Niveditha Gowda: ಈ ಕರ್ನಾಟಕದ ಕ್ವೀನ್ ಯಾರು ಅಂತ ಗೊತ್ತಾಯ್ತ? ನಿವೇದಿತಾ ಗೌಡರ ಹೊಸ ಫೋಟೋ ನೋಡಿ ಅಭಿಮಾನಿಗಳು ದಂಗು
- Niveditha Gowda: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೊಸ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ವಾಹ್ ಎಂದಿದ್ದಾರೆ. ಶ್ವೇತವಸ್ತ್ರದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೀವೇ ನನ್ನ ವಾಲ್‌ಪೇಪರ್, ಕರ್ನಾಟಕದ ಕ್ವೀನ್ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
- Niveditha Gowda: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೊಸ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ವಾಹ್ ಎಂದಿದ್ದಾರೆ. ಶ್ವೇತವಸ್ತ್ರದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೀವೇ ನನ್ನ ವಾಲ್‌ಪೇಪರ್, ಕರ್ನಾಟಕದ ಕ್ವೀನ್ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
(1 / 10)
ಬಿಗ್‌ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ನಿವೇದಿತಾ ಗೌಡ ಹೊಸ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ವಾಹ್ ಎಂದಿದ್ದಾರೆ. ಶ್ವೇತವಸ್ತ್ರದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೀವೇ ನನ್ನ ವಾಲ್‌ಪೇಪರ್, ಕರ್ನಾಟಕದ ಕ್ವೀನ್ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
(@sumanthpxl)(2 / 10)
ನಿವೇದಿತಾ ಗೌಡರ ನೀಳಕೇಶರಾಶಿ ಮೇಲೆ ಎಲ್ಲರಿಗೂ ಕಣ್ಣಿದೆ. ಬಿಗ್‌ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸಿದಾಗ ಇವರ ಮಗುವಿನಂತಹ ಮಾತು, ಉದ್ದವಾದ ಕೇಶರಾಶಿ ಎಲ್ಲರನ್ನೂ ಸೆಳೆದಿತ್ತು. ವಿಶೇಷವಾಗಿ ಇದು ಹಲವು ಬ್ರ್ಯಾಂಡ್‌ಗಳ ಕಣ್ಣು ಸೆಳೆದಿತ್ತು.
(3 / 10)
ನೀಳವಾದ ಕೇಶರಾಶಿ ಬೇಕೇ, ನಮ್ಮ ಶ್ಯಾಂಪು ಬಳಸಿ, ನಮ್ಮ ಸಾಬೂನು ಬಳಸಿ ಎಂದೆಲ್ಲ ನಿವೇದಿತಾ ಗೌಡರನ್ನು ರೂಪದರ್ಶಿಯಾಗಿಟ್ಟುಕೊಂಡು ಪ್ರಚಾರ ಮಾಡಲಾಯಿತು. ಇದೀಗ ಭಾರತದ ಪ್ರಮುಖ ಕಂಪನಿಯೊಂದರ ಶ್ಯಾಂಪೂ ಜಾಹೀರಾತಿನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದಾರೆ.
(4 / 10)
ಈ ಸಂದರ್ಭದಲ್ಲಿ ಮಾಡಿರುವ ಫೋಟೋಶೂಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದಾರೆ. ನೀವು ಕರ್ನಾಟಕದ ಕ್ವೀನ್, ನೀವು ನನ್ನ ವಾಲ್‌ಪೇಪರ್ ಎಂದೆಲ್ಲ ಉದ್ಘರಿಸಿದ್ದಾರೆ.
(5 / 10)
ಶ್ಯಾಂಪೂ ಜಾಹೀರಾತಿನ ವಿಡಿಯೋವನ್ನೂ ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ. ಒಟ್ಟಾರೆ ವಿಡಿಯೋ ಮತ್ತು ಫೋಟೋದಲ್ಲಿ ಚಂದನ್ ಶೆಟ್ಟಿ ಮಡದಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
(6 / 10)
ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಈಗ ಸಿನಿಮಾ ನಟಿಯೂ ಹೌದು. ಈಗ ಜಿಎಸ್‌ಟಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
(7 / 10)
ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಬಿಗ್‌ಬಾಸ್ ಗೊಂಬೆ ನಿವೇದಿತಾ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.
(8 / 10)
ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸುತ್ತಿದ್ದಾರೆ. ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ನೋಡಬಹುದು. ಈ ಸಿನಿಮಾಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
(9 / 10)
ನಿವೇದಿತಾ ಗೌಡರ ಹೊಸ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹಲವು ಕಾಮೆಂಟ್ ಮಾಡುತ್ತ ನಿವೇದಿತಾ ಗೌಡರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು