Vishnuvardhan Fans: ಧಾರವಾಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ, ಇಲ್ಲಿದೆ ಮದುವೆ ಫೋಟೋಗಳು-sandalwood news kannada late actor dr vishnuvardhan fans arrange mass marriage in dharwad here marriage photos pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vishnuvardhan Fans: ಧಾರವಾಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ, ಇಲ್ಲಿದೆ ಮದುವೆ ಫೋಟೋಗಳು

Vishnuvardhan Fans: ಧಾರವಾಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ, ಇಲ್ಲಿದೆ ಮದುವೆ ಫೋಟೋಗಳು

  • ಧಾರವಾಡದ ವಿಷ್ಣು ಸೇನಾ ಸಮಿತಿಯು ಡಾ. ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿದೆ. ಹಲವು ಜೋಡಿಗಳು ಈ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ. ಮೃತ್ಯುಂಜಯ ಹಿರೇಮಠ ಎಂಬ ಸಾಮಾನ್ಯ ಆಟೋ ಚಾಲಕ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಧಾರವಾಡದ ವಿಷ್ಣು ಸೇನಾ ಸಮಿತಿಯು ಡಾ. ವಿಷ್ಣುವರ್ಧನ್‌ ಹೆಸರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿದೆ. ಹಲವು ಜೋಡಿಗಳು ಈ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ. ಮೃತ್ಯುಂಜಯ ಹಿರೇಮಠ ಎಂಬ ಸಾಮಾನ್ಯ ಆಟೋ ಚಾಲಕ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
icon

(1 / 7)

ಸಾಹಸಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಅವರು ನಿಧನರಾಗಿ ಹದಿನಾಲ್ಕು ವರ್ಷ ಕಳೆದ್ರೂ ಅವರ ಅಭಿಮಾನಿಗಳಿಗೆ ಅವರ ಮೇಲೆ ದಿನದಿಂದ ದಿನಕ್ಕೆ ಅಭಿಮಾನ ಜಾಸ್ತಿಯಾಗುತ್ತಲೇ ಇದೆ. ಒಂದು ಕಡೆ ದಾದಾ ಪುಣ್ಯಭೂಮಿಯ ಹೋರಾಟ ಜೋರಾಗಿದೆ. 
icon

(2 / 7)

ಇನ್ನೊಂದು ಕಡೆ ವಿಷ್ಣು ಅಭಿಮಾನಿಗಳು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈಗ ದಾದಾ ಅಭಿಮಾನಿಗಳು ಮಾಡಿದ ಒಂದು ಕಾರ್ಯ ವಿಶೇಷ ದಾಖಲೆಯನ್ನು ಬರೆದಿದೆ. ಇದುವರೆಗೂ ಯಾವ ನಟರ ಅಭಿಮಾನಿಗಳು ಮಾಡದ ಕೆಲಸವನ್ನ ದಾದಾ ಅಭಿಮಾನಿಗಳು ಮಾಡಿದ್ದಾರೆ.
icon

(3 / 7)

ಈಗ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಎಸ್ ಎಸ್ (ವಿಷ್ಣು ಸೇನಾ ಸಮಿತಿ) ಸದಸ್ಯರು ಮತ್ತೊಂದು ಮೊದಲಿಗೆ ಸಾಕ್ಷಿಯಾಗಿದ್ದಾರೆ.. ಹೌದು ವಿಷ್ಣು ಸೇನಾ ಸಮಿತಿ ಧಾರವಾಡ ಘಟಕದ ಸದಸ್ಯರು ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಸಾಮೂಹಿಕ ವಿವಾಹವನ್ನ ಅದ್ದೂರಿಯಾಗಿಯೇ ಆಯೋಜನೆ ಮಾಡಿ, ಯಶಸ್ವಿಯಾಗಿ ಪೂರ್ತಿಗೊಳಿಸಿದ್ದಾರೆ.
icon

(4 / 7)

ಈ ಕಾರ್ಯಕ್ರಮದಲ್ಲಿ ವಿವಾಹವಾದ ಜೋಡಿಗಳು ವಿಷ್ಣುವರ್ಧನ್ ಅವರನ್ನ ನೆನೆದು ಭಾವುಕರಾಗಿದ್ದಾರೆ. ಹಾಗೆ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಿದ ವಿಷ್ಣುವರ್ಧನ್ ಅವ್ರ ಅಭಿಮಾನಿ ಮೃತ್ಯುಂಜಯ ಹಿರೇಮಠ ಸಾಮಾನ್ಯ ಆಟೋಚಾಲಕ ಅನ್ನೋದು ವಿಶೇಷ.
icon

(5 / 7)

ಸಾಮಾನ್ಯ ಆಟೋಚಾಲಕನಾಗಿ ವಿಷ್ಣು ಅವರ ಆದರ್ಶವನ್ನ ಇವರು ಪಾಲಿಸಿಕೊಂಡು ಬರುತ್ತಾ ಇದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ವಿಷ್ಣುವರ್ಧನ್ ಅವರ ಅಭಿಮಾನಿಗಳ ಕಾರ್ಯವನ್ನ ಹಾಡಿ ಹೊಗಳಿದ್ದಾರೆ.
icon

(6 / 7)

ವಿಷ್ಣುವರ್ಧನ್ ಅವರು ಬದುಕಿರೋವರೆಗೂ ಸಮಾಜಮುಖಿ ಕೆಲಸಗಳಲ್ಲಿ ಯಾರಿಗೂ ಗೊತ್ತಾಗದ ಹಾಗೆ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ರು.. ಈಗ ಅವರ ಆದರ್ಶವನ್ನು ಮುಂದುವರೆಸಿಕೊಂಡು ಹೋಗುತ್ತಿರೋ ಅಭಿಮಾನಿಗಳು ನಮ್ಮ ಕ್ಷೇತ್ರದಲ್ಲಿ ಇರೋದು ನಮಗೆ ಹೆಮ್ಮೆ , ಈ ಸಂಘಟನೆಗೆ ಸಪೋರ್ಟ್ ಮಾಡ್ತಿನಿ  ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು