Sangeetha Sringeri: ನಿನ್ನೆ ಮಾಡರ್ನ್, ಇಂದು ಟ್ರೆಡಿಷನ್; ರೆಟ್ರೊ- ಮೆಟ್ರೊ ಲುಕ್‌ನಲ್ಲಿ ಬಿಗ್‌ಬಾಸ್ ಸುಂದರಿ ಸಂಗೀತಾ ಶೃಂಗೇರಿ
- ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಇದೀಗ ಮಾಡರ್ನ್ ಮತ್ತು ಟ್ರೆಡಿಷನಲ್ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿನ್ನೆ (ಮಾರ್ಚ್ 12) ಮಾಡರ್ನ್ ಫೋಟೋ ಹಂಚಿಕೊಂಡಿದ್ದರು. ಇಂದು ಕಾಟೇರದ ಪಸಂದಾಗವ್ನೆ ಹಾಡು ನೆನಪಿಸುವಂತಹ ರೆಟ್ರೊ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಇದೀಗ ಮಾಡರ್ನ್ ಮತ್ತು ಟ್ರೆಡಿಷನಲ್ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿನ್ನೆ (ಮಾರ್ಚ್ 12) ಮಾಡರ್ನ್ ಫೋಟೋ ಹಂಚಿಕೊಂಡಿದ್ದರು. ಇಂದು ಕಾಟೇರದ ಪಸಂದಾಗವ್ನೆ ಹಾಡು ನೆನಪಿಸುವಂತಹ ರೆಟ್ರೊ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(1 / 10)
ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಇದೀಗ ಮಾಡರ್ನ್ ಮತ್ತು ಟ್ರೆಡಿಷನಲ್ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(2 / 10)
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಂಗೀತ ಅವರು ಇತ್ತೀಚೆಗೆ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಅತ್ಯುತ್ತಮವಾಗಿ ಸ್ಪರ್ಧಿಸಿ ಗೆಲುವಿನ ಹಂತದವರೆಗೆ ಬಂದಿದ್ದರು. ಅಂತಿಮವಾಗಿ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಅಗ್ರ ಎರಡು ಸ್ಥಾನ ಪಡೆದಿದ್ದರು.
(4 / 10)
ಇತ್ತೀಚೆಗೆ ಮಾಡರ್ನ್ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು (ಮಾ 13) ಟ್ರೆಡಿಷನಲ್ ಲುಕ್‌ನ ಫೋಟೋ ಹಂಚಿಕೊಂಡಿದ್ದಾರೆ.
(5 / 10)
ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕ್ರೆಡೆಟ್ ಆಗಿದ್ದ ಸಂಗೀತಾ ಕರ್ನಾಟಕ ಖೋಖೋ ತಂಡ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದರು. 2014ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಗ್ರ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು.
(6 / 10)
ಸಂಗೀತ ಶೃಂಗೇರಿ ರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಈ ರೀತಿ ಬಹುಮುಖ ಪ್ರತಿಭೆಯ ಸಂಗೀತ ಶೃಂಗೇರಿ ಬಿಗ್‌ಬಾಸ್‌ನಲ್ಲಿ ಕ್ರೀಡಾಸ್ಪೂರ್ತಿಯಿಂದ ಆಡಿದ್ದರು. ಇವರ ಅಗ್ರೆಸಿವ್ ಆಟ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಯಾಗಿತ್ತು.
(7 / 10)
'ಹರ ಹರ ಮಹಾದೇವ' ಕನ್ನಡ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ್ದರು. ಈ ಸೀರಿಯಲ್‌ನಲ್ಲಿ ಸತಿಯಾಗಿ ನಟಿಸಿದ್ದರು. ಇದೇ ಸೀರಿಯಲ್‌ನ ಶಿವನ ಪಾತ್ರದಾರಿ ವಿನಯ್ ಗೌಡ ಕೂಡ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದರು.
(8 / 10)
ಕನ್ನಡದ ಹಲವು ಸಿನಿಮಾಗಳಲ್ಲಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರದಲ್ಲಿ ನಟಿಸಿದ್ದರು.
(9 / 10)
ಎ+ ಎಂನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಸಾಲಗಾರರ ಸಹಕಾರ ಸಂಘ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
ಇತರ ಗ್ಯಾಲರಿಗಳು