Chaitra J Achar: ಸಖತ್‌ ಫೋಟೋಸ್‌ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಚಿತ್ರಗಳನ್ನು ಕಣ್ತುಂಬಿಕೊಳ್ಳಿ-sandalwood news blink kannadda movie actress chaita j achar beautiful photos sapta sagaradache ello side b surabhi pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chaitra J Achar: ಸಖತ್‌ ಫೋಟೋಸ್‌ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Chaitra J Achar: ಸಖತ್‌ ಫೋಟೋಸ್‌ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

  • ಕನ್ನಡದ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮುತ್ತಿರುವ, ಇತ್ತೀಚೆಗೆ ಬ್ಲಿಂಕ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಜೆ ಆಚಾರ್‌ ಇದೀಗ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂಜನ್‌ ಕುಮಾರನ್‌ ಫೋಟೋಗ್ರಫಿ, ಚಂದನಾ ನಂಬಿಯಾನಾ ಸ್ಟೈಲಿಂಗ್‌ನಲ್ಲಿ ಇವರ ಫೋಟೋಗಳು ಸುಂದರವಾಗಿ ಮೂಡಿ ಬಂದಿವೆ.

ಕನ್ನಡದ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮುತ್ತಿರುವ ಚೈತ್ರಾ ಜೆ ಆಚಾರ್‌ ಇದೀಗ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿನಲ್ಲಿ ನಟಿಸಿದ್ದ ಚೈತ್ರಾ ಆಚಾರ್‌ ಅವರು ಇತ್ತೀಚಿಗೆ ಬ್ಲಿಂಕ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಅಂಜನ್‌ ಕುಮಾರನ್‌ ಫೋಟೋಗ್ರಫಿ, ಚಂದನಾ ನಂಬಿಯಾನಾ ಸ್ಟೈಲಿಂಗ್‌ನಲ್ಲಿ ಇವರ ಫೋಟೋಗಳು ಸುಂದರವಾಗಿ ಮೂಡಿ ಬಂದಿವೆ. 
icon

(1 / 12)

ಕನ್ನಡದ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮುತ್ತಿರುವ ಚೈತ್ರಾ ಜೆ ಆಚಾರ್‌ ಇದೀಗ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿನಲ್ಲಿ ನಟಿಸಿದ್ದ ಚೈತ್ರಾ ಆಚಾರ್‌ ಅವರು ಇತ್ತೀಚಿಗೆ ಬ್ಲಿಂಕ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಅಂಜನ್‌ ಕುಮಾರನ್‌ ಫೋಟೋಗ್ರಫಿ, ಚಂದನಾ ನಂಬಿಯಾನಾ ಸ್ಟೈಲಿಂಗ್‌ನಲ್ಲಿ ಇವರ ಫೋಟೋಗಳು ಸುಂದರವಾಗಿ ಮೂಡಿ ಬಂದಿವೆ. (anjankumarm (all photos))

ಹೊಸಬರ ಬ್ಲಿಂಕ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್‌ ನಟಿಸಿದ್ದರು. ಈ ಸಿನಿಮಾದ ಕುರಿತು ಸಕಾರಾತ್ಮಕ ಅಭಿಪ್ರಾಯ ಕೇಳಿಬರುತ್ತಿದೆ. ಈ ಸಿನಿಮಾದಲ್ಲಿ “ಸಖಿಯೇ ಸಖಿಯೇ” ಎಂಬ ಹಾಡು ಜನರ ಗಮನಸೆಳೆದಿದೆ. 
icon

(2 / 12)

ಚೈತ್ರಾ ಜೆ ಆಚಾರ್‌ ಆಗಾಗ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಣ್ಣ ನೋಟದಲ್ಲಿ, ಮುಖದಲ್ಲಿ ಭಾವನೆಗಳಲ್ಲಿ ಮಾತನಾಡುವಂತಹ ಪ್ರತಿಭಾನ್ವಿತೆ ಸೋಷಿಯಲ್‌ ಮೀಡಿಯಾದಲ್ಲಿ ಹಲವು ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.
icon

(3 / 12)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರದಲ್ಲಿ ನಾಯಕ ಮನುವಿಗೆ ಎರಡನೇ ಪ್ರೇಯಸಿಯಾಗಿ  ಚೈತ್ರಾ ಜೆ ಆಚಾರ್‌ ನಟಿಸಿದ್ದರು.
icon

(4 / 12)

ಇದೀಗ  ಅವರು ಅಪ್ಲೋಡ್‌ ಮಾಡಿರುವ ಹೊಸ ಫೋಟೋಗಳನ್ನು ನೋಡಿದ ಫ್ಯಾನ್ಸ್‌ ಬೆರಗಾಗಿದ್ದಾರೆ.  
icon

(5 / 12)

ಇದೀಗ  ಅವರು ಅಪ್ಲೋಡ್‌ ಮಾಡಿರುವ ಹೊಸ ಫೋಟೋಗಳನ್ನು ನೋಡಿದ ಫ್ಯಾನ್ಸ್‌ ಬೆರಗಾಗಿದ್ದಾರೆ.  

ಚೈತ್ರಾ ಜೆ ಆಚಾರ್‌ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಗಿಲ್ಕಿ ಚಿತ್ರದಲ್ಲೂ ಇವರು ನಟಿಸಿದ್ದಾರೆ. 
icon

(6 / 12)

ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಚೈತ್ರಾ ಆಚಾರ್‌ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು. 
icon

(7 / 12)

ಕಳೆದ ವರ್ಷ ಚೈತ್ರಾ ಆಚಾರ್‌  ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಎಂತಹ ಸವಾಲಿನ ಪಾತ್ರಗಳಿಗೂ ಸೈ ಎನಿಸುವ ಈ ಜಮಾನದ ನಟಿ ಇವರು.
icon

(8 / 12)

ಆ ದೃಶ್ಯ, ಗಿಲ್ಕಿಯಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋಗೆ ಆಯ್ಕೆಯಾಗಲು ಗಿಲ್ಕಿಯಂತಹ ಚಿತ್ರಗಳಲ್ಲಿ ನಟಿಸಿದ್ದು ಕಾರಣ ಎಂದು ಇವರು ಇತ್ತೀಚೆಗೆ ಹೇಳಿದ್ದಾರೆ. ಗಿಲ್ಕಿ ಚಿತ್ರದಲ್ಲಿ ನನ್ನ ನಟನೆ ರಕ್ಷಿತ್‌ ಶೆಟ್ಟಿ ನೋಡಿದ್ದರು. ಹೀಗಾಗಿ ಅವರಿಗೆ ನನ್ನ ಮೇಲೆ ಭರವಸೆ ಇತ್ತು ಎಂದಿದ್ದರು. 
icon

(9 / 12)

ಚೈತ್ರಾ ಜೆ ಆಚಾರ್‌ ಕನ್ನಡದ ಹಲವು ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಅಮ್ಮ ಹಾಡುವುದನ್ನು ಕೇಳುತ್ತ ಈಕೆಯೂ ಸಂಗೀತದ ಕುರಿತು ಆಸಕ್ತಿ ಬೆಳೆಸಿಕೊಂಡರು. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು. ಬಾಲ್ಯದಿಂದಲೇ ಸಂಗೀತ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. 
icon

(10 / 12)

ಇವರು ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡು ಸಖತ್‌ ಫೇಮಸ್‌ ಆಗಿತ್ತು. ಒಟ್ಟಾರೆ ಸ್ಯಾಂಡಲ್‌ವುಡ್‌ನ ಭರವಸೆಯ ನಟಿಯಾಗಿ ಚೈತ್ರಾ ಜೆ ಆಚಾರ್‌ ಗಮನ ಸೆಳೆಯುತ್ತಿದ್ದಾರೆ. ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಅಭಿಮಾನಿಗಳ ನೆಚ್ಚಿನ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ. 
icon

(11 / 12)

ಸಿನಿಮಾ, ಒಟಿಟಿ, ಧಾರಾವಾಹಿ ಸೇರಿದಂತೆ ಮನರಂಜನೆ ಕ್ಷೇತ್ರದ ಎಲ್ಲಾ ಅಪ್‌ಡೇಟ್‌ಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಪಡೆಯಿರಿ. 
icon

(12 / 12)

ಇತರ ಗ್ಯಾಲರಿಗಳು