ನನ್ನಂಥ ನಟರಿಗೆ ಸ್ಫೂರ್ತಿ ನೀವು, ನಾನೀಗ ಈ ಭೂಮಿ ಮೇಲಿನ ಅದೃಷ್ಟವಂತ; ತಮಿಳು ನಟ ವಿಕ್ರಮ್ ಭೇಟಿಯಾದ ರಿಷಬ್‌ಗೆ ಖುಷಿಯೋ ಖುಷಿ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನನ್ನಂಥ ನಟರಿಗೆ ಸ್ಫೂರ್ತಿ ನೀವು, ನಾನೀಗ ಈ ಭೂಮಿ ಮೇಲಿನ ಅದೃಷ್ಟವಂತ; ತಮಿಳು ನಟ ವಿಕ್ರಮ್ ಭೇಟಿಯಾದ ರಿಷಬ್‌ಗೆ ಖುಷಿಯೋ ಖುಷಿ Photos

ನನ್ನಂಥ ನಟರಿಗೆ ಸ್ಫೂರ್ತಿ ನೀವು, ನಾನೀಗ ಈ ಭೂಮಿ ಮೇಲಿನ ಅದೃಷ್ಟವಂತ; ತಮಿಳು ನಟ ವಿಕ್ರಮ್ ಭೇಟಿಯಾದ ರಿಷಬ್‌ಗೆ ಖುಷಿಯೋ ಖುಷಿ PHOTOS

  • ತಮಿಳು ನಟ ಚಿಯಾನ್‌ ವಿಕ್ರಮ್‌ ಇದೀಗ ತಂಗಲಾನ್‌ ಸಿನಿಮಾ ಬಿಡುಗಡೆ ಕೆಲಸದಲ್ಲಿದ್ದಾರೆ. ಸಿನಿಮಾ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಾಗ, ನಟ ರಿಷಬ್‌ ಶೆಟ್ಟಿ ಇಷ್ಟದ ನಟನನ್ನು ಭೇಟಿ ಮಾಡಿ ಬಂದಿದ್ದಾರೆ. 24 ವರ್ಷಗಳ ಬಳಿಕ ನನ್ನ ಆರಾಧ್ಯ ದೈವವನ್ನು ನೋಡಿದಷ್ಟೇ ಖುಷಿಯಾಯ್ತು ಎಂದು ವಿಕ್ರಮ್‌ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಇಲ್ಲಿವೆ ನೋಡಿ ಪೋಟೋಸ್‌.

ಕಾಂತಾರ ಮೂಲಕ ದೇಶದ ಗಮನ ಸೆಳೆದ ನಟ ರಿಷಬ್‌ ಶೆಟ್ಟಿ, ಸದ್ಯ ಕಾಂತಾರ ಚಿತ್ರದ ಪ್ರೀಕ್ವೆಲ್‌ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ತಮ್ಮಿಷ್ಟದ ನಟನನ್ನೂ ಭೇಟಿಯಾಗುವ ಅವಕಾಶವೂ ಅವರಿಗೆ ಸಿಕ್ಕಿತ್ತು. 
icon

(1 / 5)

(Twitter\ Rishab shetty)

ಹೌದು, ಕಾಲಿವುಡ್‌ ಸ್ಟಾರ್‌ ನಟ ಚಿಯಾನ್‌ ವಿಕ್ರಮ್‌, ತಮ್ಮ ಮುಂಬರುವ ತಂಗಲಾನ್‌ ಸಿನಿಮಾ ಪ್ರಮೋಷನ್‌ಗಾಗಿ ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಈ ಸಿನಿಮಾ ತಂಡದ ಜತೆಗೆ ರಿಷಬ್‌ ಶೆಟ್ಟಿ ಸಹ ಕಾಣಿಸಿಕೊಂಡಿದ್ದರು. 
icon

(2 / 5)

ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಅಪ್ಪಟ ಅಭಿಮಾನಿ ಅನ್ನುವ ರೀತಿಯಲ್ಲಿ ವಿಕ್ರಮ್‌ ಬಳಿ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ರಿಷಬ್‌, ಜತೆಗೆ ನಾಲ್ಕು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. 
icon

(3 / 5)

"ನಟನಾಗುವ ನನ್ನ ಪಯಣದಲ್ಲಿ ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿ. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಂದು ನಾನಿಷ್ಟ ಪಡುವ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದಕ್ಕಾಗಿ ಧನ್ಯವಾದಗಳು" ಎಂದಿದ್ದಾರೆ ರಿಷಬ್.‌ 
icon

(4 / 5)

ಈ ಜೋಡಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಇಬ್ಬರ ಫ್ಯಾನ್ಸ್‌ಗಳಿಂದ ಲೈಕ್ಸ್‌ ಸಂದಾಯವಾಗುತ್ತಿವೆ. ಆದಷ್ಟು ಬೇಗ ಇಬ್ಬರೂ ಕೂಡಿ ಸಿನಿಮಾ ಮಾಡಿ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು