ರಾಮರಸ ಚಿತ್ರತಂಡದ ಜತೆಗೆ Bigg Boss Kannada 10 Winner ಕಾರ್ತಿಕ್ ಮಹೇಶ್ ಸಂಭ್ರಮದ ಗಣೇಶೋತ್ಸವ PHOTOS
- BBK 10 Winner Karthik Mahesh: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿರುವ ‘ರಾಮರಸ’ ಚಿತ್ರತಂಡದಿಂದ ಅದ್ದೂರಿಯಾಗಿ ನಾಗರಭಾವಿಯ ಜಿ ಅಕಾಡೆಮಿಯಲ್ಲಿ ಗಣೇಶನ ಪೂಜೆ ನೆರವೇರಿತು. ಈ ಸಂಭ್ರಮದ ಫೋಟೋ ಝಲಕ್ ಇಲ್ಲಿದೆ.
- BBK 10 Winner Karthik Mahesh: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿರುವ ‘ರಾಮರಸ’ ಚಿತ್ರತಂಡದಿಂದ ಅದ್ದೂರಿಯಾಗಿ ನಾಗರಭಾವಿಯ ಜಿ ಅಕಾಡೆಮಿಯಲ್ಲಿ ಗಣೇಶನ ಪೂಜೆ ನೆರವೇರಿತು. ಈ ಸಂಭ್ರಮದ ಫೋಟೋ ಝಲಕ್ ಇಲ್ಲಿದೆ.
(1 / 7)
ಗುರು ದೇಶಪಾಂಡೆ ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್ ನಿರ್ದೇಶನದ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿರುವ ‘ರಾಮರಸ’ ಚಿತ್ರತಂಡದಿಂದ ಅದ್ದೂರಿಯಾಗಿ ನಾಗರಭಾವಿಯ ಜಿ ಅಕಾಡೆಮಿಯಲ್ಲಿ ಗಣೇಶನ ಪೂಜೆ ನೆರವೇರಿತು.
(2 / 7)
ಬೆಳಗ್ಗೆ ಗಣಪತಿಯನ್ನು ತಂದು ವೈಭವವಾಗಿ ಪೂಜಿಸಲಾಯಿತು. ಆನಂತರ ಸಂಜೆ ಅಷ್ಟೇ ವೈಭವವಾಗಿ ವಿಸರ್ಜನೆಯನ್ನು ಮಾಡಲಾಯಿತು. ನಿರ್ಮಾಪಕ ಗುರು ದೇಶಪಾಂಡೆ, ನಿರ್ದೇಶಕ ಗಿರಿರಾಜ್, ನಾಯಕ ಕಾರ್ತಿಕ್ ಮಹೇಶ್ ಹಾಗೂ ಜಿ ಅಕಾಡೆಮಿಯಲ್ಲಿ ಅಭಿನಯ ಕಲಿತು ಈ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪೂಜಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
(3 / 7)
ಈ ಸಂಭ್ರಮದ ಬಗ್ಗೆ ಮಾತನಾಡಿರುವ ನಿರ್ಮಾಪಕ ಗುರು ದೇಶಪಾಂಡೆ, 'ನಾವು ಯಾವುದೇ ಒಂದು ಕೆಲಸ ಆರಂಭ ಮಾಡಬೇಕಾದರೂ ಗಣೇಶನ ಪೂಜೆ ಮಾಡೇ ಆರಂಭ ಮಾಡುತ್ತೇವೆ. ಗಣೇಶ ಆಧಿಪೂಜಿತ. ಈ ಬಾರಿ ನಮ್ಮ "ರಾಮರಸ" ತಂಡದಿಂದ ಅದ್ದೂರಿಯಾಗಿ ಗಣೇಶನ ಪೂಜೆ ನೆರವೇರಿಸಲಾಯಿತು" ಎಂದಿದ್ದಾರೆ.
(4 / 7)
ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ನಮ್ಮ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸೆಪ್ಟೆಂಬರ್ 12 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.
(5 / 7)
ಎರಡನೇ ಹಂತದ ಚಿತ್ರೀಕರಣಕ್ಕೂ ಮುನ್ನ ಗಣಪತಿ ಪೂಜೆ ಮಾಡಿರುವುದು ನಮ್ಮ ತಂಡದ ಎಲ್ಲರಿಗೂ ಸಂತೋಷವಾಗಿದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದರು.
(6 / 7)
‘ರಾಮರಸ’ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ನಿರ್ದೇಶನ, ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ.
ಇತರ ಗ್ಯಾಲರಿಗಳು