Megha Shetty: ಕೈವ ಪುಟ್ಟಿ ಇವ್ರೇನ? ಬಾಡಿಕಾನ್ ಮ್ಯಾಕ್ಸಿ ಉಡುಗೆಯಲ್ಲಿ ಬಳುಕಿದ ಮೇಘಾ ಶೆಟ್ಟಿ; ಕಾಡಿಗೆ ಕಣ್ಣಿನ ಚೆಲುವೆಯ ಚುಂಬಕ ಚಿತ್ರಗಳು
- ಕೈವ ಸಿನಿಮಾ, ಜೊತೆಜೊತೆಯಲ್ಲಿ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಕನ್ನಡ ನಟಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ಫೋಟೋಗಳು ಅಭಿಮಾನಿಗಳ ಹೃದಯದಲ್ಲಿ ಹೊಸ ಕೋಲ್ಮಿಂಚು ಮೂಡಿಸಿವೆ.
- ಕೈವ ಸಿನಿಮಾ, ಜೊತೆಜೊತೆಯಲ್ಲಿ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಕನ್ನಡ ನಟಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ಫೋಟೋಗಳು ಅಭಿಮಾನಿಗಳ ಹೃದಯದಲ್ಲಿ ಹೊಸ ಕೋಲ್ಮಿಂಚು ಮೂಡಿಸಿವೆ.
(1 / 9)
ಕೈವ ಸಿನಿಮಾ, ಜೊತೆಜೊತೆಯಲ್ಲಿ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಕನ್ನಡ ನಟಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೊಸಫೋಟೋಗಳನ್ನು ಹಂಚಿಕೊಂಡಿದ್ದಾರೆ
(2 / 9)
ಮೇಘಾ ಶೆಟ್ಟಿ ಅವರು ರೊವಾನ್ ಬಾಡಿಕಾನ್ ಮ್ಯಾಕ್ಸಿ ಡ್ರೆಸ್ ಧರಿಸಿದ್ದಾರೆ. ಸ್ಲೀವ್‌ಲೆಸ್ ಉಡುಗೆಯಲ್ಲಿ ಮೇಲ್ಬಾಗದಲ್ಲಿ ಸುಂದರ ಹೂವಿನ ಚಿತ್ತಾರಗಳಿದ್ದು, ಅಭಿಮಾನಿಗಳನ್ನು ಸೆಳೆದಿದೆ. ನೀಳವಾದ ಈ ಉಡುಗೆಯಲ್ಲಿ ಮೇಘಾ ಶೆಟ್ಟಿ ಮೀನಿನಂತೆ ಬಳುಕಿ ಫೋಟೋಶೂಟ್ ಮಾಡಿಕೊಂಡಿದ್ದಾರೆ.
(3 / 9)
ಈ ಫೋಟೋಗಳಲ್ಲಿ ಕೈವ ನಟಿ ತುಂಬಾ ಸುಂದರವಾಗಿ ಕಾಣಿಸುತ್ತಾರೆ. ಒಂದೆರಡು ಫೋಟೋ ಮಾದಕವಾಗಿಯೂ ಗಮನ ಸೆಳೆಯುತ್ತದೆ. ಈ ಅಂದದ ಫೋಟೋ ನೋಡಿ ಅಭಿಮಾನಿಗಳು ಬ್ಯೂಟಿಫುಲ್ ಎಂದು ಹೇಳಿದ್ದಾರೆ.
(4 / 9)
1998ರಲ್ಲಿ ಜನಿಸಿದ ಮೇಘಾ ಶೆಟ್ಟಿ ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜಟ್ಕರ್ ಜತೆ ಜೊತೆಜೊತೆಯಲ್ಲಿ ಸೀರಿಯಲ್‌ನಲ್ಲಿ ನಟಿಸಿದ್ದರು.
(5 / 9)
ಜೊತೆಜೊತೆಯಲ್ಲಿ ಸೀರಿಯಲ್‌ನಲ್ಲಿ ಅನು ಸಿರಿಮನೆ ಪಾತ್ರದಲ್ಲಿ ಮಿಂಚಿ ಕಿರುತೆರೆ ಪ್ರೇಕ್ಷಕರಿಗೆ ಮೇಘಾ ಶೆಟ್ಟಿ ಹತ್ತಿರವಾಗಿದ್ದರು. ಇದಾದ ಬಳಿಕ 2022ರಲ್ಲಿ ಇವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು.
(6 / 9)
ಟ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಡಾ. ರಕ್ಷಿತಾ ಪಾತ್ರದಲ್ಲಿ ಮಿಂಚಿದ್ದರು. ಅದೇ ವರ್ಷ ಅಂದರೆ 2022ರಲ್ಲಿ ಇವರು ದಿಲ್‌ಪಸಂದ್ ಎಂಬ ಸಿನಿಮಾದಲ್ಲಿ ನಟಿಸಿದ್ದರು.
(7 / 9)
ಕಳೆದ ವರ್ಷ ತೆರೆಕಂಡ ಕೈವ ಚಿತ್ರದಲ್ಲಿ ಮೇಘಾ ಶೆಟ್ಟಿ ನಟನೆ ಸಾಕಷ್ಟು ಗಮನ ಸೆಳೆದಿತ್ತು. ಬೆಂಗಳೂರು ಕರಗದ ಹಿನ್ನೆಲೆಯನ್ನಿಟ್ಟುಕೊಂಡು ಹಳೆಯ ಲವ್ ಸ್ಟೋರಿ ಕಥೆಯನ್ನು ಇದು ಹೊಂದಿತ್ತು.
(8 / 9)
ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಚೀತಾ, ಗ್ರಾಮಾಯಣ ಇವರ ಮುಂಬರುವ ಸಿನಿಮಾಗಳು. ಲಂಡನ್ ಕೆಫೆಯು ಮರಾಠಿ ಮತ್ತು ಕನ್ನಡದಲ್ಲಿ ತೆರೆಕಾಣಲಿದೆ. ಈ ಚಿತ್ರದ ಮೂಲಕ ಇವರು ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾರುತ್ತಿದ್ದಾರೆ.
ಇತರ ಗ್ಯಾಲರಿಗಳು