Tiger Dance: ಗರುಡ ಗಮನ ವೃಷಭ ವಾಹನದ ಶಿವ ನೆನಪಾಗುವಂತೆ ಹುಚ್ಚೆದ್ದು ಕುಣಿದ ನಟ ರಾಜ್ ಬಿ ಶೆಟ್ಟಿ, ಸಖತ್ ಹುಲಿ ಕುಣಿತ ಎಂದ ಪ್ರೇಕ್ಷಕರು
- Sandalwood News: ಸ್ಯಾಂಡಲ್‌ವುಡ್ ನಟ ರಾಜ್ ಬಿ ಶೆಟ್ಟಿ ನಿನ್ನೆ ಪುತ್ತೂರಿನಲ್ಲಿ ನಡೆದ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಹುಲಿ ಕುಣಿತ ಪ್ರದರ್ಶಿಸಿದ್ದಾರೆ. ಹುಲಿ ಕುಣಿತದ ಕಲಾವಿದರ ಜತೆಗೆ ಇವರು ಕುಣಿದಿದ್ದು, ಇವರ ಕುಣಿತವು ಪ್ರೇಕ್ಷಕರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವನ ನೆನಪಾಗುವಂತೆ ಇತ್ತು.
- Sandalwood News: ಸ್ಯಾಂಡಲ್‌ವುಡ್ ನಟ ರಾಜ್ ಬಿ ಶೆಟ್ಟಿ ನಿನ್ನೆ ಪುತ್ತೂರಿನಲ್ಲಿ ನಡೆದ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಹುಲಿ ಕುಣಿತ ಪ್ರದರ್ಶಿಸಿದ್ದಾರೆ. ಹುಲಿ ಕುಣಿತದ ಕಲಾವಿದರ ಜತೆಗೆ ಇವರು ಕುಣಿದಿದ್ದು, ಇವರ ಕುಣಿತವು ಪ್ರೇಕ್ಷಕರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವನ ನೆನಪಾಗುವಂತೆ ಇತ್ತು.
(1 / 13)
ಸ್ಯಾಂಡಲ್‌ವುಡ್ ನಟ ರಾಜ್ ಬಿ ಶೆಟ್ಟಿ ನಿನ್ನೆ (ಅಕ್ಟೋಬರ್ 22) ಪುತ್ತೂರಿನಲ್ಲಿ ನಡೆದ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಹುಲಿ ಕುಣಿತ ಪ್ರದರ್ಶಿಸಿದ್ದಾರೆ. ಹುಲಿ ಕುಣಿತದ ಕಲಾವಿದರ ಜತೆಗೆ ಇವರು ಕುಣಿದಿದ್ದು, ಇವರ ಕುಣಿತವು ಪ್ರೇಕ್ಷಕರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವನ ನೆನಪಾಗುವಂತೆ ಇತ್ತು.
(2 / 13)
ನಿನ್ನೆ (ಭಾನುವಾರ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿಜಯ್ ಸಾಮ್ರಾಟ್ ಆಶ್ರಯದಲ್ಲಿ "ಪುತ್ತೂರ್ದ ಪಿಲಿಗೊಬ್ಬು-2023ʼ ನಡೆಯಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಈ ಕಾರ್ಯಕ್ರಮ ನಡೆಯಿತು. (Photo: Video Screenshot)
(3 / 13)
ಪುತ್ತೂರ್ದ ಪಿಲಿಗೊಬ್ಬು-2023ರಲ್ಲಿ ಕೋಸ್ಟಲ್‌ವುಡ್ ಮತ್ತು ಸ್ಯಾಂಡಲ್‌ವುಡ್‌ನ ಪ್ರಮುಖ ನಟ ನಟಿಯರು ಭಾಗವಹಿಸಿದ್ದರು.
(4 / 13)
ಗರುಡ ಗಮನ ವೃಷಭ ವಾಹನ, ಒಂದು ಮೊಟ್ಟೆಯ ಕಥೆ, ಟೋಬಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(6 / 13)
ಕೆಲವು ನಿಮಿಷಗಳ ಕಾಲ ಟೈಗರ್ ಡ್ಯಾನ್ಸ್ ಮಾಡಿದ ರಾಜ್ ಬಿ ಶೆಟ್ಟಿಯವರಿಗೆ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆಯೇ ಸುರಿಯಿತು. ಗರುಡ ಗಮನ ವೃಷಭ ವಾಹನದಲ್ಲಿ ರಾಜ್ ಬಿ ಶೆಟ್ಟಿಯವರು ಇದೇ ರೀತಿ ಶಿವನಾಗಿ ಕುಣಿದಿದ್ದರು ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದರು.
(8 / 13)
ಪುತ್ತೂರಿನ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿಯವರು ಹಾಕಿದ ಹುಲಿ ಸ್ಟೆಪ್ ಸಾಕಷ್ಟು ವೈರಲ್ ಆಗುತ್ತಿದ್ದು, ಸಾಕಷ್ಟು ಜನರು ವಾಟ್ಸಪ್ ಸ್ಟೇಟಸ್‌ಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ.
(9 / 13)
ರಾಜ್ ಬಿ ಶೆಟ್ಟಿ ಅವರು ಇತ್ತೀಚೆಗೆ ಕನ್ನಡ ಸಿನಿಮಾ ಟೋಬಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮೂಕ ಪಾತ್ರ ಮಾಡಿದ್ದರು.
(10 / 13)
ರಾಜ್ ಬಿ ಶೆಟ್ಟಿ ಡ್ಯಾನ್ಸ್‌ಗೆ ಹುಲಿಗೂ ಅಚ್ಚರಿ, ಎಂಥ ಸ್ಟೆಪ್ ಮಾರ್ರೆ ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದರು.
(11 / 13)
ರಾಜ್ ಬಿ ಶೆಟ್ಟಿ ಅವರು ಅದ್ಭುತವಾಗಿ ಹುಲಿ ಕುಣಿತ ಮಾಡುತ್ತಾರೆ. ಈಗಾಗಲೇ ಹಲವು ವೇದಿಕೆಗಳಲ್ಲಿ ಟೈಗರ್ ಡ್ಯಾನ್ಸ್ ಮಾಡಿದ್ದಾರೆ.
(12 / 13)
ನವರಾತ್ರಿ ಸಮಯದಲ್ಲಿ ಕರಾವಳಿ ಮಾತ್ರವಲ್ಲದೆ ಕರ್ನಾಟಕದ್ಯಂತ ನವರಾತ್ರಿ ಹುಲಿಕುಣಿತ, ನವರಾತ್ರಿ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ.
ಇತರ ಗ್ಯಾಲರಿಗಳು