ಯಾರೀಕೆ ಚಂದನವನದ ಸೋಜುಗದ ಸೂಜು ಮಲ್ಲಿಗೆ? ಚೈತ್ರಾ ಜೆ ಆಚಾರ್ ವೈವಿಧ್ಯಮಯ ಫೋಟೋಶೂಟ್‌ಗಳಿಗೆ ಕೊನೆಯುಂಟೆ
- Chaithra J Achar: ಸ್ಯಾಂಡಲ್‌ವುಡ್‌ನ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ ಚೈತ್ರಾ ಜೆ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇವರ ಫೋಟೋಶೂಟ್‌ಗಳು ವೈವಿಧ್ಯಮಯವಾಗಿರುತ್ತವೆ. ಇದೀಗ ಚೈತ್ರಾ ಜೆ ಆಚಾರ್ ಹಂಚಿಕೊಂಡಿರುವ ಫೋಟೋಗಳು ನೆಟ್ಟಿಗರ ಗಮನ ಸೆಳೆದಿವೆ.
- Chaithra J Achar: ಸ್ಯಾಂಡಲ್‌ವುಡ್‌ನ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ ಚೈತ್ರಾ ಜೆ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇವರ ಫೋಟೋಶೂಟ್‌ಗಳು ವೈವಿಧ್ಯಮಯವಾಗಿರುತ್ತವೆ. ಇದೀಗ ಚೈತ್ರಾ ಜೆ ಆಚಾರ್ ಹಂಚಿಕೊಂಡಿರುವ ಫೋಟೋಗಳು ನೆಟ್ಟಿಗರ ಗಮನ ಸೆಳೆದಿವೆ.
(1 / 9)
ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ನಟನೆಯ ಹ್ಯಾಪಿ ಬರ್ತ್‌ಡೇ ಟು ಮೀ ಚಿತ್ರವು ಇದೇ ಜೂನ್ 28ರಂದು ರಿಲೀಸ್ ಆಗಲಿದೆ. ಆದರೆ, ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ.
(All Photos Instagram/chaithra.j.achar/)(2 / 9)
ಇದೇ ಸಮಯದಲ್ಲಿ ಇದೇ ಮೊದಲ ಬಾರಿಗೆ ಚೈತ್ರಾ ಜೆ ಆಚಾರ್ ತಮಿಳು ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಈ ಕುರಿತು ಕೆಲವು ವಾರಗಳ ಹಿಂದೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ.
(3 / 9)
ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆಯಾಗಲು ಕಾರಣ ಆ ಸಿನಿಮಾದಲ್ಲಿ ಬಳಸಿರುವ ಕೆಲವೊಂದು ಕಠೋರ ಪದಗಳು. ಥಿಯೇಟರ್‌ನಲ್ಲಿ ಬಿಡುಗಡೆಯಾಗಬೇಕಿದ್ದರೆ ಈ ಸಿನಿಮಾದ ಆ ಪದಗಳಿಗೆ ಮ್ಯೂಟ್ ಹಾಕಬೇಕಾಗುತ್ತದೆ. ಅದು ಆ ಸಿನಿಮಾದ ಹಾಸ್ಯಕ್ಕೆ ಅಡ್ಡಿಯಾಗುತ್ತದೆ. ಇದೇ ಕಾರಣಕ್ಕೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಅವು ತುಂಬಾ ಕೆಟ್ಟ ಪದಗಳಲ್ಲ, ಈಗಿನ ತಲೆಮಾರು ನಿತ್ಯ ಮಾತನಾಡುವಾಗ ಬಳಸುವ ಪದಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(4 / 9)
ಚೈತ್ರಾ ಜೆ ಆಚಾರ್ ಅವರು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಟೋಬಿ, ಬ್ಲಿಂಕ್ ಸಿನಿಮಾಗಳ ನಂತರ ಇದೀಗ ಉತ್ತರಕಾಂಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಾನು ಇದೇ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸಲು ಸಹಿ ಮಾಡಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಿಂದ ಸಾಕಷ್ಟು ಆಫರ್‌ಗಳು ಬರುತ್ತಿವೆ ಎಂದು ಅವರು ಈ ಹಿಂದೆ ಹೇಳಿದ್ದರು.
(5 / 9)
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಇವರು ರಕ್ಷಿತ್ ಶೆಟ್ಟಿ ಜತೆ ನಟಿಸಿದ್ದರು. ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು. ಚೈತ್ರಾ ಜೆ ಆಚಾರ್ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
(6 / 9)
ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಚೈತ್ರಾ ಆಚಾರ್ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು. ಗಿಲ್ಕಿ ಎಂಬ ಸಿನಿಮಾದಲ್ಲೂ ನಟಿಸಿದ್ದರು. ರಾಜ್ ಬಿ ಶೆಟ್ಟಿ ಜತೆ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಇವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಟೋಬಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.
(7 / 9)
ಚೈತ್ರಾ ಜೆ ಆಚಾರ್ ಗಾಯಕಿಯಾಗಿಯೂ ಜನಪ್ರಿಯರು. ಇವರು ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡು ಸಖತ್ ಹಿಟ್ ಆಗಿತ್ತು.
(8 / 9)
ಇದೀಗ ಇವರು ಹಂಚಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ. ಇದೇ ಸಮಯದಲ್ಲಿ ಈ ಪ್ರತಿಭಾನ್ವಿತ ನಟಿಗೆ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಆಫರ್‌ಗಳು ಹೆಚ್ಚಾಗುತ್ತಿವೆ.
ಇತರ ಗ್ಯಾಲರಿಗಳು