ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಮಗಳು ಆರಾಧನಾ ಜತೆ ಮಾಲಾಶ್ರೀ ಪೋಸ್ PHOTOS
- 'ಕಾಟೇರ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಖ್ಯಾತ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಇದೀಗ ಕಲರ್ ಫುಲ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾದಲ್ಲಿ ಆರಾಧನಾ ಸೆರೆಯಾಗಿದ್ದಾರೆ.

(1 / 7)
ಕಾಟೇರ ಸಿನಿಮಾ ಮೂಲಕವೇ ಚಂದನವನಕ್ಕೆ ಎಂಟ್ರಿ ಕೊಟ್ಟ ಆರಾಧನಾ ಮೊದಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಎರಡನೇ ಸಿನಿಮಾದ ಹುಡುಕಾಟದಲ್ಲಿರುವ ಮಾಲಾಶ್ರೀ ಪುತ್ರಿ ಸದ್ಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
(PHOTO Courtesy: Instagram/ Aradhana Ram)(2 / 7)
ಅಂದಹಾಗೆ ಆರಾಧನಾ ರಾಣಿಯಂತೆ ಕಂಗೊಳಿಸುತ್ತಿರುವುದು ದಿ ಜ್ಯುವೆಲ್ಲರಿ ಶೋಗಾಗಿ. ವೆರೈಟಿ ಕಾಸ್ಟೂಮ್‌ನಲ್ಲಿ ಹೆವಿ ಜ್ಯುವೆಲ್ಲರಿ ಧರಿಸಿ ತರಹೇವಾರಿ ಲುಕ್ ನಲ್ಲಿ ಮಿಂಚಿದ್ದಾರೆ ಆರಾಧನಾ.
(3 / 7)
ಪುತ್ರಿ ಆರಾಧನಾ ಜೊತೆ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. ಅಮ್ಮ ಮಗಳ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.
(4 / 7)
ಮೊದಲ ಬಾರಿಗೆ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾಗೆ ಪೋಸ್ ನೀಡಿರುವ ಆರಾಧನಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಮಗಳ ಲುಕ್ ನೋಡಿ ಮಾಲಾಶ್ರೀ ಕೂಡ ಸಖತ್ ಖುಷಿಪಟ್ಟಿದ್ದಾರೆ.
(5 / 7)
ಕಾಟೇರ ಬಳಿಕ ಆರಾಧನಾ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಒಳ್ಳೆಯ ಸಿನಿಮಾಗಾಗಿ ಎದುರು ನೋಡುತ್ತಿರುವ ಆರಾಧನಾ ಅವರ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ
ಇತರ ಗ್ಯಾಲರಿಗಳು