Rishab shetty: ‘ಕಾಂತಾರ’ ಲುಕ್‌ನಲ್ಲಿಯೇ ಪತ್ನಿ ಪ್ರಗತಿಗೆ ಬರ್ತ್‌ಡೇ ಟ್ರೀಟ್ ಕೊಟ್ಟ ರಿಷಬ್ ಶೆಟ್ಟಿ; ಹೀಗಿವೆ ಫೋಟೋಸ್
- ಕಾಂತಾರ ಮೂಲಕ ಕರ್ನಾಟಕ ಮಾತ್ರವಲ್ಲ, ಭಾರತೀಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದವರು ನಟ ರಿಷಬ್ ಶೆಟ್ಟಿ. ಇದೀಗ ಕಾಂತಾರ 2 ಚಿತ್ರದ ಕೆಲಸಗಳಲ್ಲಿ ರಿಷಬ್ ಬಿಜಿಯಾಗಿದ್ದಾರೆ. ಆ ವರ್ಕ್‌ನ ಗ್ಯಾಪ್‌ನ ನಡುವೆಯೇ ಪತ್ನಿಯ ಬರ್ತ್‌ಡೇ ಆಚರಿಸಿ ಟ್ರೀಟ್ ಕೊಟ್ಟಿದ್ದಾರೆ. ಇಲ್ಲಿವೆ ಬರ್ತ್‌ಡೇ ಫೋಟೋಸ್.
- ಕಾಂತಾರ ಮೂಲಕ ಕರ್ನಾಟಕ ಮಾತ್ರವಲ್ಲ, ಭಾರತೀಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದವರು ನಟ ರಿಷಬ್ ಶೆಟ್ಟಿ. ಇದೀಗ ಕಾಂತಾರ 2 ಚಿತ್ರದ ಕೆಲಸಗಳಲ್ಲಿ ರಿಷಬ್ ಬಿಜಿಯಾಗಿದ್ದಾರೆ. ಆ ವರ್ಕ್‌ನ ಗ್ಯಾಪ್‌ನ ನಡುವೆಯೇ ಪತ್ನಿಯ ಬರ್ತ್‌ಡೇ ಆಚರಿಸಿ ಟ್ರೀಟ್ ಕೊಟ್ಟಿದ್ದಾರೆ. ಇಲ್ಲಿವೆ ಬರ್ತ್‌ಡೇ ಫೋಟೋಸ್.
(1 / 8)
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ಸದ್ಯ ಪತ್ನಿ ಬರ್ತ್‌ಡೇಯ ಖುಷಿಯಲ್ಲಿದ್ದಾರೆ.(instagram\ Shine Shetty)
(2 / 8)
ವೈಯಕ್ತಿಕ ಜೀವನದ ಜತೆಗೆ ಸಿನಿಮಾ ಕೆಲಸಗಳಿಗೂ ಸಾಥ್ ನೀಡುತ್ತಿರುವ ಜೀವಕ್ಕೆ ಬರ್ತ್‌ಡೇ ಸರ್ಪ್ರೈಸ್ ನೀಡಿ ಖುಷಿ ಪಡಿಸಿದ್ದಾರೆ.
(3 / 8)
ಸದ್ಯ ಕಾಂತಾರ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿರುವ ರಿಷಬ್ ಶೆಟ್ಟಿ, ಪತ್ನಿ ಪ್ರಗತಿಯ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿಯೇ ಆಚರಣೆ ಮಾಡಿದ್ದಾರೆ.
(4 / 8)
ಸಿನಿಮಾ ಸ್ನೇಹಿತರು ಮತ್ತು ಆಪ್ತರು ಈ ಬರ್ತ್‌ಡೇಯಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ವಿಜೇತ ಮತ್ತು ನಟ ಶೈನ್ ಶೆಟ್ಟಿ ಸಹ ಬರ್ತ್‌ಡೇಯಲ್ಲಿದ್ದರು.
(5 / 8)
ಅಂದಹಾಗೆ ಕಾಂತಾರ ಚಿತ್ರದ ಶೀರ್ಷಿಕೆ ಟೀಸರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಸಿನಿಮಾ ಮೇಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ. ಅದಕ್ಕಾಗಿ ವಿಶೇಷ ತಯಾರಿಯಲ್ಲಿಯೂ ಮೊಳಗಿದ್ದಾರೆ ರಿಷಬ್.
(6 / 8)
ಇದೀಗ ಕಾಂತಾರ ಪ್ರೀಕ್ವೆಲ್ ರಿಷಬ್ ಹೇಗೆ ಕಾಣಲಿದ್ದಾರೋ, ಅದೇ ಲುಕ್‌ನಲ್ಲಿದ್ದಾರೆ. ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮುಗಿಸಿಕೊಂಡಿದ್ದ ಕಾಂತಾರ ಸಿನಿಮಾ, ಇನ್ನೇನು ಶೀಘ್ರದಲ್ಲಿ ಶೂಟಿಂಗ್ ಕಡೆ ಮುಖ ಮಾಡಲಿದೆ.
(7 / 8)
ಮೊದಲ ಚಿತ್ರಕ್ಕೆ 16 ಕೋಟಿ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲಂಸ್, ಪ್ರೀಕ್ವೆಲ್‌ಗೆ ಕೈ ಬಿಚ್ಚಿ ಹಣ ಸುರಿಯುತ್ತಿದೆ. ನೂರು ಕೋಟಿ ವೆಚ್ಚದಲ್ಲಿ ಪಾರ್ಟ್ 2 ಮೂಡಿಬರಲಿದೆ ಎಂದೇ ಹೇಳಲಾಗುತ್ತಿದೆ.
ಇತರ ಗ್ಯಾಲರಿಗಳು