ದೀಪಿಕಾ ದಾಸ್ ನಟನೆಯ ಪಾರು ಪಾರ್ವತಿ ಸಿನಿಮಾ ಜನವರಿ 31ರಂದು ಬಿಡುಗಡೆ; ಕಾರಲ್ಲಿಯೇ ಎಂಟು ರಾಜ್ಯ ಸುತ್ತಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ
- Paru Parvathy Movie release date: ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ಪಾರು ಪಾರ್ವತಿ ಸಿನಿಮಾ ಇದೇ ಜನವರಿ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಕುರಿತು ಪ್ರಮುಖ ಅಪ್‌ಡೇಟ್ ಅನ್ನು ಚಿತ್ರತಂಡ ಹಂಚಿಕೊಂಡಿದೆ.

(1 / 6)
ಪಾರುಪಾರ್ವತಿ ಸಿನಿಮಾ: ಎಯ್ಟಿನ್ ಥರ್ಟಿನ್‌ಸಿಕ್ಸ್ ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದ ಸಿನಿಮಾ ಇದಾಗಿದೆ. "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ.
(2 / 6)
ಈ ಸಿನಿಮಾದ ಬಿಡುಗಡೆ ದಿನಾಂಕದ ಜತೆಗೆ "ಪಾರುಪಾರ್ವತಿ" ಚಿತ್ರದ ನಾಲ್ಕನೇ ಪ್ರಮುಖಪಾತ್ರಧಾರಿಯನ್ನು ಚಿತ್ರತಂಡ ಪರಿಚಯಿಸಿದೆ. ಆ ಪ್ರಮುಖ ಪಾತ್ರಧಾರಿ ಬೇರೆ ಯಾರು ಅಲ್ಲ. ಚಿತ್ರದಲ್ಲಿ ಎಂಟು ರಾಜ್ಯಗಳನ್ನು ಸುತ್ತಿದ ಕಾರು. ಈ ಕಾರಿಗೂ ಚಿತ್ರದ ಕಥೆಯಲ್ಲಿ ಪ್ರಮುಖ ಸ್ಥಾನವಿದೆ.
(3 / 6)

(4 / 6)
ಈ ಚಿತ್ರದ ಕುರಿತು ಚಿತ್ರತಂಡ ಹೆಚ್ಚಿನ ವಿವರ ನೀಡಿದೆ. " ನಮ್ಮ ಚಿತ್ರ ಮೂರು ಪ್ರಮುಖ ಪಾತ್ರಗಳ ಜೊತೆಗೆ ಸಾಗುತ್ತದೆ. ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಆಶ್ರಫ್ ಮೂರು ಪ್ರಮುಖ ಪಾತ್ರಧಾರಿಗಳು. ಇವರೊಟ್ಟಿಗೆ ಮತ್ತೊಂದು ಪ್ರಮುಖಪಾತ್ರಧಾರಿ ಎಂದರೆ ಅದು ಕಾರು. ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖಪಾತ್ರ ವಹಿಸುತ್ತದೆ" ಎಂದು ರೋಹಿತ್ ಕೀರ್ತಿ ಮಾಹಿತಿ ನೀಡಿದ್ದಾರೆ.
(5 / 6)
"ನಾನು ಮೊದಲೇ ತಿಳಿಸಿದಂತೆ ಇದೊಂದು ಪ್ರಯಾಣ ಹಾಗೂ ಅಡ್ವೆಂಚರ್ಸ್ ಕಥನ. ಆದರೆ ಈ ಚಿತ್ರದಲ್ಲಿ ಬರೀ ಪ್ರವಾಸ ಮಾತ್ರ ಇಲ್ಲ. ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನು ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಯಲ್ ನನ್ನ ಪಾತ್ರದ ಹೆಸರು" ಎಂದು ನಟಿ ದೀಪಿಕಾ ದಾಸ್ ಹೇಳಿದ್ದಾರೆ.
ಇತರ ಗ್ಯಾಲರಿಗಳು