Saree Actress: ಸೀರೆಯಲ್ಲಿ ಎಷ್ಟು ಚಂದ ಕಾಣ್ತಾರಪ್ಪೋ; ರುಕ್ಮಿಣಿ ವಸಂತ್, ಮೇಘಾ ಶೆಟ್ಟಿ ಸೇರಿದಂತೆ ಕನ್ನಡ ನಟಿಯರ ಸೀರೆ ಫ್ಯಾಷನ್- Photos
- Kannada Actress Saree Fashion: ಆಷಾಢ ಕಳೆದು ವಿವಿಧ ಹಬ್ಬಗಳನ್ನು ಸ್ವಾಗತಿಸಲು ಎಲ್ಲರೂ ರೆಡಿಯಾಗುತ್ತಿದ್ದಾರೆ. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ಸುಂದರ ನಟಿಯರು ಸೀರೆಯಲ್ಲಿ ಫೋಟೋಶೂಟ್ ಮಾಡಿಕೊಳ್ಳಲು ಆರಂಭಿಸಿದ್ದಾರೆ. ರುಕ್ಮಿಣಿ ವಸಂತ್, ಮೇಘಾ ಶೆಟ್ಟಿ, ಅನುಪಮಾ ಗೌಡ, ಶ್ವೇತಾ ಪ್ರಸಾದ್ ಸೇರಿದಂತೆ ವಿವಿಧ ನಟಿಯರ ಸೀರೆ ಲುಕ್ ಇಲ್ಲಿದೆ.
- Kannada Actress Saree Fashion: ಆಷಾಢ ಕಳೆದು ವಿವಿಧ ಹಬ್ಬಗಳನ್ನು ಸ್ವಾಗತಿಸಲು ಎಲ್ಲರೂ ರೆಡಿಯಾಗುತ್ತಿದ್ದಾರೆ. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ಸುಂದರ ನಟಿಯರು ಸೀರೆಯಲ್ಲಿ ಫೋಟೋಶೂಟ್ ಮಾಡಿಕೊಳ್ಳಲು ಆರಂಭಿಸಿದ್ದಾರೆ. ರುಕ್ಮಿಣಿ ವಸಂತ್, ಮೇಘಾ ಶೆಟ್ಟಿ, ಅನುಪಮಾ ಗೌಡ, ಶ್ವೇತಾ ಪ್ರಸಾದ್ ಸೇರಿದಂತೆ ವಿವಿಧ ನಟಿಯರ ಸೀರೆ ಲುಕ್ ಇಲ್ಲಿದೆ.
(1 / 8)
ಕನ್ನಡ ಸಿನಿಮಾ ಮತ್ತು ಕಿರುತೆರೆಯ ಬಹುತೇಕ ನಟಿಯರಿಗೆ ಸೀರೆ ಅಂದ್ರೆ ಅಚ್ಚುಮೆಚ್ಚು. ಆಗಾಗ ಆರಡಿಯ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಕೆಲವರು ನಿರಂತರವಾಗಿ ಸೀರೆ ಫೋಟೋಗಳನ್ನು ಅಪ್ಲೋಡ್ ಮಾಡುತ್ತ ಇರುತ್ತಾರೆ. ಈ ತಿಂಗಳಲ್ಲಿ ಕೆಲವು ನಟಿಯರು ಸೀರೆ ಚಾಲೆಂಜ್ ಆರಂಭಿಸಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಕಣ್ಣಿಗೆ ಬಿದ್ದ ರುಕ್ಮಿಣಿ ವಸಂತ್, ಮೇಘಾ ಶೆಟ್ಟಿ, ಅನುಪಮಾ ಗೌಡ, ಶ್ವೇತಾ ಪ್ರಸಾದ್ ಅವರ ಸೀರೆ ಫ್ಯಾಷನ್ ಫೋಟೋಗಳು ಇಲ್ಲಿವೆ.
(2 / 8)
ರುಕ್ಮಿಣಿ ವಸಂತ್: ಇತ್ತೀಚೆಗೆ ಫಿಲ್ಮ್ ಫೇರ್ ಪ್ರಶಸ್ತಿಗೆ ರುಕ್ಮಿಣಿ ವಸಂತ್ ಸೀರೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದ ಫೋಟೋಗಳನ್ನು ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರುಕ್ಮಿಣಿ ವಸಂತ್ ಬಾನ ದಾರಿಯಲ್ಲಿ, ಸಪ್ತ ಸಾಗರದಾಚೆ ಎಲ್ಲೋ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
(3 / 8)
ರುಕ್ಮಿಣಿ ವಸಂತ್ ಅವರು ಬಘೀರಾ, ಭೈರತಿ ರಣಗಲ್ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ಕನ್ನಡದ ಬಹುನಿರೀಕ್ಷಿತಾ ಸಿನಿಮಾಗಳಾಗಿವೆ. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ರುಕ್ಮಿಣಿ ನಟಿಸುತ್ತಿದ್ದಾರೆ. ತಮಿಳಿನ ಏಸ್ ಮತ್ತು ಎಕ್‌ಕೆ 23 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
(4 / 8)
ಮೇಘಾ ಶೆಟ್ಟಿ: ಕನ್ನಡ ನಟಿ ಮೇಘಾ ಶೆಟ್ಟಿ ಸೀರೆ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಈ ಸುಂದರ ನಟಿ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.
(5 / 8)
ಮೇಘಾ ಶೆಟ್ಟಿ ಲಂಗ ದಾವಣಿಯಲ್ಲೂ ಸುಂದರವಾಗಿ ಕಾಣಿಸುತ್ತಾರೆ. ವಿನಯ್ ರಾಜ್‌ಕುಮಾರ್ ಜತೆ ಗ್ರಾಮಾಯಣ ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು. ನಿರೀಕ್ಷೆ ಹೆಚ್ಚಿಸಿದೆ. ಪ್ರಜ್ವಲ್ ದೇವರಾಜ್ ಅಭಿನಯದ ಚೀತಾ ಸಿನಿಮಾದಲ್ಲೂ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.
(6 / 8)
ಕನ್ನಡ ನಟಿ, ಕಿರುತೆರೆ ನಿರೂಪಕಿ ಅನುಪಮಾ ಗೌಡ ಕೂಡ ಹೊಸ ಸೀರೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರು ಕಳೆದ ಹಲವು ತಿಂಗಳುಗಳಿಂದ ಸೀರೆ ಚಾಲೆಂಜ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
(7 / 8)
ಅನುಪಮಾ ಗೌಡ ಅವರು ಒಟ್ಟು ನೂರು ದಿನದ ಸೀರೆ ಚಾಲೆಂಜ್ ವ್ರತ ಕೈಗೊಂಡಿದ್ದಾರೆ. ಸದ್ಯ ಇವರು ವೀಕ್ 9ರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಅಭಿಮಾನಿಗಳು ವಾಹ್ ಎಂದಿದ್ದು, ಥರೇವಾರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.
ಇತರ ಗ್ಯಾಲರಿಗಳು