Yash Family: ಯಶ್ ಮಡಿಲಲ್ಲಿ ಐರಾ, ರಾಧಿಕಾ ಪಂಡಿತ್ ಸೊಂಟ ಏರಿದ ಅಥರ್ವ್; ರಾಕಿ ಬಾಯ್ ಫ್ಯಾಮಿಲಿ ಕಡೆಯಿಂದ ಫ್ಯಾನ್ಸ್‌ಗೆ ಬಂತೊಂದು ಸಂದೇಶ
- Yash Family: ಕೆಜಿಎಫ್ ಸಿನಿಮಾದ ಮೂಲಕ ಭಾರತ ಮತ್ತು ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್ ನಟ ಯಶ್ ಇಂದು ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುದ್ದಾದ ಕುಟುಂಬದ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಅಂದಹಾಗೆ ಇದೇ ಜನವರಿ 8ರಂದು ಯಶ್ ಹುಟ್ಟುಹಬ್ಬ.
- Yash Family: ಕೆಜಿಎಫ್ ಸಿನಿಮಾದ ಮೂಲಕ ಭಾರತ ಮತ್ತು ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್ ನಟ ಯಶ್ ಇಂದು ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುದ್ದಾದ ಕುಟುಂಬದ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಅಂದಹಾಗೆ ಇದೇ ಜನವರಿ 8ರಂದು ಯಶ್ ಹುಟ್ಟುಹಬ್ಬ.
(1 / 7)
ಸ್ಯಾಂಡಲ್‌ವುಡ್ ನಟ ಯಶ್ ಇಂದು ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುದ್ದಾದ ಕುಟುಂಬದ ಫೋಟೋವನ್ನೂ ಹಂಚಿಕೊಂಡಿದ್ದಾರೆ.
(2 / 7)
ಇದೇ ಸಮಯದಲ್ಲಿ ತಮ್ಮ ಫೋಟೋದ ಜತೆ ಯಶ್ ಹೀಗೊಂದು ಸಂದೇಶವನ್ನು ತನ್ನ ಅಭಿಮಾನಿಗಳಿಗೆ ನೀಡಿದ್ದಾರೆ. "ನಿಷ್ಕಲ್ಮಶ ನಗು, ಕನಸುಗಳನ್ನ ಸಾಕಾರಗೊಳಿಸಬಲ್ಲದು..." ಎಂಬ ಸಂದೇಶ ನೀಡಿದ್ದಾರೆ. ಕನ್ನಡ ಬಾರದೆ ಇರುವ ಇತರೆ ಅಭಿಮಾನಿಗಳಿಗೆ ಇಂಗ್ಲಿಷ್‌ನಲ್ಲಿ "Where love is unconditional, laughter unfiltered and dreams turn into reality.." ಎಂಬ ಸಂದೇಶ ನೀಡಿದ್ದಾರೆ.
(3 / 7)
ಈ ಸಂದೇಶದ ಜತೆಗೆ " ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ. "ನಿಮ್ಮನ್ನು ಮತ್ತೆ ಹಿರಿತೆರೆ ಮೇಲೆ ನೋಡಲು ಕಾಯುತ್ತಿದ್ದೇವೆ" ಎಂದು ಹಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
(4 / 7)
ಕೆಜಿಎಫ್ ನಂತರ ಯಶ್ ಯಾವುದೇ ಹೊಸ ಸಿನಿಮಾ ಬಿಡುಗಡೆ ಮಾಡಿರಲಿಲ್ಲ. ಕಳೆದ ತಿಂಗಳು 8ನೇ ತಾರೀಕು ತನ್ನ ಹೊಸ ಸಿನಿಮಾದ ಕುರಿತು ಅಪ್‌ಡೇಟ್ ನೀಡಿದ್ದರು. ಜಿಎಫ್ ಚಾಪ್ಟರ್ 2 ತೆರೆಕಂಡಿದ್ದು 2022ರ ಏಪ್ರಿಲ್ 14ರಂದು. ಇದಾದ ಬಳಿಕ ಯಶ್ 19ನೇಯ ಸಿನಿಮಾಕ್ಕೆ ಟಾಕ್ಸಿಕ್ ಎಂದು ಹೆಸರಿಡಲಾಗಿದೆ.
(5 / 7)
ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಯಶ್ ಅವರ 19ನೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಭೂಗತ ಜಗತ್ತಿನ ಜತೆಗೆ ಮಾಫಿಯಾವೊಂದರ ಸುತ್ತ ಇಡೀ ಸಿನಿಮಾ ಸುತ್ತಲಿದೆ. ಅಂತಾರಾಷ್ಟ್ರೀಯ ಕನೆಕ್ಷನ್ ಸಹ ಈ ಸಿನಿಮಾಕ್ಕಿರಲಿದೆ.
(6 / 7)
ಯಶ್ ಟಾಕ್ಸಿಕ್ ಅವರ ಸಿನಿಮಾವು ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ವಿಶೇಷವಾಗಿ ಇಂಗ್ಲಿಷ್‌ನಲ್ಲಿಯೂ ಈ ಸಿನಿಮಾ ತೆರೆ ಕಾಣಲಿದೆ ಎಂದೇ ಹೇಳಲಾಗುತ್ತಿದೆ.
ಇತರ ಗ್ಯಾಲರಿಗಳು