಾಗುವ ಈ ಸಿನಿಮಾದಲ್ಲಿ, ವೈದ್ಯಕೀಯ ಕ್ಷೇತ್ರದ ರೋಚಕ ಸಂಗತಿಗಳನ್ನೂ ನೋಡುಗರ ಎದೆಗಿಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನವ ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್.
(4 / 8)
ಹೃದಯಾಘಾತವಾದ ವ್ಯಕ್ತಿಗೆ ಆ ಕ್ಷಣದ ಟ್ರೀಟ್ಮೆಂಟ್ ತುಂಬ ಮುಖ್ಯ. ಹಾಗೆ ಹಾರ್ಟ್ ಅಟ್ಯಾಕ್ ಆದ ವ್ಯಕ್ತಿಗೆ ಓ2 ಇಂಜೆಕ್ಟ್ ಮಾಡಿದರೆ, ಆ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದಾದ ಸಾಧ್ಯತೆಯೇ ಹೆಚ್ಚು ಎಂಬ ವಿಷಯದ ಮೇಲೆ ಈ ಸಿನಿಮಾ ಸಾಗಲಿದೆ.
(5 / 8)
ನೋಡುಗನಿಗೆ ಎಲ್ಲಿಯೂ ಇದು ಒಂದು ಸಿನಿಮಾ ರೀತಿ ಕಾಣಿಸದೆ, ವೈಜ್ಞಾನಿಕತೆಯ ಆಳಕ್ಕಿಳಿದು ಒಂದಷ್ಟು ಸಂಶೋಧನೆ ನಡೆಸಿಯೇ ನಿರ್ದೇಶಕದ್ವಯರು ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಸಿನಿಮಾ ರೋಚಕತೆಯ ಜತೆಗೇ ನೋಡಿಸಿಕೊಂಡು ಹೋಗುತ್ತದೆ. ಸೈಂಟಿಫಿಕ್ ಪದ ಬಳಕೆ ಜತೆಗೆ ಸಂಭಾಷಣೆಯೂ ಚಿತ್ರದ ಹೈಲೈಟ್.
(6 / 8)
ಮೆಡಿಕಲ್ ಥ್ರಿಲ್ಲರ್ ಎಂದ ತಕ್ಷಣ ಬರೀ ಅದೇ ವಿಜ್ಞಾನ, ಔಷಧಿ, ಮಾತ್ರೆಗಳು ಈ ಸಿನಿಮಾದಲ್ಲಿಲ್ಲ. ಅದರಾಚೆಗೆ ಪ್ರೀತಿಯ ಬಂಧವೂ ಚಿತ್ರದ ಹೈಲೈಟ್. ನಿರ್ದೇಶಕರಲ್ಲೊಬ್ಬರಾದ ರಾಘವ್ ನಾಯಕ್ ಚಿತ್ರದಲ್ಲಿ ಆಶಿಕಾ ರಂಗನಾಥ್ಗೆ ಜೋಡಿಯಾಗಿದ್ದಾರೆ. ಸಾವು ಬದುಕಿನ ಹೋರಾಟದ ನಡುವೆ ಈ ಜೋಡಿಯ ಪ್ರೀತಿ ಸುಳಿಗಾಳಿಯೂ ನೋಡುಗನ ಎದೆ ತಂಪಾಗಿಸುತ್ತದೆ.
(7 / 8)
ಆದರೆ, ಸೈನ್ಸ್ ಫಿಕ್ಷನ್ ಸಿನಿಮಾ ಮಾಡಲು ಹೋಗಿ ಲವ್ಸ್ಟೋರಿ ಮಾಡಿದರಾ ನಿರ್ದೇಶಕರು? ಹೀಗೊಂದು ಪ್ರಶ್ನೆಯೂ ನೋಡುಗನಿಗೂ ಮೂಡುತ್ತದೆಯಾದರೂ, ಎರಡನ್ನೂ ಅಷ್ಟೇ ಚೆನ್ನಾಗಿಯೇ ಮಿಶ್ರಣ ಮಾಡಿ, ಎಲ್ಲಿಯೂ ಬೋರ್ ಹೊಡೆಸದಂತೆ ನೋಡಿಕೊಂಡಿದ್ದಾರೆ.
ಇತರ ಗ್ಯಾಲರಿಗಳು