ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭೂಮಿಗೆ ಬಂದ ಭಗವಂತ ಧಾರಾವಾಹಿಯ ಶಿವಪ್ರಸಾದ್‌ ಮಗಳೀಗ ಸಿನಿಮಾ ನಾಯಕಿ; ಕಾಗದ ಚಿತ್ರದಲ್ಲಿ ಅಂಕಿತಾ ಜಯರಾಮ್‌ ಹೀರೋಯಿನ್

ಭೂಮಿಗೆ ಬಂದ ಭಗವಂತ ಧಾರಾವಾಹಿಯ ಶಿವಪ್ರಸಾದ್‌ ಮಗಳೀಗ ಸಿನಿಮಾ ನಾಯಕಿ; ಕಾಗದ ಚಿತ್ರದಲ್ಲಿ ಅಂಕಿತಾ ಜಯರಾಮ್‌ ಹೀರೋಯಿನ್

  • ಕಾಗದ ಸಿನಿಮಾ, 2005ರಲ್ಲಿ ನಡೆದ ಪ್ರೇಮಕಥೆ. ಯುವಜನತೆ ಕೈಯಲ್ಲಿ ಮೊಬೈಲ್‌ ಬಂದಿರದ, ಕಾಗದದಲ್ಲೇ ಪ್ರೀತಿ ವಿನಿಮಯವಾಗುತ್ತಿದ್ದ ಕಾಲಘಟ್ಟದ ಕಥೆ. ಪರಸ್ಪರ ದ್ವೇಷಿಸುವ ಎರಡು ಹಳ್ಳಿಗಳ ನಡುವೆ ಅರಳಿದ ಪ್ರೇಮಕಥೆ ಕೂಡ  ಕಾಗದದಲ್ಲಿದೆ. ಇದೀಗ ಇದೇ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಭೂಮಿಗೆ ಬಂದ ಭಗವಂತ ಚಿತ್ರದ ಪ್ರಣೀತಾ ಪಾತ್ರಧಾರಿ ಅಂಕಿತಾ ಅಮರ್‌ ಈ ಚಿತ್ರದ ನಾಯಕಿ.

ಅರುಣ್ ಕುಮಾರ್ ಆಂಜನೇಯ ಅವರ ನಿರ್ಮಾಣದಲ್ಲಿ ರಂಜಿತ್ ಅವರು ನಿರ್ದೇಶಿಸಿರುವ ಕಾಗದ ಚಿತ್ರ ಈ ವಾರ ಅಂದರೆ ಇದೇ ಜುಲೈ 5 ರಂದು ತೆರೆಗೆ ಬರುತ್ತಿದೆ.    
icon

(1 / 6)

ಕಾಗದ ಮೊಬೈಲ್ ಬರುವ ಮುಂಚೆ ನಡೆದ ಪ್ರೇಮಕಥೆ. 2005ರ ಕಾಲಘಟ್ಟದ ಕಥೆಯೂ ಕೂಡ. ಹಳ್ಳಿಹಳ್ಳಿಗಳ ನಡುವಿನ ವೈಷಮ್ಯದ ನಡುವೆ ಅರಳಿದ ಪ್ರೇಮಕಥೆಯೂ ಈ ಸಿನಿಮಾದಲ್ಲಿದೆ.   
icon

(2 / 6)

ಆದಿತ್ಯ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯರಾಗಿರುವ ಅಂಕಿತ ಜಯರಾಂ ಕಾಗದ ಚಿತ್ರದ ನಾಯಕಿ. 
icon

(3 / 6)

ಇನ್ನುಳಿದಂತೆ ನೇಹಾ ಪಾಟೀಲ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲ ರಾಜ್ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. 
icon

(4 / 6)

ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ  ಪವನ್ ಗೌಡ ಸಂಕಲನ ಈ ಚಿತ್ರಕ್ಕಿದೆ.
icon

(5 / 6)

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಶಿವಪ್ರಸಾದ್‌ನ ಮಗಳು ಪ್ರಣೀತಾ ಪಾತ್ರದಲ್ಲಿ ಅಂಕಿತಾ ಜಯರಾಮ್‌ ನಟಿಸುತ್ತಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು