ಲವ್ವಲ್ಲಿ ಬಿದ್ರ ಆ್ಯಂಕರ್ ಅನುಶ್ರೀ; ನಿನ್ನ ಸನಿಹ ಚಂದ, ನಿನ್ನ ಸ್ಪರ್ಶ ಚಂದ ಅಂದ್ರು ಸಾಗರದಾಚೆಗಿನ ಸಾಗರಿ
- ಕನ್ನಡ ಕಿರುತೆರೆಯ ಖ್ಯಾತ ಆ್ಯಂಕರ್ ಅನುಶ್ರೀ ಅವರ ಮದುವೆ ಕುರಿತು ಎಲ್ಲರಿಗೂ ಕುತೂಹಲ. ಮಂಗಳೂರು ಬೆಡಗಿಗೆ ಯಾವಾಗ ಮದುವೆ ಎಂದು ಕೇಳುತ್ತಿರುತ್ತಾರೆ. ಈ ವರ್ಷ ಖಂಡಿತಾ ಮದುವೆಯಾಗ್ತಿನಿ ಎಂದು ಇತ್ತೀಚೆಗೆ ಅನುಶ್ರೀ ಅವರು ಖಚಿತಪಡಿಸಿದ್ದಾರೆ.
- ಕನ್ನಡ ಕಿರುತೆರೆಯ ಖ್ಯಾತ ಆ್ಯಂಕರ್ ಅನುಶ್ರೀ ಅವರ ಮದುವೆ ಕುರಿತು ಎಲ್ಲರಿಗೂ ಕುತೂಹಲ. ಮಂಗಳೂರು ಬೆಡಗಿಗೆ ಯಾವಾಗ ಮದುವೆ ಎಂದು ಕೇಳುತ್ತಿರುತ್ತಾರೆ. ಈ ವರ್ಷ ಖಂಡಿತಾ ಮದುವೆಯಾಗ್ತಿನಿ ಎಂದು ಇತ್ತೀಚೆಗೆ ಅನುಶ್ರೀ ಅವರು ಖಚಿತಪಡಿಸಿದ್ದಾರೆ.
(1 / 10)
ಕನ್ನಡ ಕಿರುತೆರೆಯ ಖ್ಯಾತ ಆ್ಯಂಕರ್ ಅನುಶ್ರೀ ಅವರ ಮದುವೆ ಕುರಿತು ಎಲ್ಲರಿಗೂ ಕುತೂಹಲ. ಮಂಗಳೂರು ಬೆಡಗಿಗೆ ಯಾವಾಗ ಮದುವೆ ಎಂದು ಕೇಳುತ್ತಿರುತ್ತಾರೆ. ಈ ವರ್ಷ ಖಂಡಿತಾ ಮದುವೆಯಾಗ್ತಿನಿ ಎಂದು ಇತ್ತೀಚೆಗೆ ಅನುಶ್ರೀ ಅವರು ಖಚಿತಪಡಿಸಿದ್ದಾರೆ.
(2 / 10)
ಇದೀಗ ನಟಿ ಮತ್ತು ಆ್ಯಂಕರ್ ಅನುಶ್ರೀ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ ಸಾಗರದಾಚೆಗಿನ ಸಾಗರಿ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಹಿನ್ನೆಲೆಯಲ್ಲಿ ನಿನ್ನ ಸನಿಹ ಚಂದ, ನಿನ್ನ ಸ್ಪರ್ಶ ಚಂದ ಎಂಬ ಹಾಡು ಕೇಳಿಸುತ್ತದೆ.
(3 / 10)
ಅನುಶ್ರೀ ಅವರು ತನ್ನ ಫೋಟೋಗಳ ಹಿನ್ನೆಲೆಗೆ ಬಳಸಿರುವುದು ಸಾಗರಿಯೇ ಸಾಗರಿಯೇ ಎಂಬ ಹಾಡನ್ನು. ಇದು ಗಲಾಟೆ ಅಳಿಯಂದಿರು ಸಿನಿಮಾದ ಹಾಡು. ಇದೇ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಂಡು ಸದ್ಯದಲ್ಲಿಯೇ ಮದುವೆಯಾಗುವ ಹಿಂಟ್ ನೀಡಿದ್ರ?
(4 / 10)
ಸೆಲೆಬ್ರಿಟಿಗಳ ಮದುವೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಇರುವುದು ಸಹಜ. ಕನ್ನಡದ ಸುಂದರ ನಿರೂಪಕಿ ಅನುಶ್ರೀ ಮದುವೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಥರೇವಾರಿ ವದಂತಿ ಹರಿದಾಡುತ್ತಿತ್ತು. ಈ ಹಿಂದೆ ತನ್ನ ಮದುವೆ ಕುರಿತಾದ ಪ್ರಶ್ನೆಗೆ ಅನುಶ್ರೀ ಹಾರಿಕೆಯ ಉತ್ತರ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ತನ್ನ ಮದುವೆ ಕುರಿತು ಖಚಿತಗೊಳಿಸಿದ್ದಾರೆ. ಈ ವರ್ಷವೇ ಮದುವೆಯಾಗ್ತೀನಿ ಎಂದಿದ್ದಾರೆ.
(5 / 10)
ಸೋಷಿಯಲ್ ಮೀಡಿಯಾದಲ್ಲಿ ಲೈವ್‌ಗೆ ಆಗಮಿಸಿದ ಅನುಶ್ರೀಗೆ ನಟ ನಾಗಭೂಷಣ್ ಮತ್ತು ನಟಿ ಮಲೈಕಾ ವಸುಪಾಲ್ "ಮದುವೆ" ಕುರಿತು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದಾರೆ. ಜತೆಗೆ, ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದೂ ಹೇಳಿದ್ದಾರೆ.
(6 / 10)
ಅನುಶ್ರೀ ಮದುವೆಯಾಗಲಿರುವ ಹುಡುಗಿ ಹೇಗಿರಬೇಕು?: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಾಗಭೂಷಣ್ ಅವರು "ಕೇಳ್ರಿ ಇಲ್ಲಿ. ನನಗೂ ಒಬ್ಬ ಗೆಳೆಯ ಬೇಕು. ಅವನು ಟೈಮಿಗೆ ಮುಂಚೆ ಬಂದು ಕಾಯಬೇಕು" ಎಂದು ಹೇಳಿದ್ದಾರೆ. "ನಿಮ್ಮ ಮಾತು ಕೇಳಿ ಇಷ್ಟಪಡೋರು ಇಷ್ಟಪಡೋಲ್ಲ. ಅಕ್ಕ ಹೇಳಬೇಕು. ನಿಮಗೆ ಯಾವ ತರಹದ ಹುಡುಗಬೇಕು?" ಎಂದು ಮಲೈಕಾ ವಸುಪಾಲ್ ಪ್ರಶ್ನಿಸಿದ್ದಾರೆ.
(7 / 10)
"ನಿಮ್ಮನ್ನ ಇಷ್ಟ ಪಡೋರು ಇಷ್ಟಪಡಲ್ಲ ಅಂದ್ರೆ ಯಾರೋ ಇಷ್ಟ ಪಡೋರು ನಿಮಗೆ ಆಲ್ರೆಡಿ ಇದ್ದಾರೆ. ಅವರು ಇಷ್ಟಪಡ್ತಿದ್ದಾರೆ ಅಂದಂಗಾಯ್ತು" ಎಂದು ಅನುಶ್ರೀ ಅವರು ಮಲೈಕಾಗೆ ಉತ್ತರಿಸಿದ್ದಾರೆ. "ಎನಿ ಟೈಮ್ ಫೋನ್‌ನಲ್ಲಿರ್ತಾರೆ. ಯಾರಿದ್ದಾರೋ ಏನೋ, ಯಾವನಿಗೊತ್ತು" ಎಂದು ನಾಗಭೂಷಣ್ ಹೇಳಿದ್ದಾರೆ. ಇವರು ಮಲೈಕಾಗೆ ಈ ಮಾತು ಹೇಳಿದ್ದಾರೆ. "ಅಕ್ಕಾ ನೀವು ಹೇಳಿ, ನಿಮ್ಮ ಹುಡುಗ ಹೇಗಿರಬೇಕು?" ಎಂದು ಮಲೈಕಾ ಮತ್ತೆ ಪ್ರಶ್ನಿಸಿದ್ದಾರೆ.
(8 / 10)
ಅದಕ್ಕೆ ಅನುಶ್ರೀ ಹೀಗೆ ಉತ್ತರಿಸಿದ್ದಾರೆ. "ಫಸ್ಟ್ ಆಫ್ ಆಲ್ ಅವನು ತುಂಬಾ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ. ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿರಬೇಕು. ಅಷ್ಟೇ ಸಾಕು ನಂಗೆ" ಎಂದು ಅನುಶ್ರೀ ಹೇಳಿದ್ದಾರೆ.
(9 / 10)
ಅನುಶ್ರೀ ಮದುವೆ ಯಾವಾಗ?: ಈ ವರ್ಷ ಆಗೋವಷ್ಟರಲ್ಲಿ ಮದುವೆ ಗ್ಯಾರಂಟಿ. ಈ ವರ್ಷ ಪಕ್ಕಾ ಮದುವೆಯಾಗೋದು ಎಂದು ಅನುಶ್ರೀ ಹೇಳಿದ್ದಾರೆ. ಸದ್ಯ ಅನುಶ್ರೀ ಚಂದದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತರ ಗ್ಯಾಲರಿಗಳು