Success Tips: ಅವಮಾನವಾದಾಗ ಕೆಟ್ಟ ಘಟನೆ ನಡೆದಾಗ ಕುಗ್ಗಬೇಡಿ; ಯಶಸ್ಸು ಬಯಸುವವರಿಗೆ ನಟ ರಮೇಶ್ ಅರವಿಂದ್ ನೀಡಿರುವ 10 ಅಮೂಲ್ಯ ಸಲಹೆಗಳಿವು
- Ramesh Aravind Success Tips: ಸ್ಯಾಂಡಲ್‌ವುಡ್ ನಟರಾದ ರಮೇಶ್ ಅರವಿಂದ್ ವಿವಿಧ ಸಂದರ್ಭಗಳಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ. ಅವರು ನೀಡಿರುವ ಸಲಹೆಗಳು ಸಕ್ಸಸ್ ಕನಸ್ಸಿನಲ್ಲಿ ಇರುವವರಿಗೆ ದಾರಿದೀಪವಾಗಲಿದೆ.
- Ramesh Aravind Success Tips: ಸ್ಯಾಂಡಲ್‌ವುಡ್ ನಟರಾದ ರಮೇಶ್ ಅರವಿಂದ್ ವಿವಿಧ ಸಂದರ್ಭಗಳಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ. ಅವರು ನೀಡಿರುವ ಸಲಹೆಗಳು ಸಕ್ಸಸ್ ಕನಸ್ಸಿನಲ್ಲಿ ಇರುವವರಿಗೆ ದಾರಿದೀಪವಾಗಲಿದೆ.
(1 / 11)
1. ನಿರಂತರ ಪ್ರ್ಯಾಕ್ಟೀಸ್ ಮಾಡಿ. ಪ್ರ್ಯಾಕ್ಟೀಸ್ ಮಾಡಿದರೆ ಕಷ್ಟದ ಕೆಲಸವೂ ಸುಲಭವಾಗುತ್ತದೆ. ಕೆಲವೊಂದು ಸ್ಕಿಲ್‌ಗಳನ್ನು ಪ್ರ್ಯಾಕ್ಟೀಸ್ ಮಾಡದೆ ಇದ್ದರೆ ಭಯ ಹುಟ್ಟಿಸುತ್ತವೆ. ಹೀಗಾಗಿ ಪ್ರ್ಯಾಕ್ಟೀಸ್ ಮಾಡಿ. (ಫೋಟೋ ಕೃಪೆ: ರಮೇಶ್ ಅರವಿಂದ್ ಅವರ ಫೇಸ್‌ಬುಕ್ ಕವರ್ ಪೇಜ್))
(2 / 11)
2. ಯಾವುದೇ ಕೆಲಸ ಮಾಡಿ, ಅದಕ್ಕೆ ಏನಾದರೂ ಫಲಿತಾಂಶ ದೊರಕುವಂತೆ ಮಾಡಿ. ಫಲಿತಾಂಶ ದೊರಕುವಂತಹ ಕೆಲಸ ಮಾಡಲು ಆದ್ಯತೆ ನೀಡಿ. ನೀವು ಎಲ್ಲೇ ಇರಿ, ಯಾರ ಜತೆ ಇರಿ. ಆ ಕ್ಷಣಕ್ಕೆ ನಿಮ್ಮದೊಂದು ಕೊಡುಗೆ ಇರಬೇಕು. ಇನ್ನೊಬ್ಬರ ಬದುಕಲ್ಲಿ ಏನೋ ವ್ಯಾಲ್ಯೂ ಸೇರಿಸಬೇಕು. ನಿಮ್ಮಿಂದಾಗಿ ಆ ಕ್ಷಣದ ಮಹತ್ವ ಹೆಚ್ಚಬೇಕು.
(3 / 11)
3. ಜೀವನದಲ್ಲಿ ಬೆಳೆಯುವ ಹಂತದಲ್ಲಿ ಇತರರಿಂದ ಸಹಾಯ ಕೇಳಲು ಮರೆಯಬೇಡಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕೇಳಿ ತಿಳಿಯಿರಿ.
(4 / 11)
4. ಸಣ್ಣ ವಿಷಯಗಳನ್ನು ಕಡೆಗಣಿಸಬೇಡಿ. ಸಣ್ಣ ವಿಷಯಗಳೇ ದೊಡ್ಡದು. ಪ್ರತಿನಿತ್ಯ ಇತರರಿಗೆ ಹಾಯ್ ಹೇಳುವುದು, ಥ್ಯಾಂಕ್ಸ್ ಹೇಳುವುದು ಇತ್ಯಾದಿ ಸಣ್ಣ ವಿಷಯಗಳೆಂದು ಕಡೆಗಣಿಸಬೇಡಿ. ಸಣ್ಣ ವಿಷಯಗಳು ದೊಡ್ಡ ಬದಲಾವಣೆ ತರುತ್ತವೆ.
(5 / 11)
5. ತಕ್ಷಣ ಲಾಭ ಪಡೆಯಬೇಕೆಂದು ಬಯಸಬೇಡಿ. ತಾಳ್ಮೆ ಇರಲಿ. ಹತ್ತು ನಿಮಿಷದ ಸುಖಕ್ಕಾಗಿ ಜೀವನ ಕಳೆದುಕೊಂಡವರು ಇದ್ದಾರೆ. ನನಗೆ ಸಿನಿಮಾ ಉದ್ಯಮದಲ್ಲಿ ನಿಜವಾದ ಯಶಸ್ಸು ದೊರಕಲು ಹತ್ತು ವರ್ಷ ಬೇಕಾಯಿತು.
(7 / 11)
6. ನೋವು, ಅವಮಾನ, ಕೆಟ್ಟ ಘಟನೆಗಳು ನಡೆದಾಗ ಕುಗ್ಗಬೇಡಿ. ಕೆಲವೊಮ್ಮೆ ಘಟನೆಗಳು ಕೈಮೀರಿ ನಡೆಯುತ್ತವೆ. ಇವೆಲ್ಲ ಸಹಜ, ಇಂತಹ ಸಂದರ್ಭದಲ್ಲಿ ಕುಗ್ಗಬೇಡಿ.
(8 / 11)
7. ನೀವು ಧರಿಸುವ ಬಟ್ಟೆಯ ಕುರಿತು ಗಮನ ನೀಡಿ. ಕೆಲವೊಮ್ಮೆ ನಾವು ಧರಿಸುವ ಬಟ್ಟೆಯು ಇನ್ನೊಬ್ಬರಿಗೆ ನಮ್ಮ ಬಗ್ಗೆ ಮೊದಲ ಇಂಪ್ರೆಸನ್ ಮೂಡಿಸಲು ನೆರವಾಗುತ್ತದೆ. ಒಳ್ಳೆಯ ಬಟ್ಟೆಯ ಜತೆಗೆ ಮುಖದಲ್ಲಿ ಒಂದು ಮುಗುಳ್ನಗೆ ಇರಲಿ.
(9 / 11)
8. ಪ್ರತಿದಿನ ನಿಮ್ಮನ್ನು ನೀವು ಕರೆಕ್ಷನ್ ಮಾಡುತ್ತ ಇರಿ. ಪ್ರತಿನಿತ್ಯ ನೀವು ಎಷ್ಟು ತಪ್ಪುಗಳನ್ನು ತಿದ್ದಿಕೊಳ್ಳುತ್ತ ಸಾಗುವಿರಿ ಎನ್ನುವುದು ಅತ್ಯಂತ ಮುಖ್ಯವಾಗಿದೆ.
(10 / 11)
9. ನಿಮ್ಮೊಳಗಿನ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಿ. ಪ್ರತಿನಿತ್ಯ ನಿಮ್ಮ ಬ್ಯಾಟರಿಯನ್ನು ರಿಚಾರ್ಜ್ ಮಾಡಿಕೊಳ್ಳಿ.
ಇತರ ಗ್ಯಾಲರಿಗಳು