ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದುನಿಯಾ ವಿಜಯ್‌ ‘ಭೀಮ’ ಗರ್ಜನೆಗೆ ದಿನಾಂಕ ನಿಗದಿ; ಆಗಸ್ಟ್‌ ಎರಡನೇ ವಾರ ಆಕ್ರಮಿಸಿದ ಸ್ಯಾಂಡಲ್‌ವುಡ್‌ ಸಲಗ, ಎದುರಾಳಿ ಯಾರು?

ದುನಿಯಾ ವಿಜಯ್‌ ‘ಭೀಮ’ ಗರ್ಜನೆಗೆ ದಿನಾಂಕ ನಿಗದಿ; ಆಗಸ್ಟ್‌ ಎರಡನೇ ವಾರ ಆಕ್ರಮಿಸಿದ ಸ್ಯಾಂಡಲ್‌ವುಡ್‌ ಸಲಗ, ಎದುರಾಳಿ ಯಾರು?

  • ಸಲಗ ಸಿನಿಮಾ ಯಶಸ್ಸಿನ ಬಳಿಕ ನಟ ದುನಿಯಾ ವಿಜಯ್‌ ಅವರ ಬೇರಾವ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಇದೀಗ ಭೀಮನ ಅವತಾರದಲ್ಲಿ ಮತ್ತೆ ರೌಡಿಸಂ ಹಿನ್ನೆಲೆಯ ಕಥೆಯ ಜತೆಗೆ ಆಗಮಿಸುತ್ತಿದ್ದಾರೆ. ಈ ಚಿತ್ರಕ್ಕೂ ವಿಜಯ್‌ ನಿರ್ದೇಶನ ಮಾಡಿದ್ದು ವಿಶೇಷ. ಈಗ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ.

ದುನಿಯಾ ವಿಜಯ್‌ ನಿರ್ದೇಶನದಲ್ಲೂ ಪಳಗಿದ್ದಾರೆ. ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿದ್ದಂತೆ, ಭೀಮ ಸಿನಿಮಾ ಘೋಷಿಸಿದ್ದರು ವಿಜಯ್.
icon

(1 / 6)

ದುನಿಯಾ ವಿಜಯ್‌ ನಿರ್ದೇಶನದಲ್ಲೂ ಪಳಗಿದ್ದಾರೆ. ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿದ್ದಂತೆ, ಭೀಮ ಸಿನಿಮಾ ಘೋಷಿಸಿದ್ದರು ವಿಜಯ್.(Instagram/ Duniya Vijay)

ಭೀಮ ಸಿನಿಮಾದಲ್ಲೂ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶಕನ ಕ್ಯಾಪ್‌ ಸಹ ಧರಿಸಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳೂ ಮುಕ್ತಾಯಗೊಂಡಿವೆ. 
icon

(2 / 6)

2021ರಲ್ಲಿ ದುನಿಯಾ ವಿಜಯ್‌ ನಟನೆಯ ಸಲಗ ಸಿನಿಮಾ ತೆರೆಗೆ ಬಂದಿತ್ತು. 2022ರಲ್ಲಿ ಅವರ ಯಾವ ಸಿನಿಮಾ ಸಹ ರಿಲೀಸ್‌ ಆಗಲಿಲ್ಲ. 2023ರಲ್ಲಿ ತೆಲುಗಿನಲ್ಲಿ ಬಾಲಯ್ಯ ಅವರ ಜತೆಗೆ ವೀರ ಸಿಂಹ ರೆಡ್ಡಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿ ಗಮನ ಸೆಳೆದರು. 
icon

(3 / 6)

ಇತ್ತ ಕನ್ನಡದಲ್ಲಿ ಭೀಮ ಸಿನಿಮಾ ಸಹ ಘೋಷಣೆ ಮಾಡಿ ಚಿತ್ರೀಕರಣದಲ್ಲೂ ತೊಡಗಿಸಿಕೊಂಡರು. ಇದೀಗ ಅದೇ ಸಿನಿಮಾ ರಿಲೀಸ್‌ ಹಂತಕ್ಕೆ ಬಂದಿದೆ. 
icon

(4 / 6)

ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿ ಹಲವು ಕಲಾವಿದರು ನಟಿಸಿರುವ ಭೀಮ ಸಿನಿಮಾಕ್ಕೆ ಚರಣ್‌ ರಾಜ್‌ ಸಂಗೀತ ನೀಡಿದರೆ, ಶಿವಕುಮಾರ್‌ ಅವರ ಛಾಯಾಗ್ರಹಣವಿದೆ.  ಸಂಭಾಷಣೆಯನ್ನು ಮಾಸ್ತಿ ಅವರು ಬರೆದಿದ್ದಾರೆ.
icon

(5 / 6)

ಆಗಸ್ಟ್‌ 9ರಂದು ಭೀಮ ಸಿನಿಮಾ ಬಿಡುಗಡೆ ಆಗಲಿದೆ. ಕೃಷ್ಣ ಸಾರ್ಥಕ್‌ ಮತ್ತು ಜಗದೀಶ್‌ ಗೌಡ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು