Baby Girl Names: ಹೆಣ್ಣು ಮಗುವಿಗೆ ಚಂದದ ಹೆಸರು ಹುಡುಕ್ತಾ ಇದ್ದೀರಾ? ಶಿಫಾಲಿಕಾ ಇವಾಂಶಿಕ… ಕೃಷ್ಣಂ ಪ್ರಣಯ ಸಖಿ ದ್ವಾಪರ ಹಾಡು ಗಮನಿಸಿ
- Beautiful baby girls names: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ದ್ವಾಪರ ನೋಡಲು ಹಾಡು ಟ್ರೆಂಡಿಂಗ್‌ನಲ್ಲಿದೆ. ಹೆಣ್ಣು ಮಗುವಿಗೆ ಚಂದದ ಹೆಸರು ಹುಡುಕುವವರಿಗೆ ಈ ಹಾಡಿನಲ್ಲಿ ಇರುವ ಕೆಲವೊಂದು ಹೆಸರುಗಳು ಸ್ಪೂರ್ತಿಯಾಗಬಲ್ಲದು.
- Beautiful baby girls names: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ದ್ವಾಪರ ನೋಡಲು ಹಾಡು ಟ್ರೆಂಡಿಂಗ್‌ನಲ್ಲಿದೆ. ಹೆಣ್ಣು ಮಗುವಿಗೆ ಚಂದದ ಹೆಸರು ಹುಡುಕುವವರಿಗೆ ಈ ಹಾಡಿನಲ್ಲಿ ಇರುವ ಕೆಲವೊಂದು ಹೆಸರುಗಳು ಸ್ಪೂರ್ತಿಯಾಗಬಲ್ಲದು.
(1 / 8)
Baby Girl Names You Will Love: ನಮಗೆ ಇದೇ ಅಕ್ಷರದಿಂದ ಆರಂಭವಾಗುವ ಮಗುವಿನ ಹೆಸರು ಬೇಕಂತ ಇಲ್ಲ. ಆದರೆ, ಯಾವುದಾದರೂ ಚಂದದ ಹೆಸರು ಬೇಕು ಎಂದು ಹುಡುಕುವವರಿಗೆ ಟ್ರೆಂಡಿಂಗ್‌ನಲ್ಲಿರುವ ದ್ವಾಪರ ಹಾಡಿನಲ್ಲಿರುವ ಕೆಲವು ಹೆಸರುಗಳು ಇಷ್ಟವಾಗಬಹುದು. ಗೋಲ್ಡನ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ದ್ವಾಪರ ನೋಡಲು ಹಾಡು ಟ್ರೆಂಡಿಂಗ್‌ನಲ್ಲಿದೆ.
(2 / 8)
ರಾಧಿಕೆ: ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಹಾಡಿನ "ದ್ವಾಪರ ದಾಟುತ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ, ಹಾಡಲಿ ಹಾಡಲು ಮಾತಲಿ ಹೇಳಲು" ಈ ಸಾಲುಗಳಿಂದ "ರಾಧಿಕೆ, ರಾಧಿಕಾ" ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಕನ್ನಡ ನಟಿ ರಾಧಿಕ ಈಗಾಗಲೇ ಫೇಮಸ್, ಬೇರೆ ಹೆಸರು ಸೂಚಿಸಿ ಅನ್ನುವಿರಾ. ಹಾಡಿನ ಮುಂದಿನ ಸಾಲುಗಳಲ್ಲಿ ಹುಡುಕೋಣ.
(3 / 8)
ಸಖಿ, ಹಂಸ, ಮೀನಾ: ದ್ವಾಪರ ಹಾಡಿನ ಮುಂದಿನ ಸಾಲುಗಳಲ್ಲಿ ಸಖಿ, ಹಂಸ, ಮೀನಾ ಮುಂತಾದ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. "ಸಾಧ್ಯವೇ ಇಲ್ಲದ ರಾಗ ಮಾಲಿಕೆ, ಸಖಿ ಸಖಿ ನನ್ನ ರೂಪಸಿ, ಸಖಿ ಸಖಿ ನಿನ್ನ ಮೋಹಿಸಿ, ನೀನೇ ನನ್ನ ಪ್ರೇಯಸಿ, ಜೇನ ದನಿಯೋಳೆ ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ, ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ". ಅಯ್ಯೋ ಸಖಿ, ಹಂಸ, ಮೀನಾ ಇದೆಲ್ಲ ಓಲ್ಡ್ ಹೆಸರು. ಇನ್ನೂ ಒಳ್ಳೆಯ ಈಗಿನ ಲೇಟೆಸ್ಟ್ ಹೆಸರುಗಳನ್ನು ನೀಡಿ ಅನ್ತೀರಾ. ಮುಂದಿದೆ ನೋಡಿ ಒಂದಕ್ಕಿಂತ ಒಂದು ಚಂದದ ಹೆಸರುಗಳು.
(4 / 8)
ನಿಹಾರಿಕಾ ಆಕರ್ಶಿಕ ಅನಾಮಿಕ: "ಬೇರೆ ದಾರೀನು ಇಲ್ಲ ನನಗಿನ್ನು, ನೀನು ಸಿಕ್ಕಾಗಿದೆ ನಾನು ಹುಡುಕಿದ್ದು, ನನ್ನ ನಿಲ್ದಾಣ ನೀನೆ ಇನ್ನೇನಿದೆ, ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ" ಆಹಾ ನಿಹಾರಿಕಾ ಆಕರ್ಶಿಕ ಅನಾಮಿಕ ಈ ಮೂರು ಹೆಸರಲ್ಲಿ ಯಾವುದಾದರೂ ಹೆಸರು ನಿಮ್ಮ ಹೆಣ್ಣು ಮಗುವಿಗೆ ಇಡಬಹುದಲ್ವೆ? ಅ ಅಥವಾ ಎ ಅಕ್ಷರದಿಂದಲೇ ಬೇಕೆನ್ನುವವರಿಗೆ ಆಕರ್ಶಿಕ ಅಥವಾ ಅನಾಮಿಕ ಹೆಸರು ಸೂಕ್ತವಾಗಬಲ್ಲದು.
(5 / 8)
ವೆರೋನಿಕ ಶಿಫಾಲಿಕಾ ಇವಾಂಶಿಕ: ನಿಹಾರಿಕಾ ಆಕರ್ಶಿಕ ಅನಾಮಿಕ ಬೇಡ ಅಂದ್ರೆ, ಇನ್ನೂ ಮೂರು ಆಯ್ಕೆಗಳು ಇದೇ ಹಾಡಿನಲ್ಲಿದೆ. "ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ, ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ". ನಿಮ್ಮ ಮಗಳಿಗೆ ವೆರೋನಿಕ, ಶಿಫಾಲಿಕಾ, ಇವಾಂಶಿಕ ಹೆಸರುಗಳಲ್ಲಿ ಯಾವುದನ್ನು ಆಯ್ಕೆ ಮಾಡುವಿರಿ. ನಮ್ಮನ್ನು ಕೇಳಿದ್ರೆ ಶಿಫಾಲಿಕಾ, ಇವಾಂಶಿಕ ಎಂಬೆರಡು ಹೆಸರುಗಳು ಬ್ಯೂಟಿಫುಲ್. ಅಂತಿಮ ಆಯ್ಕೆ ನಿಮ್ಮದೇ.
(6 / 8)
ಅಯ್ಯೋ ಮಾಡರ್ನ್ ಹೆಸರು ಎಂದೆಲ್ಲ ಹೇಳಿ ಸರಿಯಾಗಿ ಪ್ರೊನೌನ್ಸ್ ಮಾಡೋಕ್ಕೆ ಆಗದ ಹೆಸರು ಇಡೋದೆಲ್ಲ ಬೇಡ. ಓಲ್ಡ್ ಈಸ್ ಗೋಲ್ಡ್, ಚಂದದ ಓಲ್ಡ್ ಮಾದರಿಯ ಹೆಸರುಗಳನ್ನು ಸೂಚಿಸಿ ಅನ್ನುವಿರ. "ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ, ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ" ಈ ಸಾಲುಗಳಲ್ಲಿ ಆರು ಹೆಸರುಗಳಿವೆ. ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಿ.
(7 / 8)
ದ್ವಾಪರ ಹಾಡಿಗೆ ಅಭಿಮಾನಿಗಳು ಖುಷಿಗೊಂಡಿದ್ದಾರೆ. ವಿಶೇಷವಾಗಿ ಈ ಹಾಡಿನ ಸಾಹಿತ್ಯ ಇಷ್ಟಪಟ್ಟಿದ್ದಾರೆ. "ಒಂದೇ ಒಂದು ಪರ ಬಾಷೆ ಬಳಸದೆ ಬಂದಂತ ಅದ್ಬುತ ಕನ್ನಡ ಸಾಹಿತ್ಯದ ಹಾಡು" ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
(8 / 8)
ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ನನ್ನನ್ನೇ ನೋಡಲು ಬಂದ ರಾಧಿಕೆ ಎಂಬ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಹಿಂದೆ ಚಿನ್ನಮ್ಮ ಹಾಡು ಟ್ರೆಂಡ್ ಆಗಿತ್ತು. ಇದೀಗ ದ್ವಾಪರ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ರೀಲ್ಸ್ ಮಾಡುವವರೂ ಹೆಚ್ಚಾಗಿದ್ದಾರೆ. ಇದೇ ಆಗಸ್ಟ್ 15ರಂದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇತರ ಗ್ಯಾಲರಿಗಳು