ಕನ್ನಡ ಸುದ್ದಿ  /  Photo Gallery  /  Sandalwood News Daali Dhananjay Uttarakaanda Movie Team Visits Nuggikeri Hanuman Temple Dharwad Mnk

Uttarakaanda: ಧಾರವಾಡದ ನುಗ್ಗಿಕೇರಿ ಹನುಮನ ಪಾದಕ್ಕೆರಗಿದ ಡಾಲಿ ಧನಂಜಯ್;‌ ಶೀಘ್ರದಲ್ಲಿ ‘ಉತ್ತರಕಾಂಡ’ ಶೂಟಿಂಗ್‌ ಶುರು PHOTOS

  • Dharwad News: ರತ್ನನ್‌ ಪ್ರಪಂಚ ಮೂಲಕ ಹಿಟ್‌ ಕೊಟ್ಟಿದ್ದ ನಿರ್ದೇಶಕ ರೋಹಿತ್‌ ಪದಕಿ, ನಟ ಡಾಲಿ ಧನಂಜಯ್‌ ಜೋಡಿ ಈಗ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ಗುದ್ದಾಂ ಗುದ್ದಿ ಶುರು ಮಾಡಿದೆ. ಟೀಸರ್‌ ಮೂಲಕವೇ ಕುತೂಹಲದ ಕಿಡಿ ಹೊತ್ತಿಸಿದ ಈ ತಂಡ ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ಗೆ ತೆರಳಲಿದೆ. ಅದಕ್ಕೂ ಮುನ್ನ ಧಾರವಾಡದ ನುಗ್ಗಿಕೇರಿ ಹನುಮನ ದರ್ಶನ ಪಡೆದಿದೆ ಚಿತ್ರತಂಡ.

ಡಾಲಿ ಧನಂಜಯ್‌ ನಾಯಕನಾಗಿ ನಟಿಸಲಿರುವ ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಈ ನಿಮಿತ್ತ ಚಿತ್ರದ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಹನುಮನ ಆಶೀರ್ವಾದ ಪಡೆದಿದ್ದಾರೆ  
icon

(1 / 5)

ಡಾಲಿ‌ ಧನಂಜಯ್, ಉತ್ತರಕಾಂಡದ ನಿರ್ದೇಶಕ ರೋಹಿತ್ ಪದಕಿ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಧಾರವಾಡ ಹೊರವಲಯದಲ್ಲಿರುವ ನುಗ್ಗಿಕೇರಿಯ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
icon

(2 / 5)

ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಸಿನಿಮಾ. ಅದರಲ್ಲೂ ಉತ್ತರ ಕರ್ನಾಟಕ ಭಾಷೆಯನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾ ಮಾಡ್ತಿದ್ದಾರೆ ರೋಹಿತ್‌ ಪದಕಿ. 
icon

(3 / 5)

ಈಗಾಗಲೇ ಇದೇ ಸಿನಿಮಾದ ಸಲುವಾಗಿ ಉತ್ತರ ಕರ್ನಾಟಕ ಭಾಗದವರನ್ನೇ ಆಯ್ಕೆ ಮಾಡಿಕೊಳ್ಳಲು ವಿಜಯಪುರ ಮತ್ತು ಹುಬ್ಬಳ್ಳಿಯಲ್ಲಿ ಆಡಿಷನ್‌ ಆಯೋಜಿಸಿತ್ತು. ಸಾಕಷ್ಟು ಜನ ಆಡಿಷನ್‌ ಸಹ ಕೊಟ್ಟಿದ್ದಾರೆ. 
icon

(4 / 5)

ಈ ಸಿನಿಮಾದಲ್ಲಿ ಧನಂಜಯ್‌ ಜತೆಗೆ ಶಿವರಾಜ್ ಕುಮಾರ್ ಸಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ‌‌ ಬರಲಿದೆ. ಇತ್ತೀಚೆಗಷ್ಟೇ ಕಾರಣಾಂತರಗಳಿಂದ ಈ ಸಿನಿಮಾದಿಂದ ರಮ್ಯಾ ಹೊರನಡೆದಿದ್ದರು. 
icon

(5 / 5)

ಇತರ ಗ್ಯಾಲರಿಗಳು