ಕನ್ನಡ ಸುದ್ದಿ  /  Photo Gallery  /  Sandalwood News Dhruvatare Kannada Movie Actress Deepa Unni Marry Latest Photos Kannada Movie Actress Rsm

Unni Marry: ಆ ಮೋಡ ಬಾನಲ್ಲಿ ತೇಲಾಡುತಾ ಎಂದು ಡಾ ರಾಜ್‌ಕುಮಾರ್‌ ಜೊತೆ ಹಾಡಿ ಕುಣಿದಿದ್ದ ಧ್ರುವತಾರೆ ನಟಿ ದೀಪಾ ಲೇಟೆಸ್ಟ್‌ ಫೋಟೋಗಳು

ಸುಮಾರು 30-40 ವರ್ಷಗಳ ಹಿಂದೆ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿದ್ದ ಅನೇಕ ನಟಿಯರು ಈಗ ಮದುವೆಯಾಗಿ ಸೆಟಲ್‌ ಆಗಿದ್ದಾರೆ. ಕೆಲವರಿಗೆ ಮೊಮ್ಮಕ್ಕಳು ಕೂಡಾ ಇದ್ದಾರೆ. 

ಧ್ರುವತಾರೆ ಚಿತ್ರದಲ್ಲಿ ಡಾ ರಾಜ್‌ಕುಮಾರ್‌ ಜೊತೆ ನಟಿಸಿದ್ದ ದೀಪಾ ನಿಮಗೆ ನೆನಪಿರಬೇಕು. ಈ ಸಿನಿಮಾದ ಆ ಮೋಡ ಬಾನಲ್ಲಿ ತೇಲಾಡುತಾ ಹಾಡು ಇಂದಿಗೂ ಬಹಳ ಫೇಮಸ್.‌ 
icon

(1 / 14)

ಧ್ರುವತಾರೆ ಚಿತ್ರದಲ್ಲಿ ಡಾ ರಾಜ್‌ಕುಮಾರ್‌ ಜೊತೆ ನಟಿಸಿದ್ದ ದೀಪಾ ನಿಮಗೆ ನೆನಪಿರಬೇಕು. ಈ ಸಿನಿಮಾದ ಆ ಮೋಡ ಬಾನಲ್ಲಿ ತೇಲಾಡುತಾ ಹಾಡು ಇಂದಿಗೂ ಬಹಳ ಫೇಮಸ್.‌ (PC: Facebook, Twitter)

ದೀಪಾ ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳು. ಆದರೆ ಕನ್ನಡ ಸಿನಿಪ್ರಿಯರು ಮಾತ್ರ ದೀಪಾ ಅವರನ್ನು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ದೀಪಾ ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೂ ಉಂಟು. 
icon

(2 / 14)

ದೀಪಾ ಈಗ ತಮ್ಮ ಕುಟುಂಬದೊಂದಿಗೆ ಕೇರಳದಲ್ಲಿ ನೆಲೆಸಿದ್ದಾರೆ. ಇವರ ಪತಿ ಹೆಸರು ರಿಜೊಯ್‌, ಕೇರಳದ ಎರ್ನಾಕುಲಂನಲ್ಲಿ ಪ್ರೊಫೆಸರ್‌ ಅಗಿ ಕೆಲಸ ಮಾಡುತ್ತಿದ್ದರು. ಈ ದಂಪತಿಗೆ ನಿರ್ಮಲ್‌ ಎಂಬ ಪುತ್ರ ಇದ್ದಾರೆ. ನಿರ್ಮಲ್‌ಗೆ ಮದುವೆ ಆಗಿದ್ದು ಒಬ್ಬ ಮಗ ಇದ್ದಾನೆ. 
icon

(3 / 14)

ದೀಪಾ ಮೂಲತ: ಕೇರಳದ ಎರ್ನಾಕುಲಂನವರು. ದೀಪಾ ಮೂಲ ಹೆಸರು ಉನ್ನಿ ಮೇರಿ. ಕ್ರೈಸ್ತ ಕುಟುಂಬಕ್ಕೆ ಸೇರಿದ ಇವರು ಸಿನಿಮಾಗಾಗಿ ತಮ್ಮ ಹೆಸರನ್ನು ದೀಪಾ ಎಂದು ಬದಲಿಸಿಕೊಂಡರು. 
icon

(4 / 14)

ದೀಪಾ ಹುಟ್ಟಿ ಬೆಳೆದದ್ದು ಕೇರಳದ ಎರ್ನಾಕುಲಂನಲ್ಲಿ ಇವರ ತಂದೆ ಅಗಸ್ಟೀನ್‌ ಫರ್ನಾಂಡಿಸ್‌ ತಾಯಿ ವಿಕ್ಟೋರಿಯಾ. ಬಾಲ್ಯದಲ್ಲೇ ಶಾಸ್ತ್ರೀಯ ಸಂಗೀತ ಕಲಿತದ್ದು ದೀಪಾ ಚಿತ್ರರಂಗಕ್ಕೆ ಬರಲು ಸಹಾಯವಾಯ್ತು. 
icon

(5 / 14)

1969 ರಲ್ಲಿ ದೀಪಾ ನವವಧು ಮಲಯಾಳಂ ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. 
icon

(6 / 14)

1969 ರಲ್ಲಿ ದೀಪಾ ನವವಧು ಮಲಯಾಳಂ ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. 

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಸೇರಿ ದೀಪಾ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(7 / 14)

ಕನ್ನಡದಲ್ಲಿ ದೀಪಾ ವಿಜಯ್‌ ವಿಕ್ರಮ್‌, ನಾನಿರುವುದೇ ನಿನಗಾಗಿ, ಇಬ್ಬನಿ ಕರಗಿತು, ಕಾಡಿನ ರಾಜ, ಧ್ರುವತಾರೆ, ತಾಯಿ ಕನಸು, ಸತಿ ಸಕ್ಕುಬಾಯಿ, ಗುರು ಜಗದ್ಗುರು ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(8 / 14)

ದೀಪಾ ನಟಿಸಿದ ಕನ್ನಡ ಸಿನಿಮಾಗಳಲ್ಲಿ ಅವರಿಗೆ ಧ್ರುವತಾರೆ ಸಿನಿಮಾ ಒಳ್ಳೆ ಹೆಸರು ತಂದು ನೀಡಿತು. ನಾಯಕನ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳವ ಸರಳ ಪಾತ್ರದಲ್ಲಿ ದೀಪಾ ಬಹಳ ಚೆನ್ನಾಗಿ ಅಭಿನಯಿಸಿದ್ದರು. 
icon

(9 / 14)

ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ದೀಪಾ ಮದುವೆ ಆಗಿ ಚಿತ್ರರಂಗದಿಂದ ದೂರಾದರು. ಅವರು ಎಲ್ಲಿಯೂ ಮಾಧ್ಯಮದವರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. 
icon

(10 / 14)

ರಾಜ್‌ಕುಮಾರ್‌, ದೀಪಾ, ಗೀತಾ, ತೂಗುದೀಪ ಶ್ರೀನಿವಾಸ್‌, ಬಾಲಕೃಷ್ಣ, ರಾಜಾನಂದ್‌ ಬ್ರಹ್ಮಾವರ್‌ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದರು. 
icon

(11 / 14)

(12 / 14)

1992 ರಲ್ಲಿ ದೀಪಾ ಅಭಿನಯದ ಮಲಯಾಳಂನ 2, ತಮಿಳಿನ 1 ಸಿನಿಮಾಗಳು ತೆರೆ ಕಂಡಿತ್ತು. ಆ ಸಿನಿಮಾ ನಂತರ ಅವರು ಚಿತ್ರರಂಗದಿಂದ ಸಂಪೂರ್ಣ ದೂರಾಗಿದ್ದರು. 
icon

(13 / 14)

ಬಹಳ ವರ್ಷಗಳ ನಂತರ ದೀಪಾ ಅವರನ್ನು ನೋಡಿದ ಸಿನಿಪ್ರಿಯರು ಬಹಳ ಖುಷಿಯಾಗಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ದೀಪಾ ಮನಸ್ಸು ಮಾಡಬೇಕಷ್ಠೇ. 
icon

(14 / 14)

ಇತರ ಗ್ಯಾಲರಿಗಳು