ನಕ್ಕು ಹಗುರಾಗಲು ಕನ್ನಡದ ಈ ಕಾಮಿಡಿ ಸಿನಿಮಾಗಳನ್ನು ನೋಡಿ
ಸದಾ ನಾವು ನಗುತ್ತಿರಲು ಅವಕಾಶ ದೊರೆತರೆ ಯಾರು ತಾನೇ ಬೇಡ ಅಂತಾರೆ? ಹಾಗಂತ ಸುಖಾ ಸುಮ್ಮನೆ ನಗಲು ಸಾಧ್ಯವಿಲ್ಲ ಬಿಡಿ. ಆದರೆ ಅವಕಾಶ ದೊರೆತರೆ ಮನಸಾರೆ ನಕ್ಕುಬಿಡಬೇಕು
(1 / 11)
ಕೆಲಸದ ಒತ್ತಡ, ಬೇಡದ ಚಿಂತೆಗಳನ್ನು ದೂರ ಮಾಡಲು ಕೆಲವರು ಸಿನಿಮಾಗಳ ಮೊರೆ ಹೋಗುತ್ತಾರೆ. ನೀವು ನಕ್ಕು ಹಗುರಾಗಬೇಕು ಎಂದಾದಲ್ಲಿ ಇಲ್ಲಿ ಪಟ್ಟಿ ಮಾಡಿರುವ ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡಿ. (PC: Facebook, Twitter, YouTube)
(2 / 11)
ನಾರದ ವಿಜಯ: ಅನಂತ್‌ನಾಗ್ ಡಬಲ್ ರೋಲ್‌ನಲ್ಲಿ ನಟಿಸಿದ್ದ 'ನಾರದ ವಿಜಯ' ಸಿನಿಮಾ 1980ರಲ್ಲಿ ತೆರೆ ಕಂಡಿತ್ತು. ಚಿತ್ರವನ್ನು ಜೈನ್ ಕಂಬೈನ್ಸ್ ಬ್ಯಾನರ್ ಅಡಿ ಸಿದ್ದಲಿಂಗಯ್ಯ, ವೀರಾಸ್ವಾಮಿ, ವರದರಾಜ್, ಚಂದುಲಾಲ್ ಜೈನ್ ಜೊತೆ ಸೇರಿ ನಿರ್ಮಿಸಿದ್ದರು. ಸಿದ್ದಲಿಂಗಯ್ಯ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಅನಂತ್‌ನಾಗ್, ಪದ್ಮಪ್ರಿಯಾ, ಹೇಮಾಚೌಧರಿ, ಕೆಎಸ್ ಅಶ್ವಥ್, ಲೋಕನಾಥ್, ತೂಗುದೀಪ ಶ್ರೀನಿವಾಸ್, ಎಂಪಿ ಶಂಕರ್ ಹಾಗೂ ಇನ್ನಿತರರು ನಟಿಸಿದ್ದಾರೆ.
(3 / 11)
ಗೌರಿ ಗಣೇಶ: 1991ರಲ್ಲಿ ತೆರೆ ಕಂಡಿದ್ದ ಈ ಚಿತ್ರವನ್ನು ಫಣಿ ರಾಮಚಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ಚಿತ್ರವನ್ನು ವಿಶ್ವಸಾಗರ ನಿರ್ಮಿಸಿದ್ದರು. ಚಿತ್ರದಲ್ಲಿ ಅನಂತ್‌ನಾಗ್, ವಿನಯ್ ಪ್ರಸಾದ್, ಶ್ರುತಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಹಾಗೂ ಇನ್ನಿತರರು ನಟಿಸಿದ್ದಾರೆ.
(4 / 11)
ಕೋತಿಗಳು ಸಾರ್ ಕೋತಿಗಳು: ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ದುಷ್ಯಂತ್ ಸಿಂಗ್, ಶ್ರೀನಿಧಿ ಜೊತೆ ಸೇರಿ ನಿರ್ಮಿಸಿರುವ ಕೋತಿಗಳು ಸಾರ್ ಕೋತಿಗಳು ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದರು. ಸಿನಿಮಾ 2001ರಲ್ಲಿ ತೆರೆ ಕಂಡಿತ್ತು. ಚಿತ್ರದಲ್ಲಿ ರಮೇಶ್ ಅರವಿಂದ್, ಎಸ್ ನಾರಾಯಣ್, ಮೋಹನ್, ಪ್ರೇಮಾ, ತಾರಾ, ಊರ್ವಶಿ ನಟಿಸಿದ್ದರು.
(5 / 11)
ರಾಮ ಶಾಮ ಭಾಮ: ರಮೇಶ್ ಅರವಿಂದ್ ನಿರ್ದೇಶನದ 'ರಾಮ ಶಾಮ ಭಾಮ' 2005ರಲ್ಲಿ ರಿಲೀಸ್ ಆಗಿತ್ತು. ಚಿತ್ರವನ್ನು ಕೆ ಮಂಜು ನಿರ್ಮಿಸಿದ್ದರು. ಚಿತ್ರದಲ್ಲಿ ರಮೇಶ್ ಅರವಿಂದ್, ಕಮಲ್ ಹಾಸನ್, ಶ್ರುತಿ, ಊರ್ವಶಿ, ಡೈಸಿ ಬೋಪಣ್ಣ, ಅನಿರುದ್ಧ್ ಜತ್ಕರ್, ದತ್ತಾತ್ರೇಯ ಹಾಗೂ ಇನ್ನಿತರರು ನಟಿಸಿದ್ದಾರೆ.
(6 / 11)
ರಾಮ ಶಾಮ ಭಾಮ: ರಮೇಶ್ ಅರವಿಂದ್ ನಿರ್ದೇಶನದ 'ರಾಮ ಶಾಮ ಭಾಮ' 2005ರಲ್ಲಿ ರಿಲೀಸ್ ಆಗಿತ್ತು. ಚಿತ್ರವನ್ನು ಕೆ ಮಂಜು ನಿರ್ಮಿಸಿದ್ದರು. ಚಿತ್ರದಲ್ಲಿ ರಮೇಶ್ ಅರವಿಂದ್, ಕಮಲ್ ಹಾಸನ್, ಶ್ರುತಿ, ಊರ್ವಶಿ, ಡೈಸಿ ಬೋಪಣ್ಣ, ಅನಿರುದ್ಧ್ ಜತ್ಕರ್, ದತ್ತಾತ್ರೇಯ ಹಾಗೂ ಇನ್ನಿತರರು ನಟಿಸಿದ್ದಾರೆ.
(7 / 11)
ಶ್ರಾವಣಿ ಸುಬ್ರಹ್ಮಣ್ಯ: ಗಣೇಶ್ ಹಾಗೂ ಅಮೂಲ್ಯ ಜೋಡಿಯಾಗಿ ನಟಿಸಿದ್ದ 'ಶ್ರಾವಣಿ ಸುಬ್ರಹ್ಮಣ್ಯ' 2013ರಲ್ಲಿ ರಿಲೀಸ್ ಆಗಿತ್ತು. ಚೆಲುವಿನ ಚಿತ್ತಾರ ಚಿತ್ರದಲ್ಲಿ ಸಿನಿಪ್ರಿಯರನ್ನು ಅಳಿಸಿದ್ದ ಈ ಜೋಡಿ ಈ ಚಿತ್ರದ ಮೂಲಕ ಎಲ್ಲರಿಗೂ ಕಾಮಿಡಿ ಕಚಗುಳಿ ಇಟ್ಟಿದೆ. ಕೆಎ ಸುರೇಶ್ ನಿರ್ಮಾಣದ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶಿಸಿದ್ದರು. ಅನಂತ್‌ನಾಗ್, ತಾರಾ, ಅವಿನಾಶ್, ವಿನಯಾ ಪ್ರಸಾದ್ ಸಾಧು ಕೋಕಿಲಾ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.
(8 / 11)
ಜೈ ಲಲಿತಾ: ಶರಣ್ ನಾಯಕನಾಗಿ ನಟಿಸಿರುವ 'ಜೈ ಲಲಿತಾ' ಸಿನಿಮಾ 2014ರಲ್ಲಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ಶರಣ್ ಹೆಣ್ಣಿನ ಪಾತ್ರದಲ್ಲಿ ನೋಡುಗರನ್ನು ನಕ್ಕು ನಲಿಸುತ್ತಾರೆ. ಇಂದಿರಾ, ಅರುಣ್ ಕುಮಾರ್, ಮಂಜುಳಾ ಶಂಕರ್ ಜೊತೆ ಶೇರಿ ನಿರ್ಮಿಸಿರುವ ಚಿತ್ರವನ್ನು ಪೊನ್ ಕುಮಾರನ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಶರಣ್ ಜೊತೆಗೆ ರವಿಶಂಕರ್ ಗೌಡ, ದಿಶಾ ಪಾಂಡೆ, ಟಿಎಸ್ ನಾಗಾಭರಣ, ಹರೀಶ್ ರಾಜ್, ಸಾಧು ಕೋಕಿಲ ಹಾಗೂ ಇನ್ನಿತರರು ನಟಿಸಿದ್ದಾರೆ.
(9 / 11)
ಅಧ್ಯಕ್ಷ: 2014ರಲ್ಲಿ ರಿಲೀಸ್ ಆದ 'ಅಧ್ಯಕ್ಷ' ಚಿತ್ರಕ್ಕೆ ನಂದಕಿಶೋರ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಸವರಾಜು, ಗಂಗಾಧರ್ ಹಾಗೂ ವೆಂಕಟೇಶ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶರಣ್, ಚಿಕ್ಕಣ್ಣ, ಹೆಬಾ ಪಟೇಲ್, ರವಿಶಂಕರ್, ವೀಣಾ ಸುಂದರ್, ರಮೇಶ್ ಭಟ್, ಕುರಿ ಪ್ರತಾಪ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
(10 / 11)
ಒಂದು ಮೊಟ್ಟೆಯ ಕಥೆ: ರಾಜ್ ಬಿ ಶೆಟ್ಟಿ ಮೊದಲ ಸಿನಿಮಾ 'ಒಂದು ಮೊಟ್ಟೆಯ ಕಥೆ' ಚಿತ್ರವನ್ನು ಸುಹಾನ್ ಪ್ರಸಾದ್, ಪವನ್ ಕುಮಾರ್ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಜ್ ಶೆಟ್ಟಿಯವರೇ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ 2017ರಲ್ಲಿ ತೆರೆ ಕಂಡಿತ್ತು. ಚಿತ್ರದಲ್ಲಿ ರಾಜ್ ಶೆಟ್ಟಿ, ಉಷಾ ಭಂಡಾರಿ, ಶ್ರೇಯಾ ಅಂಚನ್, ಪ್ರಕಾಶ್ ತುಮ್ಮಿನಾಡು, ಶೈನಿಶೆಟ್ಟಿ ಹಾಗೂ ಇನ್ನಿತರರು ನಟಿಸಿದ್ದಾರೆ.
ಇತರ ಗ್ಯಾಲರಿಗಳು