Dr Rajkumar: ಡಾ. ರಾಜ್‌ ನಟಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ ಅಲ್ಲ; ಅಣ್ಣಾವ್ರ ಬಗ್ಗೆ ಎಲ್ಲರಿಗೂ ಗೊತ್ತಿರದ ಸ್ವಾರಸ್ಯಕರ ವಿಚಾರಗಳು ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dr Rajkumar: ಡಾ. ರಾಜ್‌ ನಟಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ ಅಲ್ಲ; ಅಣ್ಣಾವ್ರ ಬಗ್ಗೆ ಎಲ್ಲರಿಗೂ ಗೊತ್ತಿರದ ಸ್ವಾರಸ್ಯಕರ ವಿಚಾರಗಳು ಇಲ್ಲಿವೆ

Dr Rajkumar: ಡಾ. ರಾಜ್‌ ನಟಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ ಅಲ್ಲ; ಅಣ್ಣಾವ್ರ ಬಗ್ಗೆ ಎಲ್ಲರಿಗೂ ಗೊತ್ತಿರದ ಸ್ವಾರಸ್ಯಕರ ವಿಚಾರಗಳು ಇಲ್ಲಿವೆ

  • ಏಪ್ರಿಲ್‌ 24 ಡಾ. ರಾಜ್‌ಕುಮಾರ್‌ ಅವರ 94ನೇ ಹುಟ್ಟುಹಬ್ಬ. ವರನಟ,  ಅಣ್ಣಾವ್ರು ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ರಾಜಣ್ಣನವರ ಜೀವನ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ ಅನೇಕ ಸ್ವಾರಸ್ಯಕರ ವಿಚಾರಗಳಿವೆ. ಆದರೆ ಇದೆಲ್ಲಾ ಬಹಳ ಜನರಿಗೆ ತಿಳಿದಿಲ್ಲ. ರಾಜ್‌ಕುಮಾರ್‌ ಅವರ ಬಗ್ಗೆ ಕೆಲವೊಂದು ಸ್ವಾರಸ್ಯಕರ ವಿಚಾರಗಳು ಇಲ್ಲಿವೆ. 

ಎಲ್ಲರಿಗೂ ತಿಳಿದಿರುವಂತೆ ಡಾ. ರಾಜ್‌ಕುಮಾರ್‌ ನಟಿಸಿದ ಮೊದಲ ಸಿನಿಮಾ ಬೇಡರ ಕಣ್ಣಪ್ಪ. ಆದರೆ ಅದಕ್ಕೂ ಮುನ್ನ ಅವರು 1942ರಲ್ಲಿ ತೆರೆ ಕಂಡ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು. 
icon

(1 / 13)

(PC: Dr Rajkumar Fans page FB)

ಭಕ್ತಪ್ರಹ್ಲಾದ ಸಿನಿಮಾ ಬಿಡುಗಡೆ ಆಗಿ ಕೆಲವು ವರ್ಷಗಳ ಬಳಿಕ ಶ್ರೀನಿವಾಸ ಕಲ್ಯಾಣ ಎಂಬ ಸಿನಿಮಾದಲ್ಲಿ ರಾಜ್‌ಕುಮಾರ್‌ ಸಪ್ತ ಋಷಿಗಳಲ್ಲಿ ಒಬ್ಬರಾಗಿ ನಟಿಸಿದ್ದರು. ಕಣ್ಣು ಮಿಟುಕಿಸುವಷ್ಟರಲ್ಲಿ ನನ್ನ ಪಾತ್ರ ತೆರೆ ಮೇಲೆ ಕಾಣಿಸಿಕೊಂಡು ಮರೆಯಾಗುತ್ತದೆ ಎಂದು ಡಾ. ರಾಜ್‌ಕುಮಾರ್‌ ಕೆಲವೊಂದು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 
icon

(2 / 13)

ಸಂಪತ್ತಿಗೆ ಸವಾಲ್‌ ಚಿತ್ರದ ಯಾರೇ ಕೂಗಾಡಲೇ ಹಾಡು ಅಣ್ಣಾವ್ರು ಹಾಡಿದ ಮೊದಲ ಸಿನಿಮಾ ಗೀತೆ ಎಂಬ ಮಾತಿದೆ, ಆದರೆ ಅದು ತಪ್ಪು. ಅದಕ್ಕೂ ಮುನ್ನ ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ಅವರು ತುಂಬಿತು ಮನವ ಎಂಬ ಹಾಡನ್ನು ಹಾಡಿದ್ದರು. 
icon

(3 / 13)

ಅಣ್ಣಾವ್ರ ಹಿಟ್‌ ಸಿನಿಮಾಗಳಲ್ಲಿ ಹಾಲು-ಜೇನು ಕೂಡಾ ಒಂದು. ಆದರೆ ಈ ಚಿತ್ರದಲ್ಲಿ ಮೊದಲು ಅನಂತ್‌ ನಾಗ್‌ ಹಾಗೂ ಲಕ್ಷ್ಮಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದಲ್ಲಿ ರಾಜ್‌ಕುಮಾರ್‌ ಹಾಗೂ ಮಾಧವಿ ನಟಿಸಿದರು. 
icon

(4 / 13)

ಅಣ್ಣಾವ್ರ ಮತ್ತೊಂದು ಹಿಟ್‌ ಸಿನಿಮಾ ಶಂಕರ್‌-ಗುರು ಸಿನಿಮಾಗೆ ಮೊದಲು ಮುಗಿಯದ ಮಾತು ಎಂದು ಹೆಸರಿಡಲಾಗಿತ್ತು. ಆದರೆ ಇದು ನಂತರ ಶಂಕರ್‌ - ಗುರು ಎಂದು ಬದಲಾಗಿದೆ. 
icon

(5 / 13)

ಅಣ್ಣಾವ್ರ ತಾಯಿ ನಿಧನರಾದಾಗ, ಇನ್ಮುಂದೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಪ್ರೀತಿಗೆ ಸೋತು ಅವರು ಮೂರು ವರ್ಷಗಳ ಬಳಿಕ ಮತ್ತೆ ಜೀವನಚೈತ್ರ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆಗೆ ವಾಪಸಾದರು. 
icon

(6 / 13)

ರಾಜ್‌ಕುಮಾರ್‌ ಹಾಗೂ ಮಾಧವಿ ಅಭಿನಯದ ಭಾಗ್ಯದಲಕ್ಷ್ಮಿ ಬಾರಮ್ಮ ಚಿತ್ರದ ಯಾವ ಕವಿಯು ಬರೆಯಲಾರ ಒಲವಿನಿಂದ.. ಹಾಡು ಅಸಲಿಗೆ ಚಿ. ಉದಯಶಂಕರ್‌ ಅವರು ಅಣ್ಣಾವ್ರಿಗಾಗಿ ಬರೆದ ಹಾಡು. ಆದರೆ ನಂತರ ಈ ಹಾಡನ್ನು ಸಂಗೀತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್‌, ನಾಯಕಿಯನ್ನು ವರ್ಣಿಸಲು ಸಿನಿಮಾದಲ್ಲಿ ಬಳಸಿಕೊಂಡರು. 
icon

(7 / 13)

ಚಿತ್ರರಂಗದ ಆರಂಭದ ದಿನಗಳಲ್ಲಿ ನನ್ನ ಸಿನಿಮಾಗಳನ್ನು ನೋಡುವಾಗ ನಾನು ಬಹಳ ತಪ್ಪು ಮಾಡಿದ್ದೇನೆ. ಇತರ ಕಲಾವಿದರು ನನಗಿಂತ ಉತ್ತಮವಾಗಿ ನಟಿಸುತ್ತಿದ್ದಾರೆ ಎಂಬ ಭಯ ಅಣ್ಣಾವ್ರಿಗೆ ಕಾಡಿತ್ತಂತೆ. ಈ ವಿಚಾರವನ್ನು ಅವರು ಸಿನಿಮಾ ನಿರ್ದೇಶಕರ ಬಳಿ ಕೂಡಾ ಹೇಳಿಕೊಂಡಿದ್ದರಂತೆ. 
icon

(8 / 13)

ಬೇಡರ ಕಣ್ಣಪ್ಪ ಚಿತ್ರದ ಶಿವಪ್ಪ ಕಾಯೋ ತಂದೆ ಹಾಡನ್ನು ಚಿತ್ರೀಕರಣ ಮಾಡುವಾಗ ಚಳಿಗಾಲವಾಗಿದ್ದರಿಂದ ಶೂಟಿಂಗ್‌ ಸಮಯದಲ್ಲಿ ಎಲ್ಲರೂ ಬೆಚ್ಚಗಿನ ಬಟ್ಟ ಧರಿಸಿದ್ದರಂತೆ. ಆದರೆ ಅಣ್ಣಾವ್ರು ಮಾತ್ರ ಪಾತ್ರದ ಕಾಸ್ಟ್ಯೂಮ್‌ನಲ್ಲಿ ಆ ಚಳಿಯಲ್ಲಿ ಸುಮಾರು 14 ದಿನಗಳ ಕಾಲ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರಂತೆ. 
icon

(9 / 13)

ಜೀವನಚೈತ್ರ ಸಿನಿಮಾದ ನಾದಮಯ ಹಾಡನ್ನು ಹಿಮಾಲಯದಲ್ಲಿ ಚಿತ್ರೀಕರಣ ಮಾಡಿದರೆ ಸೂಕ್ತ ಎಂದು ರಾಜ್‌ಕುಮಾರ್‌, ನಿರ್ದೇಶಕ ದೊರೈ ಭಗವಾನ್‌ ಅವರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರಂತೆ. ಆದರೆ ಕಾರಣಾಂತರಗಳಿಂದ ನಿರ್ದೇಶಕರಿಗೆ ಅಲ್ಲಿ ಹೋಗಲು ಸಾಧ್ಯವಾಗದ ಕಾರಣ, ಸ್ವತ: ಅಣ್ಣಾವ್ರು ಚಿತ್ರತಂಡದ ಕೆಲವೇ ಕೆಲವರೊಂದಿಗೆ ಹಿಮಾಲಯಕ್ಕೆ ತೆರಳಿ ಚಿತ್ರೀಕರಣ ಮಾಡಿ ಬಂದಿದ್ದಾರೆ. 
icon

(10 / 13)

ತಮಗಾಗಿ ತಮ್ಮ ಕುಟುಂಬದವರು ಹುಟ್ಟುಹಬ್ಬಕ್ಕಾಗಿ ಕೊಡಿಸಿದ್ದ ಮರ್ಸಿಡಿಸ್‌ ಬೆನ್ಜ್‌ ಕಾರಿನ ಬಗ್ಗೆ ಅಣ್ಣಾವ್ರಿಗೆ ಬಹಳ ಪ್ರೀತಿ ಅಂತೆ. ಎಷ್ಟು ಪ್ರೀತಿ ಎಂದರೆ ಆ ಕಾರಿನ ಮೇಲೆ ಸ್ವಲ್ಪ ಧೂಳು ಇದ್ದರೂ ತಮ್ಮ ಪಂಚೆಯಿಂದಲೇ ಒರೆಸುತ್ತಿದ್ದರಂತೆ. 
icon

(11 / 13)

ನಾನು ಇಂದು ಏನಾದರೂ ಸಾಧಿಸಿದ್ದರೆ, ಜನರ ಪ್ರೀತಿ ಗಳಿಸಿದ್ದರೆ ಅದು ನನ್ನ ತಂದೆ ತಾಯಿ ಇಬ್ಬರ ಆಶೀರ್ವಾದ. ಅವರು ನನಗೆ ಕಲಿಸಿದ ನಡತೆ, ಶಿಸ್ತು, ಸದ್ಗುಣಗಳನ್ನು ಎಂದಿಗೂ ಪಾಲಿಸುತ್ತಿದ್ದೆ ಎಂದು ಅಣ್ಣಾವ್ರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 1978 ರಲ್ಲಿ ರಾಜ್‌ಕುಮಾರ್‌ ಅವರಿಗೆ ವಿದೇಶ ಪ್ರವಾಸ ಹೋಗುವ ಅವಕಾಶ ಸಿಕ್ಕಾಗ ತಮ್ಮ ತಂದೆ ತಾಯಿಯನ್ನೂ ಜೊತೆಗೆ ಕರೆದೊಯ್ದಿದರಂತೆ. ಇದನ್ನು ಪುನೀತ್‌ ರಾಜ್‌ಕುಮಾರ್‌ ಕೆಲವೊಂದು ಇಂಟರ್‌ವ್ಯೂನಲ್ಲಿ ಹೇಳಿದ್ದಾರೆ. 
icon

(12 / 13)

ಗಾಜನೂರಿನಲ್ಲಿ ಒಂದು ಆಲದ ಮರದ ಕೆಳಗೆ ರಾಜ್‌ಕುಮಾರ್‌ ಅವರ ತಂದೆ ಯಾವಾಗಲೂ ಧ್ಯಾನ ಮಾಡುತ್ತಿದ್ದರು. ಅಣ್ಣಾವ್ರು ಕೂಡಾ ಅಲ್ಲಿಗೆ ಹೋದಾಗಲೆಲ್ಲಾ  ಆ ಮರದ ಕೆಳಗೆ ಕುಳಿತುಕೊಂದು ‍ಧ್ಯಾನ ಮಾಡುತ್ತಿದ್ದರು. ಜೋರಾಗಿ ಮಾತನಾಡುತ್ತಿದ್ದರು, ನಾಟಕದ ಡೈಲಾಗ್‌ಗಳನ್ನು ಹೇಳುತ್ತಿದ್ದರು. ಆದರೆ ಸಂಜೆ ಆಗುತ್ತಿದ್ದಂತೆ ಮೆಲುದನಿಯಲ್ಲಿ ಮಾತನಾಡುತ್ತಿದ್ದರು. ಏಕೆ ಎಂದು ಕೇಳಿದರೆ. ಈ ಆಲದ ಮರದಲ್ಲಿ ಅನೇಕ ಪಕ್ಷಿಗೂಡುಗಳಿವೆ. ನಾವು ಜೋರಾಗಿ ಮಾತನಾಡಿದರೆ ಪಕ್ಷಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಿದ್ದಾಗಿ ಅವರ ಕಾರಿನ ಡ್ರೈವರ್‌ ರವಿ ಹೇಳಿದ್ದಾರೆ. 
icon

(13 / 13)

ಇತರ ಗ್ಯಾಲರಿಗಳು