ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kenda Movie: 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ಗೆ ಕೆಂಡ ಆಯ್ಕೆ; ಸ್ಯಾಂಡಲ್‌ವುಡ್‌ಗೆ ಖುಷಿ ತಂದ ಸಹದೇವ್ ಕೆಲವಡಿ ಸಿನಿಮಾ

Kenda Movie: 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ಗೆ ಕೆಂಡ ಆಯ್ಕೆ; ಸ್ಯಾಂಡಲ್‌ವುಡ್‌ಗೆ ಖುಷಿ ತಂದ ಸಹದೇವ್ ಕೆಲವಡಿ ಸಿನಿಮಾ

  • ಸಹದೇವ್ ಕೆಲವಡಿ ನಿರ್ದೇಶದ `ಕೆಂಡ’ ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಚಿತ್ರತಂಡ ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದೆ. ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಪ್ರವೇಶ ಪಡೆದಿದೆ.

ಸಹದೇವ್ ಕೆಲವಡಿ ನಿರ್ದೇಶದ `ಕೆಂಡ’ ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಚಿತ್ರತಂಡ ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದೆ. ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಪ್ರವೇಶ ಪಡೆದಿದೆ. 
icon

(1 / 7)

ಸಹದೇವ್ ಕೆಲವಡಿ ನಿರ್ದೇಶದ `ಕೆಂಡ’ ಚಿತ್ರವೀಗ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಗಂಟುಮೂಟೆ ಖ್ಯಾತಿಯ ರೂಪಾ ರಾವ್ ನಿರ್ಮಾಣ ಮಾಡಿರುವ ಈ ಸಿನಿಮಾ ಭಿನ್ನ ಜಾಡಿನ ಕಥಾನಕವನ್ನು ಒಳಗೊಂಡಿದೆ ಎಂಬ ವಿಚಾರ ಈಗಾಗಲೇ ಸ್ಪಷ್ಟಗೊಂಡಿದೆ. 
icon

(2 / 7)

ಈ ಹೊತ್ತಿನಲ್ಲಿ ಕೆಂಡದ ಬಗೆಗಿನ ಮತ್ತೊಂದು ಖುಷಿಯ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ.  ಕೆಂಡ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.
icon

(3 / 7)

ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಪ್ರವೇಶ ಪಡೆದಿದೆ. ಇದು ನಿಜಕ್ಕೂ ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲದೇ, ಕನ್ನಡ ಚಿತ್ರರಂಗದ ಪಾಲಿಗೂ ಖುಷಿಯ ಸಂಗತಿ. ಈ ಫಿಲಂ ಫೆಸ್ಟಿವಲ್ ಪ್ರತಿಷ್ಠೆಯನ್ನು ಕಾಯ್ದುಕೊಂಡು ಬಂದಿದೆ. ಇದಕ್ಕೆ ಆಯ್ಕೆಯಾಗಬೇಕೆಂಬುದೇ ಅದೆಷ್ಟೋ ಸಿನಿಮಾ ಮಂದಿಯ ಕನಸಾಗಿರುತ್ತದೆ. 
icon

(4 / 7)

ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ಗೆ ಪ್ರವೇಶ ಪಡೆಯುವುದು ಸಲೀಸಿನ ಸಂಗತಿಯಲ್ಲ. ಅಲ್ಲಿ ನಾನಾ ಪರೀಕ್ಷೆಗಳಿಗೊಡ್ಡಿಕೊಂಡು ಜೈಸಿಕೊಂಡರೆ ಮಾತ್ರವೇ ಸಿನಿಮಾವೊಂದು ಆಯ್ಕೆಯಾಗಲು ಸಾಧ್ಯ. ಎಲ್ಲ ರೀತಿಯಿಂದಲೂ ಗುಣಮಟ್ಟ ಕಾಯ್ದುಕೊಂಡ ಸಿನಿಮಾಗಳಿಗೆ ಮಾತ್ರವೇ ಆ ಅವಕಾಶ ಸಿಗುತ್ತದೆ. ಅಂಥಾದ್ದನ್ನೆಲ್ಲ ದಾಟಿಕೊಂಡು ಆಯ್ಕೆಯಾಗಿದೆಯೆಂದರೆ, ಕೆಂಡದ ಅಸಲೀ ಕಸುವಿನ ಬಗ್ಗೆ ಹೆಚ್ಚೇನೂ ಬಿಡಿಸಿ ಹೇಳುವಂತಿಲ್ಲ.
icon

(5 / 7)

ಈ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿಯೇ ಸಹದೇವ್ ಕೆಲವಡಿ ಗೆಲುವಿನ ಮೆಟ್ಟಿಲೊಂದನ್ನು ಹತ್ತಿ ನಿಂತಂತಾಗಿದೆ. ಅಂದಹಾಗೆ, ಈ ಚಿತ್ರ ಇದೇ ಜೂನ್ ತಿಂಗಳಿನಲ್ಲಿ ತೆರೆಗಾಣಲಿದೆ.  
icon

(6 / 7)

ಸಿನಿಮಾ, ಸೀರಿಯಲ್‌, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ದಿನನಿತ್ಯ ಓದಿ. 
icon

(7 / 7)

ಸಿನಿಮಾ, ಸೀರಿಯಲ್‌, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ದಿನನಿತ್ಯ ಓದಿ. 

IPL_Entry_Point

ಇತರ ಗ್ಯಾಲರಿಗಳು