Sandalwood News: ಹಣದ ಆಸೆಗೆ ಬಿ ಗ್ರೇಡ್ ಚಿತ್ರಗಳಲ್ಲಿ ನಟಿಸಿ ಕೆರಿಯರ್ ಹಾಳು ಮಾಡಿಕೊಂಡ್ರಾ ಲಾಲಿ ಸಿನಿಮಾ ನಟ ಹರೀಶ್ ಕುಮಾರ್?
ಈ ಹುಡುಗನನ್ನು ನೋಡ್ತಿದ್ರೆ ನಮಗೆ ಕನ್ನಡದ ಹೆಂಡ್ತಿ ಹೇಳಿದರೆ ಕೇಳಬೇಕು, ಲಾಲಿ ಸಿನಿಮಾ ನೆನಪಾಗುತ್ತದೆ. ಕನ್ನಡದಲ್ಲಿ ಇವರು ನಟಿಸಿದ್ದು ಮೂರೇ ಸಿನಿಮಾಗಳು. ಆದರೂ ಆ ಸಮಯದಲ್ಲಿ ಕನ್ನಡ ಸಿನಿಪ್ರಿಯರಿಗೆ ಅದರಲ್ಲೂ ಹುಡುಗಿಯರಿಗೆ ಈ ಹುಡುಗ ಬಹಳ ಇಷ್ಟ.
(1 / 17)
ಇವರ ಹೆಸರು ಹರೀಶ್ ಕುಮಾರ್. ಆಂಧ್ರಪ್ರದೇಶಕ್ಕೆ ಸೇರಿದ ಹರೀಶ್ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು. 4 ವರ್ಷ ವಯಸ್ಸಿನಲ್ಲೇ ಬಣ್ಣ ಹಚ್ಚಿದರು. (PC: Harish Kumar Facebook)
(2 / 17)
ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುವ ಅವಕಾಶ ಇದ್ದರೂ ಕೆಲವೊಂದು ತಪ್ಪುಗಳಿಂದಾಗಿ ಹರೀಶ್ ತಮ್ಮ ಕರಿಯರ್‌ನ್ನೇ ನಾಶ ಮಾಡಿಕೊಂಡರು.
(3 / 17)
ಮುದ್ದುಲ ಕೊಡಕು, ಪ್ರೇಮ ಕಾನುಕ, ತ್ರಿಶೂಲಂ, ಸನ್ಸಾರ್ , ಹಕೀಕತ್ ಹೀಗೆ ಹಿಂದಿ, ತೆಲುಗು ಭಾಷೆಗಳಲ್ಲಿ ಹರೀಶ್ ಬಾಲನಟನಾಗಿ ಮಿಂಚಿದರು. ಕನ್ನಡದ ಬಲು ಅಪರೂಪ ನಮ್ ಜೋಡಿ ಚಿತ್ರದಲ್ಲಿ ಕೂಡಾ ಬಾಲನಟನಾಗಿ ನಟಿಸಿದ್ದಾರೆ.
(4 / 17)
15ನೇ ವಯಸ್ಸಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಹರೀಶ್ ಬೆಳ್ಳಿತೆರೆಯಲ್ಲಿ ಮತ್ತೆ ಮಿಂಚಲು ಆರಂಭಿಸಿದರು. ಸಾಲು ಸಾಲು ಅವಕಾಶಗಳು ಅವರನ್ನು ಹುಡುಕಿ ಬಂತು.
(5 / 17)
ಚಿಕ್ಕ ವಯಸ್ಸಿಗೆ ತೆಲುಗು, ಹಿಂದಿ, ಮಲಯಾಳಂ, ಕನ್ನಡ, ತಮಿಳು ಸಿನಿಮಾಗಳಲ್ಲಿ ಹರೀಶ್ ನಟಿಸಿದರು. ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಎಂದು ಬ್ಯುಸಿ ಲೈಫ್ ನಡೆಸುತ್ತಿದ್ದರು.
(6 / 17)
ಹರೀಶ್ ವೃತ್ತಿ ಜೀವನದಲ್ಲಿ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟದ್ದು ಪ್ರೇಮ್ ಕೈದಿ ಸಿನಿಮಾ. ಈ ಚಿತ್ರ ಹಿಂದಿ, ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗಿತ್ತು. ಹಿಂದಿಯಲ್ಲಿ ಕರೀಷ್ಮಾ ಕಪೂರ್, ತೆಲುಗಿನಲ್ಲಿ ಮಾಲಾಶ್ರೀ ಹರೀಶ್ ಜೋಡಿಯಾಗಿ ನಟಿಸಿದ್ದರು.
(7 / 17)
ಪ್ರೇಮ್ ಕೈದಿ ನಂತರ ಹರೀಶ್ ಇಮೇಜ್ ಇನ್ನಷ್ಟು ಬದಲಾಯ್ತು. ಇತರ ಭಾಷೆಗಳಿಗಿಂತ ಬಾಲಿವುಡ್ ಸಿನಿಮಾಗಳಲ್ಲೇ ಅವರು ಹೆಚ್ಚು ಬ್ಯುಸಿ ಆದರು.
(9 / 17)
ಹರೀಶ್‌ಗಿಂತ ದೊಡ್ಡ ದೊಡ್ಡ ನಟರಿದ್ದರೂ ಜನರು ಹರೀಶ್ ಅವರನ್ನೇ ಹೆಚ್ಚು ಇಷ್ಟಪಡಲು ಆರಂಭಿಸಿದರು. ಎಲ್ಲಿ ಹೋದರೂ ಅಭಿಮಾನಿಗಳು ಹರೀಶ್ ಸುತ್ತುವರೆಯುವಷ್ಟರ ಮಟ್ಟಿಗೆ ಅವರ ಖ್ಯಾತಿ ಹೆಚ್ಚುತ್ತಾ ಹೋಯ್ತು.
(10 / 17)
ಖ್ಯಾತಿ ಹೆಚ್ಚುತ್ತಿದ್ದಂತೆ, ಹಣ ಸೇರುತ್ತಿದ್ದಂತೆ ಹರೀಶ್ ಅಹಂ ಕೂಡಾ ಹೆಚ್ಛಾಯ್ತು. ನಿರ್ದೇಶಕರೊಂದಿಗೆ ಗೌರವ ಇಲ್ಲದೆ ನಡೆದುಕೊಳ್ಳುವುದು, ಸ್ಕ್ರಿಪ್ಟ್ ಬದಲಿಸುವಂತೆ ಕೇಳುವುದು, ಹೆಚ್ಚು ಸಂಭಾವನೆ ಕೇಳಲು ಶುರುವಿಟ್ಟರು.
(11 / 17)
ಹರೀಶ್ ವರಸೆ ಬದಲಾಗುತ್ತಿದ್ದಂತೆ ಅವರಿಗೆ ಅವಕಾಶಗಳೂ ಕಡಿಮೆ ಆದವು. ಇದು ಹರೀಶ್‌ಗೆ ಸಹಿಸಲು ಸಾಧ್ಯವಾಗಲಿಲ್ಲ.
(13 / 17)
ಮೆಚ್ಚಿನ ನಟ ಹರೀಶ್ ಅವರನ್ನು ಹೀಗೆ ಮಲಯಾಳಂ ಬಿ ಗ್ರೇಡ್ ಸಿನಿಮಾಗಳಲ್ಲಿ ನೋಡಿದವರು ಶಾಕ್ ಆದರು. ಇದರಿಂದ ಅವರಿಗೆ ಚಿತ್ರರಂಗದಲ್ಲಿ ಇನ್ನಷ್ಟು ಹಿನ್ನಡೆ ಉಂಟಾಯ್ತು. ಕೊನೆಗೆ ಸಂಪೂರ್ಣ ಅವಕಾಶ ಇಲ್ಲದೆ ಚಿತ್ರರಂಗದಿಂದ ದೂರಾದರು.
(15 / 17)
ಹರೀಶ್ ಸದಸ್ಯಕ್ಕೆ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಇವೆಂಟ್ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಇತರ ಗ್ಯಾಲರಿಗಳು