ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shamlee: ಬಾಲನಟಿಯಾಗಿ ದೊರೆತ ಯಶಸ್ಸು ನಾಯಕಿಯಾಗಿ ದೊರೆಯಲಿಲ್ಲ; ಎಲ್ಲಿ ಹೋದ್ರು ಮತ್ತೆ ಹಾಡಿತು ಕೋಗಿಲೆ ಸಿನಿಮಾದ ಮುದ್ದು ನಟಿ ಬೇಬಿ ಶಾಮಿಲಿ?

Shamlee: ಬಾಲನಟಿಯಾಗಿ ದೊರೆತ ಯಶಸ್ಸು ನಾಯಕಿಯಾಗಿ ದೊರೆಯಲಿಲ್ಲ; ಎಲ್ಲಿ ಹೋದ್ರು ಮತ್ತೆ ಹಾಡಿತು ಕೋಗಿಲೆ ಸಿನಿಮಾದ ಮುದ್ದು ನಟಿ ಬೇಬಿ ಶಾಮಿಲಿ?

  • ಒಂದು ಸಮಯದಲ್ಲಿ ಆ ಮುದ್ದು ಹುಡುಗಿ ಕನ್ನಡ ಸಿನಿಮಾಗಳಲ್ಲಿ ಬಹಳ ಫೇಮಸ್.‌ ಬೇಬಿ ಶಾಮಿಲಿ ಯಾವುದಾದರೂ ಸಿನಿಮಾದಲ್ಲಿ ಇದ್ದಾರೆ ಎಂದರೆ ಆ ಸಿನಿಮಾದಲ್ಲಿ ಮನರಂಜನೆಗೆ ಸ್ವಲ್ಪವೂ ಕೊರತೆ ಇಲ್ಲ ಎಂದೇ ಅರ್ಥ.

ಶಾಮಿಲಿ ಶರತ್‌ ಬಾಬು ಪುತ್ರಿ ಎಂದು ಬಹಳ ಮಂದಿ ತಪ್ಪು ತಿಳಿದಿದ್ಧಾರೆ. ಆಕೆಯ ತಂದೆ ಬಾಬು ತಾಯಿ ಆಲಿಸ್.‌ 10 ಜುಲೈ 1987 ರಂದು ಶಾಲಿನಿ ಚೆನ್ನೈನಲ್ಲಿ ಜನಿಸಿದರು. 
icon

(1 / 18)

ಶಾಮಿಲಿ ಶರತ್‌ ಬಾಬು ಪುತ್ರಿ ಎಂದು ಬಹಳ ಮಂದಿ ತಪ್ಪು ತಿಳಿದಿದ್ಧಾರೆ. ಆಕೆಯ ತಂದೆ ಬಾಬು ತಾಯಿ ಆಲಿಸ್.‌ 10 ಜುಲೈ 1987 ರಂದು ಶಾಲಿನಿ ಚೆನ್ನೈನಲ್ಲಿ ಜನಿಸಿದರು. (PC: Shamlee Facebook)

ಶಾಮಿಲಿ ಅಕ್ಕ ಶಾಲಿನಿ ಕೂಡಾ ಖ್ಯಾತ ನಟಿ. ಶಾಲಿನಿ ಕೂಡಾ ಬಾಲನಟಿಯಾಗಿ ಕೆಲವೊಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಕ್ಕನ ಮೂಲಕವೇ ಶಾಮಿಲಿ ಕೂಡಾ ಸಿನಿಮಾರಂಗಕ್ಕೆ ಬಂದರು. 
icon

(2 / 18)

1989ರಲ್ಲಿ ತೆರೆ ಕಂಡ ವಿಜಯಕಾಂತ್‌ ಅಭಿನಯದ ರಾಜನಾದೈ ಎಂಬ ತಮಿಳು ಸಿನಿಮಾ ಮೂಲಕ ಶಾಮಿಲಿ ಸಿನಿಮಾ ಪಯಣ ಆರಂಭಿಸಿದರು. ಇದಾದ ನಂತರ ತೆಲುಗಿನ ಮಗಾಡು ಸಿನಿಮಾದಲ್ಲಿ ನಟಿಸಿದರು. ಶಾಮಿಲಿ ಅವರ ಮೂರನೇ ಸಿನಿಮಾವೇ ಅಂಜಲಿ. 
icon

(3 / 18)

ತಮ್ಮ ವೃತ್ತಿ ಜೀವನದಲ್ಲಿ ಶಾಮಿಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ, ಚಿರಂಜೀವಿ, ಡಾ. ವಿಷ್ಣುವರ್ಧನ್‌, ಅಂಬರೀಶ್‌, ಶ್ರೀಧರ್‌, ನಂದಮೂರಿ ಬಾಲಕೃಷ್ಣ, ಜೂಲಿ ಲಕ್ಷ್ಮಿ ಸೇರಿದಂತೆ ಅನೇಕ ನಟ ನಟಿಯರೊಂದಿಗೆ ನಟಿಸಿದ್ದಾರೆ. 
icon

(4 / 18)

ಮಣಿರತ್ನಂ ನಿರ್ದೇಶನದ ಅಂಜಲಿ  ಸಿನಿಮಾದಲ್ಲಿ ಶಾಮಿಲಿ ನಟನೆಯನ್ನು ಎಂದಿಗು ಮರೆಯಲು ಸಾಧ್ಯವೇ ಇಲ್ಲ. ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಮಗುವಿನ ಪಾತ್ರದಲ್ಲಿ ಶಾಮಿಲಿ ನಟಿಸಿದ್ದರು. 
icon

(5 / 18)

ಅಂಜಲಿ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಕೂಡಾ ದೊರೆತಿತ್ತು. ಜೊತೆಗೆ ಶಾಮಿಲಿಗೆ ಆ  ಸಿನಿಮಾ ನಂತರ ಚಿತ್ರರಂಗದಲ್ಲಿ ಆಫರ್‌ಗಳು ಹೆಚ್ಚಾದವು. 
icon

(6 / 18)

ಮಲಯಾಳಂನ ಮಲೊಟ್ಟಿ, ಪೂಕಳಮ್‌ ವಾರವೈ, ಕಿಲುಕಂಪೆಟ್ಟಿ, ತಮಿಳಿನ ದುರ್ಗಾ, ಸಿಂದೂರದೇವಿ, ಶಿವಶಂಕರಿ, ಚಿನ್ನ ಕಣ್ಣಮ್ಮ, ಸಬ್‌ ಸೆ ಬಡಾ ಮವಾಲಿ, ತೆಲುಗಿನ ಕಿಲ್ಲರ್‌, ಜಗದೇಕ ವೀರುಡು ಅತಿಲೋಕ ಸುಂದರಿ, ನಾಗಬಾಲ, ಜೋಕರ್‌ ಸೇರಿ ಅನೇಕ ಸಿನಿಮಾಗಳಲ್ಲಿ ಶಾಮಿಲಿ ನಟಿಸಿದ್ದಾರೆ. 
icon

(7 / 18)

ಕನ್ನಡದಲ್ಲಿ ಶಾಮಿಲಿ ಮೊದಲು ನಟಿಸಿದ್ದು ಮತ್ತೆ ಹಾಡಿತು ಕೋಗಿಲೆ ಚಿತ್ರದಲ್ಲಿ. ಈ ಸಿನಿಮಾದಲ್ಲಿ ಡಾ ವಿಷ್ಣುವರ್ಧನ್‌ ದತ್ತು ಪುತ್ರಿ ಪಲ್ಲವಿ ಪಾತ್ರದಲ್ಲಿ ಶಾಮಿಲಿ ನಟನೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು. 
icon

(8 / 18)

ಬಾಲನಟಿಯಾಗಿ ದೊಡ್ಡ ಯಶಸ್ಸು ಕಂಡಿದ್ದ ಬೇಬಿ ಶಾಮಿಲಿ ನಾಯಕಿಯಾಗಿ ಮಾತ್ರ ಯಶಸ್ಸು ಗಳಿಸಲಿಲ್ಲ. ಇದರ ಬಗ್ಗೆ ಆಕೆಯ ಅಭಿಮಾನಿಗಳಿಗೆ ಬೇಸರ ಇದೆ. 
icon

(9 / 18)

1998 ರಲ್ಲಿ ತೆರೆ ಕಂಡ ಜಗದೀಶ್ವರಿ ಸಿನಿಮಾ ನಂತರ ಶಾಮಿಲಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. ಹಾಗೇ 2000ರಲ್ಲಿ ಕಂಡುಕೊಂಡೇನ್‌ ಕಂಡುಕೊಂಡೇನ್‌ ತಮಿಳು ಸಿನಿಮಾ ನಂತರ ಶಾಮಿಲಿ ಚಿತ್ರರಂಗದಿಂದ ಬ್ರೇಕ್‌ ಪಡೆದರು. 
icon

(10 / 18)

9 ವರ್ಷಗಳ ಗ್ಯಾಪ್‌ ನಂತರ (2009) ರಲ್ಲಿ ಶಾಮಿಲಿ ಸಿನಿಮಾರಂಗಕ್ಕೆ ನಾಯಕಿಯಾಗಿ ಕಮ್‌ ಬ್ಯಾಕ್‌ ಮಾಡಿದರು. ಸಿದ್ದಾರ್ಥ್‌ ಜೊತೆ ಓಯ್‌ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದರು. ಆದರೆ ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಸಕ್ಸಸ್‌ ತಂದುಕೊಡಲಿಲ್ಲ. 
icon

(11 / 18)

ನಂತರ ಮಲಯಾಳಂನ ವಾಲೆಮ್‌ ತಿಟ್ಟೈ ಪೂಲೆಮ್‌ ತಿಟ್ಟೈ, ತಮಿಳಿನ ವೀರ ಶಿವಾಜಿ, ತೆಲುಗಿನ ಅಮ್ಮಮ್ಮಗಾರಿಲ್ಲು ಸಿನಿಮಾಗಳಲ್ಲಿ ನಟಿಸಿದರು. ಆದರೆ ಈ ಯಾವ ಚಿತ್ರಗಳೂ ಆಕೆಗೆ ನಾಯಕಿಯ ಪಟ್ಟ ತಂದುಕೊಡಲಿಲ್ಲ. 
icon

(12 / 18)

ಸದ್ಯಕ್ಕೆ ಶಾಮಿಲಿ ನಟನೆಯಿಂದ ದೂರ ಉಳಿದಿದ್ದಾರೆ. ಸಿಂಗಪೂರ್‌ನಲ್ಲಿ ಚಿತ್ರ ನಿರ್ಮಾಣದ  ತರಬೇತಿ ಪಡೆದಿದ್ದಾರೆ. ಜೊತೆಗೆ ಪೇಂಟಿಂಗ್‌ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. 
icon

(13 / 18)

ತಾವು ಮಾಡಿರುವ ಪೇಂಟಿಂಗ್‌ಗಳ ಫೋಟೋಗಳನ್ನು ಶಾಮಿಲಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(14 / 18)

ತಾವು ಮಾಡಿರುವ ಪೇಂಟಿಂಗ್‌ಗಳ ಫೋಟೋಗಳನ್ನು ಶಾಮಿಲಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಶಾಮಿಲಿ ಚೆನ್ನೈನಲ್ಲಿ ಅನೇಕ ಬಾರಿ ತಾವು ಮಾಡಿರುವ ಪೇಂಟಿಂಗ್‌ಗಳ ಎಕ್ಸಿಬಿಷನ್‌ ಕೂಡಾ ಏರ್ಪಡಿಸಿದ್ದಾರೆ. 
icon

(15 / 18)

ಶಾಮಿಲಿ ಚೆನ್ನೈನಲ್ಲಿ ಅನೇಕ ಬಾರಿ ತಾವು ಮಾಡಿರುವ ಪೇಂಟಿಂಗ್‌ಗಳ ಎಕ್ಸಿಬಿಷನ್‌ ಕೂಡಾ ಏರ್ಪಡಿಸಿದ್ದಾರೆ. 

ತಮಿಳಿನ ಖ್ಯಾತ ನಟ ಅಜಿತ್‌, ಶಾಮಿಲಿಗೆ ಬಾವ ಆಗಬೇಕು. ಇವರ ಸಹೋದರಿ ಶಾಲಿನಿ,   ನಟ ಅಜಿತ್‌ ಅವರನ್ನು 2000ರಲ್ಲಿ ಮದುವೆಯಾಗಿದ್ದಾರೆ. 
icon

(16 / 18)

ಅಕ್ಕ ಶಾಲಿನಿ ಹಾಗೂ ಅಣ್ಣ ರಿಚರ್ಡ್‌ ರಿಶಿ ಜೊತೆ ಶಾಮಿಲಿ. ರಿಚರ್ಡ್‌ ಕೂಡಾ ನಟನಾಗಿ ಹೆಸರು ಮಾಡಿದ್ದಾರೆ. ಕನ್ನಡದ ಬೆಂಕಿ ಬಿರುಗಾಳಿ ಸಿನಿಮಾದಲ್ಲಿ ರಿಚರ್ಡ್‌ ನಟಿಸಿದ್ದಾರೆ. 
icon

(17 / 18)

ಶಾಮಿಲಿ ಸಿನಿಮಾಗಳಿಂದ ದೂರ ಉಳಿದಿದ್ದರೂ ಆ ಮುದ್ದು ಮೊಗವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಶಾಮಿಲಿ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಆಕೆಗೆ ಮೊದಲಿನಂತೆ ಯಶಸ್ಸು ದೊರೆಯಲಿ ಎಂಬುದೇ ನಮ್ಮ ಹಾರೈಕೆ. 
icon

(18 / 18)

IPL_Entry_Point

ಇತರ ಗ್ಯಾಲರಿಗಳು