Aditi Prabhudeva: ಪುಟ್ಟ ಬಯಕೆ ಈಡೇರಿಸಿಕೊಂಡ ನಟಿ ಅದಿತಿ ಪ್ರಭುದೇವ್; ಪ್ರೆಗ್ನೆನ್ಸಿ ಫೋಟೋಗ್ರಫಿ ಅಂದ್ರೆ ಹೀಗಿರಬೇಕು ಅಂದ್ರು ಫ್ಯಾನ್ಸ್
- Aditi Prabhudeva Pregnancy Photoshoot: ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಕೊನೆಯ ತಿಂಗಳ ಪ್ರೆಗ್ನೇಸಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಕನ್ನಡ ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್ ಪಟ್ಲ 2022ರಲ್ಲಿ ವಿವಾಹವಾಗಿದ್ದರು.

(1 / 12)
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಕೊನೆಯ ತಿಂಗಳ ಪ್ರೆಗ್ನೇಸಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಕನ್ನಡ ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್ ಪಟ್ಲ 2022ರಲ್ಲಿ ವಿವಾಹವಾಗಿದ್ದರು.
(2 / 12)
ಆದಿತಿ ಪ್ರಭುದೇವ ಅವರು ಪ್ರೆಗ್ನಿಸಿ ಅವಧಿಯ ಕೊನೆಯ ತಿಂಗಳ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿಯೇ 2024ಕ್ಕೆ ನಾನು ಅಮ್ಮ ಎಂದು ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದರು.
(3 / 12)
ಚಂದದ ಕೆಂಪು ಸೀರೆ ಉಟುಕೊಂಡು ಗಾಜಿನ ಬಳೆಗಳನ್ನು ಧರಿಸಿ, ತಲೆಗೆ ಮಲ್ಲಿಗೆ ಹೂಗಳನ್ನು ತೊಟ್ಟುಕೊಂಡು ಅದಿತಿ ಪ್ರಭುದೇವ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನನ್ನ ಪುಟ್ಟ ಆಸೆ ಈಡೇರಿತು ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದು ಬಯಕೆ/ಸೀಮಂತ ಕಾರ್ಯಕ್ರಮದ ಸಮಯದ ಫೋಟೋವೇ ಎನ್ನುವುದು ಸ್ಪಷ್ಟವಾಗಿಲ್ಲ
(4 / 12)
ಫೋಟೋಶೂಟ್ ಅಂದ್ರೆ ಹೀಗೆ ಇರಬೇಕು. ಸೂಪರ್. ಮೈ ಹೊಟ್ಟೆ ತೋರಿಸೋದಲ್ಲ ಎಂದು ಇವರ ಇನ್‌ಸ್ಟಾಗ್ರಾಂ ಫೋಟೋಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸೀರೆ ಉಟ್ಟರೆ ಚೆನ್ನಾಗಿ ಕಾಣಿಸುತ್ತದೆ, ಇವರನ್ನು ನೋಡಿ ಉಳಿದ ನಟಿಯರು ಕಲಿಯೋದು ತುಂಬಾ ಇದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
(5 / 12)

(6 / 12)
ಇದೇ ಫೋಟೋಗೆ ಅದಿತಿ ಪತಿ ಯಶಸ್ ಪಟ್ಲ ಕೂಡ ಕಾಮೆಂಟ್ ಮಾಡಿದ್ದಾರೆ. ಪ್ರೀತಿಯಿಂದ ನನ್ನ ಮುದ್ದು ಬಂಗಾರಿ ಎಂದಿದ್ದಾರೆ. ನಿಮಗೆ ಅವಳಿ ಜವಳಿ ಮಕ್ಕಳಾಗಲಿ ಎಂದು ಇನ್ನೊಬ್ಬರು ಹಾರೈಸಿದ್ದಾರೆ. ಕನ್ನಡತಿಗೆ ಶುಭವಾಗಲಿ ಎಂದು ಸಾಕಷ್ಟು ಫ್ಯಾನ್ಸ್ ಹಾರೈಸಿದ್ದಾರೆ.
(7 / 12)
ಕನ್ನಡ ನಟಿ ಆದಿತಿ ಪ್ರಭುದೇವ ಅವರು 2022ರ ನವೆಂಬರ್ ತಿಂಗಳಲ್ಲಿ ಕೊಡಗಿನ ಕುವರ ಯಶಸ್ ಪಟ್ಲ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
(9 / 12)
2023ರ ಡಿಸೆಂಬರ್‌ನಲ್ಲಿ ಇವರಿಬ್ಬರ ಎಂಗೇಜ್‌ಮೆಂಟ್ ನಡೆದಿತ್ತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅದಿತಿ ಪ್ರಭುದೇವ ವಿವಾಹವಾಗಿದ್ದರು.
(10 / 12)
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅದಿತಿ ಪ್ರಭುದೇವ ಮತ್ತು ಯಶಸ್ ಪಟ್ಲ ಬೆಂಗಳೂರಿನಲ್ಲಿ ವೈಭವದಲ್ಲಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನವರಿ 2024ರಲ್ಲಿ ನಾವು ಈ ವರ್ಷ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು.
(11 / 12)
ವರದಿಗಳ ಪ್ರಕಾರ ಮುಂದಿನ ತಿಂಗಳು ಅದಿತಿ ಪ್ರಭುದೇವ ಮತ್ತು ಯಶಸ್ ಪಟ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇತರ ಗ್ಯಾಲರಿಗಳು