Divya Spandana: ಕೋರ್ಟ್‌ಗೆ ಬಂದ ನಟಿ ರಮ್ಯಾಗೆ ಪ್ರಶ್ನೆಗಳ ಸುರಿಮಳೆ; ಮದುವೆ, ಸಿನಿಮಾ, ರಾಜಕೀಯ ಪ್ರಶ್ನೆಗಳಿಗೆ ಮೋಹಕ ತಾರೆ ಹೀಗಂದ್ರು
- ನಟಿ ರಮ್ಯಾ ನಿನ್ನೆ (ಜನವರಿ 7) ಬೆಂಗಳೂರಿನ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ದಿವ್ಯಾ ಸ್ಪಂದನ ಉತ್ತರಿಸಿದ್ದಾರೆ.
- ನಟಿ ರಮ್ಯಾ ನಿನ್ನೆ (ಜನವರಿ 7) ಬೆಂಗಳೂರಿನ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ದಿವ್ಯಾ ಸ್ಪಂದನ ಉತ್ತರಿಸಿದ್ದಾರೆ.
(1 / 9)
ನಟಿ ರಮ್ಯಾ ನಿನ್ನೆ (ಜನವರಿ 7) ಬೆಂಗಳೂರಿನ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ಮೋಹಕ ತಾರೆಗೆ ಕೋರ್ಟ್‌ನಲ್ಲಿ ಏನು ಕೆಲಸ ಎಂದು ಸಾಕಷ್ಟು ಜನರು ಅಚ್ಚರಿಯಿಂದ ನೋಡಿದ್ದರು. ಇವರು 2023ರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ.
(2 / 9)
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ರಮ್ಯಾ 2023ರಲ್ಲಿಯೇ ದೂರು ದಾಖಲಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಗೆ ತಡೆ ನೀಡಲು ಕೋರ್ಟ್ ಅನುಮತಿ ನೀಡಿರಲಿಲ್ಲ.
(3 / 9)
ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಬಳಿಕ ಒಟಿಟಿಯಲ್ಲಿಯೂ ಬಿಡುಗಡೆಯಾಗಿತ್ತು. ಸದ್ಯ ಜನರು ಈ ಸಿನಿಮಾ ವಿಷಯ ಮರೆತರೂ ಕೋರ್ಟ್‌ನಲ್ಲಿ ಈ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣ ಇನ್ನೂ ನಡೆಯುತ್ತಿದೆ.
(4 / 9)
2024ರ ಆರಂಭದಲ್ಲಿ ಅಂದರೆ ಜನವರಿ ಏಳರಂದು ಮೋಹಕ ತಾರೆ ರಮ್ಯಾ ಬೆಂಗಳೂರು ವಾಣಿಜ್ಯ ಸಂಕಿರ್ಣ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಕೋರ್ಟ್‌ಗೆ ಒಂದಿಷ್ಟು ದಾಖಲೆಗಳನ್ನು ಈ ಸಂದರ್ಭದಲ್ಲಿ ನೀಡಿದ್ದಾರೆ. ಜನವರಿ 15ರಂದು ಮೂಲ ಒಪ್ಪಂದದ ಪ್ರತಿ ಸಲ್ಲಿಸಲು ಕೋರ್ಟ್ ತಿಳಿಸಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚು ವಿವರ ಅವರು ನೀಡಲಿಲ್ಲ.
(5 / 9)
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ನಟಿ ರಮ್ಯಾ ನಟಿಸಿದ್ದರು. ಸಿನಿಮಾದ ಪ್ರಮೋದಲ್ಲಿಯೂ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾ ಬಿಡುಗಡೆಗೆ ಕೆಲವು ದಿನಗಳು ಇರುವಾಗ ಈ ಸಿನಿಮಾ ತಂಡದ ವಿರುದ್ಧ ದೂರು ದಾಖಲಿಸಿದ್ದರು.
(6 / 9)
"ನನ್ನ ಅನುಮತಿ ಇಲ್ಲದೆ ಸಿನಿಮಾದಲ್ಲಿ ನನ್ನ ದೃಶ್ಯಗಳನ್ನು ಬಳಸಲಾಗಿದೆ. ಈ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು" ಎಂದು ರಮ್ಯಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಆ ಸಮಯದಲ್ಲಿ ನ್ಯಾಯಾಲಯವು ರಮ್ಯಾರ ವಾದವನ್ನು ಪುರಸ್ಕರಿಸಿರಲಿಲ್ಲ.
(7 / 9)
ಇದೇ ಡಿಸೆಂಬರ್ 30ರಂದು ಕೂಡ ರಮ್ಯಾ ಕೋರ್ಟ್‌ಗೆ ಹಾಜರಾಗಿದ್ದರು. ಆ ಸಮಯದಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸಲು ಕೋರ್ಟ್ ಸೂಚಿಸಿತ್ತು. ಅದರಂತೆ, ಜನವರಿ 7ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಕೆಲವು ಮೂಲ ದಾಖಲೆಗಳನ್ನು ಇದೇ ಜನವರಿ 15ರಂದು ಸಲ್ಲಿಸಲು ಕೋರ್ಟ್ ಸೂಚಿಸಿದೆ.
(8 / 9)
ರಮ್ಯಾ ಕೋರ್ಟ್‌ಗೆ ಹಾಜರಾದ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುವ ಕುರಿತಾದ ಪ್ರಶ್ನೆಗೆ "ಒಳ್ಳೆಯ ಸ್ಟೋರಿ ಸಿಕ್ಕರೆ ಖಂಡಿತಾ ನಟಿಸುವೆ" ಎಂದು ಹೇಳಿದ್ದಾರೆ.
(PC: Divyaspandana /Ramya FC, Rashmi Gautam Facebook)ಇತರ ಗ್ಯಾಲರಿಗಳು