ಚಿಲ್ಲಿ ಚಿಕನ್, ಇದು ತಿನ್ನೋದಲ್ಲ ನೋಡೋದು; ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ
- June 21 Release Movies: ಸ್ಯಾಂಡಲ್‌ವುಡ್‌ನಲ್ಲಿ ಈ ಶುಕ್ರವಾರ ಚಿಲ್ಲಿ ಚಿಕನ್, ಸಂಭವಾಮಿ ಯುಗೇ ಯುಗೇ ಮತ್ತು ದೇಸಾಯಿ ಎಂಬ ಮೂರು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದೇ ಸಮಯದಲ್ಲಿ ಧ್ರುವ ಸರ್ಜಾ ನಟನೆಯ ಬಹದ್ಧೂರ್ ಸಿನಿಮಾ 10 ವರ್ಷದ ಬಳಿಕ ಚಿತರಮಂದಿರಗಳಲ್ಲಿ ಮರುಬಿಡುಗಡೆಯಾಗುತ್ತಿದೆ.
- June 21 Release Movies: ಸ್ಯಾಂಡಲ್‌ವುಡ್‌ನಲ್ಲಿ ಈ ಶುಕ್ರವಾರ ಚಿಲ್ಲಿ ಚಿಕನ್, ಸಂಭವಾಮಿ ಯುಗೇ ಯುಗೇ ಮತ್ತು ದೇಸಾಯಿ ಎಂಬ ಮೂರು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದೇ ಸಮಯದಲ್ಲಿ ಧ್ರುವ ಸರ್ಜಾ ನಟನೆಯ ಬಹದ್ಧೂರ್ ಸಿನಿಮಾ 10 ವರ್ಷದ ಬಳಿಕ ಚಿತರಮಂದಿರಗಳಲ್ಲಿ ಮರುಬಿಡುಗಡೆಯಾಗುತ್ತಿದೆ.
(1 / 8)
June 21 Release Movies: ಈ ಶುಕ್ರವಾರ ಚಿಲ್ಲಿ ಚಿಕನ್ ಹೆಸರಿನ ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ. ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರ ನಿರ್ಮಾಣದ, ಪ್ರತೀಕ್ ಪ್ರಜೋಶ್ ಅವರ ನಿರ್ದೇಶನದ, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ 'ಚಿಲ್ಲಿ ಚಿಕನ್' ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. (ಕೊಲಾಜ್ ಚಿತ್ರ: ಚಿಲ್ಲಿ ಚಿಕನ್ ಮತ್ತು ದೇಸಾಯಿ ಸಿನಿಮಾ)
(2 / 8)
ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು, ಉತ್ತರ ಭಾರತದಿಂದ ಬೆಂಗಳೂರಿಗೆ ಬಂದ ಐವರು ಹುಡುಗರು ಚೈನೀಸ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತ, ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ.
(3 / 8)
ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಹೋಟೆಲ್ ಮಾಡ್ತಾರಾ, ಇಲ್ವಾ ಅನ್ನೋದೇ ಚಿಲ್ಲೀ ಚಿಕನ್ ಚಿತ್ರದ ಕಥಾಹಂದರ.
(4 / 8)
ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಪ್ರತಿಭೆಗಳು ಒಂದಾಗಿದ್ದಾರೆ. ನಿರ್ದೇಶಕ ಕೇರಳದವರಾದರೆ, ನಿರ್ಮಾಪಕ ಗುಜರಾತಿನವರು. ಕರ್ನಾಟಕ, ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
(5 / 8)
ಪ್ರತೀಕ್ ಪ್ರಜೋಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‍ಥಿನ್ ಥೋಕ್‍ಚೋಮ್, ಹಿರಾಕ್ ಸೋನೊವಾಲ್ ಮುಂತಾದವರಿದ್ದಾರೆ.
(ದೇಸಾಯಿ ಸಿನಿಮಾದ ಫೋಟೋ)(6 / 8)
ಸಿದ್ದಾಂತ್ ಸುಂದರ್ ಅವರ ಸಂಗೀತ ಸಂಯೋಜನೆ, ಶ್ರೀಶ್ ತೋಮರ್ ಅವರ ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ, ತ್ರಿಲೋಕ್ ಕೆಎಎಸ್ ಅವರ ಸಂಭಾಷಣೆ ಚಿತ್ರಕ್ಕಿದೆ.
(7 / 8)
ಜೂನ್ 21ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಂಭವಾಮಿ ಯುಗೇ ಯುಗೇ ಎಂಬ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯ್ ಶೆಟ್ಟಿ ಮತ್ತು ನಿಶಾ ರಜಪೂತ್ ಈ ಸಿನಿಮಾದ ನಾಯಕ ಮತ್ತು ನಾಯಕಿ. ದೇಸಾಯಿ ಹೆಸರಿನ ಇನ್ನೊಂದು ಸಿನಿಮಾವೂ ಈ ವಾರ ರಿಲೀಸ್ ಆಗುತ್ತಿದೆ.
ಇತರ ಗ್ಯಾಲರಿಗಳು