ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಮೇಕಿಂಗ್ ಹೀಗಿದೆ ನೋಡಿ; ಎಲ್ಲಾ ದಾಖಲೆ ಪುಡಿಪುಡಿ ಅಂದ್ರು ಫ್ಯಾನ್ಸ್
- ಅಕ್ಷಯ ತೃತೀಯಾದ ಶುಭ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂಬರುವ ಸಿನಿಮಾ "ಡೇವಿಲ್"ನ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಶೂಟಿಂಗ್ ದೃಶ್ಯಗಳನ್ನು ಚಿತ್ರತಂಡ ಹಂಚಿಕೊಂಡಿದೆ.
- ಅಕ್ಷಯ ತೃತೀಯಾದ ಶುಭ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂಬರುವ ಸಿನಿಮಾ "ಡೇವಿಲ್"ನ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಶೂಟಿಂಗ್ ದೃಶ್ಯಗಳನ್ನು ಚಿತ್ರತಂಡ ಹಂಚಿಕೊಂಡಿದೆ.
(1 / 9)
ವೈಷ್ಣೋಸ್ಟುಡಿಯೋ ಹಂಚಿಕೊಂಡಿರುವ ಈ ಮೇಕಿಂಗ್ ವಿಡಿಯೋದಲ್ಲಿ ದರ್ಶನ್ ಅವರ ಕೆಲವೊಂದು ಆಕ್ಷನ್ ಸೀನ್‌ಗಳ ಶೂಟಿಂಗ್ ಚಿತ್ರಣವಿದೆ. ಒಟ್ಟಾರೆ, ಭರ್ಜರಿ ಸೆಟ್‌ನಲ್ಲಿ ಅದ್ಧೂರಿಯಾಗಿ ಶೂಟಿಂಗ್ ಮಾಡುತ್ತಿರುವುದು ಖಾತ್ರಿಯಾಗಿದೆ.
(2 / 9)
"ದಾಖಲೆಗಳನ್ನ ಪುಡಿಪುಡಿ ಮಾಡೋಕ್ಕೆ ಬಾಸ್ ರೆಡಿ" "ಕಾಟೇರ ಬಳಿಕ ಡೆವಿಲ್ ಮೂಲಕ ಅಬ್ಬರಿಸಲು ಬಾಸ್ ರೆಡಿ" ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
(3 / 9)
ಡೆವಿಲ್ ಸಿನಿಮಾ ಈ ವರ್ಷವೇ ರಿಲೀಸ್ ಆಗಲಿದೆ. ಕಾಟೇರ ಯಶಸ್ಸಿನ ಬಳಿಕ ಡೆವಿಲ್ ಸಿನಿಮಾದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಡೆವಿಲ್ ಟೀಸರ್ ಕೂಡ ಕುತೂಹಲ ಹುಟ್ಟುಹಾಕಿತ್ತು.
(5 / 9)
ಡೆವಿಲ್ ಸಿನಿಮಾ ಈ ವರ್ಷವೇ ರಿಲೀಸ್ ಆಗಲಿದೆ. ಕಾಟೇರ ಯಶಸ್ಸಿನ ಬಳಿಕ ಡೆವಿಲ್ ಸಿನಿಮಾದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಡೆವಿಲ್ ಟೀಸರ್ ಕೂಡ ಕುತೂಹಲ ಹುಟ್ಟುಹಾಕಿತ್ತು.
(6 / 9)
ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು ಎಂಬ ಧ್ವನಿಯೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ದರ್ಶನ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಈ ಫಸ್ಟ್ ಲುಕ್ ದಚ್ಚು ಅಭಿಮಾನಿಗಳಿಗೆ ಖುಷಿ ನೀಡಿತ್ತು. ಇದೀಗ ಮೇಕಿಂಗ್ ವಿಡಿಯೋ ಮೂಲಕ ಪ್ರೇಕ್ಷಕರಿಗೆ ಸಿನಿಮಾದ ಕ್ರೇಜ್ ಹೆಚ್ಚಿಸಲಾಗಿದೆ.
(7 / 9)
ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಪೋಟೋ ತೆಗೆಯಲದು ಬಲು ಕೋಪ ಬರುವುದು.. ಫೋಟೋ ತೆಗೆದ ಕೈಯ ಪಾಪು ಮುರಿದು ಬಿಡುವುದು... ಸರಸು ಪಾಪು ಹೆಸರು ಕೇಳಲ್ವ? ಎನ್ನುತ್ತಿದ್ದಂತೆ ಆ ಪಾಪು ಡೆವಿಲ್ ಎಂದು ಗಹಗಹಿಸಿ ನಗುತ್ತಾರೆ ದರ್ಶನ್. ಈ ಟೀಸರ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
(8 / 9)
ಮಾಸ್ ಕಮರ್ಷಿಯಲ್ ಕಥೆಯ ಡೆವಿಲ್ ಚಿತ್ರದ ಫಸ್ಟ್‌ಲುಕ್ ಟೀಸರ್‌ನಲ್ಲಿ ಸದ್ಯ ದರ್ಶನ್ ಮಾತ್ರ ಕಂಡಿದ್ದಾರೆ. ಕೆಂಪು ವರ್ಣದ ಬ್ಯಾಕ್‌ಗ್ರೌಂಡ್‌ನಲ್ಲಿ ಕಡುಗೆಂಪು ವರ್ಣದ ಸೂಟ್ ಧರಿಸಿ, ಬಾಯಲ್ಲಿ ಸಿಗರೇಟ್ ಹೊತ್ತಿಸಿ, ಮತ್ತೊಂದು ಕೈಯಲ್ಲಿ ಗನ್ ಹಿಡಿದು ಹೊಸ ಅವತಾರದಲ್ಲಿ ಎದುರಾಗಿದ್ದಾರೆ.
ಇತರ ಗ್ಯಾಲರಿಗಳು