Spandana Vijay: ಯಾವ ಮಸಣಿ ಕಣ್ಣು ಬಿತ್ತಮ್ಮ ಈ ಜೋಡಿ ಮ್ಯಾಲೆ? ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಫೋಟೋ ಗ್ಯಾಲರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Spandana Vijay: ಯಾವ ಮಸಣಿ ಕಣ್ಣು ಬಿತ್ತಮ್ಮ ಈ ಜೋಡಿ ಮ್ಯಾಲೆ? ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಫೋಟೋ ಗ್ಯಾಲರಿ

Spandana Vijay: ಯಾವ ಮಸಣಿ ಕಣ್ಣು ಬಿತ್ತಮ್ಮ ಈ ಜೋಡಿ ಮ್ಯಾಲೆ? ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಫೋಟೋ ಗ್ಯಾಲರಿ

ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡ ನೋವು ಮಾಸುವ ಮುನ್ನವೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ, ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಉಂಟು ಮಾಡಿದೆ. 

ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದೇಶ ಪ್ರವಾಸದಲ್ಲಿರುವಾಗಲೇ ಸ್ಪಂದನಾಗೆ ಹೃದಯಾಘಾತವಾಗಿದೆ. 
icon

(1 / 14)

ಸ್ಪಂದನಾ, ನಿವೃತ್ತ ಪೊಲೀಸ್‌ ಅಧಿಕಾರಿ ಬಿಕೆ ಶಿವರಾಮ್‌ ಅವರ ಪುತ್ರಿ
icon

(2 / 14)

ಸ್ಪಂದನಾ, ನಿವೃತ್ತ ಪೊಲೀಸ್‌ ಅಧಿಕಾರಿ ಬಿಕೆ ಶಿವರಾಮ್‌ ಅವರ ಪುತ್ರಿ

ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಇಬ್ಬರದ್ದೂ ಲವ್‌ ಮ್ಯಾರೇಜ್‌. 26 ಆಗಸ್ಟ್‌ 2007ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 
icon

(3 / 14)

ಮದುವೆ ಆಗಿ 15 ವರ್ಷಗಳಾದರೂ ಈ ಜೋಡಿ ನಡುವೆ ಪ್ರೀತಿಗೆ ಕೊರತೆ ಇರಲಿಲ್ಲ. ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. 
icon

(4 / 14)

ಈ ಮುದ್ದಾದ ಜೋಡಿಗೆ ಶೌರ್ಯ ಎಂಬ ಮಗ ಇದ್ದಾನೆ. 
icon

(5 / 14)

ಈ ಮುದ್ದಾದ ಜೋಡಿಗೆ ಶೌರ್ಯ ಎಂಬ ಮಗ ಇದ್ದಾನೆ. 

ಪತ್ನಿ ಜೊತೆಗಿನ ಅನೇಕ ಫೋಟೋಗಳನ್ನು ವಿಜಯ ರಾಘವೇಂದ್ರ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಸ್ಪಂದನಾ ಅವರನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಈ ಫೋಟೋಗಳೇ ಸಾಕ್ಷಿ. 
icon

(6 / 14)

ಆಗಸ್ಟ್‌ 26ರಂದು ವಿಜಯ ರಾಘವೇಂದ್ರ - ಸ್ಪಂದನಾ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. 
icon

(7 / 14)

ಕುಟುಂಬ, ಸ್ನೇಹಿತರೊಂದಿಗೆ ಸ್ಪಂದನಾ ಮೂರು ದಿನಗಳ ಹಿಂದೆ ಬ್ಯಾಂಕಾಕ್‌ಗೆ ತೆರಳಿದ್ದರು. ಶಾಪಿಂಗ್‌ ಮುಗಿಸಿ ರೂಮ್‌ಗೆ ವಾಪಸ್ಸಾಗುವಾಗ ಲೋ ಬಿಪಿ ಆಗಿ, ಹೃದಯಾಘಾತವಾಗಿದೆ. 
icon

(8 / 14)

ಕೂಡಲೇ ಸ್ಪಂದನಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರಿಯಾಲಿಟಿ ಶೋ, ಸಿನಿಮಾ ಪ್ರಮೋಷನ್‌ ಮುಗಿಸಿ ವಿಜಯ ರಾಘವೇಂದ್ರ ಕೂಡಾ ಬ್ಯಾಂಕಾಕ್‌ಗೆ ತೆರಳುವ ಪ್ಲಾನ್‌ನಲ್ಲಿದ್ದರು. 
icon

(9 / 14)

ಸ್ಪಂದನಾ ಚಿಕಿತ್ಸೆ ಫಲಕಾರಿ ಆಗದೆ ಸ್ಪಂದನಾ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಇಂದು ಬ್ಯಾಂಕಾಕ್‌ನಲ್ಲಿ ಸ್ಪಂದನಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. 
icon

(10 / 14)

ಸ್ಪಂದನಾ ತಂದೆ ಬಿಕೆ ಶಿವರಾಂ ಹಾಗೂ ಸಹೋದರ ರಕ್ಷಿತ್‌ ಶಿವರಾಂ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತದೆ. 
icon

(11 / 14)

ಸ್ಪಂದನಾ 2016ರಲ್ಲಿ ತೆರೆ ಕಂಡಿದ್ದ ರವಿಚಂದ್ರನ್‌ ಅಭಿನಯದ ಅಪೂರ್ವ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 
icon

(12 / 14)

ಜೋಡಿ ಎಂದರೆ ವಿಜಯ ರಾಘವೇಂದ್ರ - ಸ್ಪಂದನಾ ರೀತಿ ಇರಬೇಕು ಎಂದು ಎಲ್ಲರೂ ಅಂದುಕೊಂಡಿದ್ದುಂಟು. ಆದರೆ ಈ ಮುದ್ದಾದ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ, ವಿಧಿ ಇಬ್ಬರನ್ನೂ ದೂರ ಮಾಡಿದೆ. 
icon

(13 / 14)

ಸ್ಪಂದನಾ ನಿಧನದ ಸುದ್ದಿ ತಿಳಿದು ಸ್ಯಾಂಡಲ್‌ವುಡ್‌ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಜಯ ರಾಘವೇಂದ್ರ ಮಲ್ಲೇಶ್ವರಂ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ. 
icon

(14 / 14)

ಇತರ ಗ್ಯಾಲರಿಗಳು