ನನಗೂ ಒಂದು ಕಥೆ ಮಾಡಿ ಎಂದು ವಿನಂತಿಸಿದ ಕಿಚ್ಚ ಸುದೀಪ್, ನಿರೀಕ್ಷೆ ಹೆಚ್ಚಿಸಿದ ಹರ್ಷಪ್ರಿಯಾ ನಿರ್ದೇಶನದ ಹೆಜ್ಜಾರು
- Sudeep Talk about Hejjaru Movie Teaser: ಹರ್ಷಪ್ರಿಯಾ ನಿರ್ದೇಶನದ ಹೆಜ್ಜಾರು ಎಂಬ ಕನ್ನಡ ಸಿನಿಮಾ ಇದೇ ಜುಲೈ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಗತ್ ಆಳ್ವಾ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಟಿಸಿದ ಈ ಚಿತ್ರದ ಪ್ಯಾರಲಾಲ್ ಜೀವನದ ಕಥೆ ಎಲ್ಲರ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದ ಟೀಸರ್ ನೋಡಿರುವ ಕಿಚ್ಚ ಸುದೀಪ್ ಮನಸಾರೆ ಹೊಗಳಿದ್ದಾರೆ.
- Sudeep Talk about Hejjaru Movie Teaser: ಹರ್ಷಪ್ರಿಯಾ ನಿರ್ದೇಶನದ ಹೆಜ್ಜಾರು ಎಂಬ ಕನ್ನಡ ಸಿನಿಮಾ ಇದೇ ಜುಲೈ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಗತ್ ಆಳ್ವಾ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಟಿಸಿದ ಈ ಚಿತ್ರದ ಪ್ಯಾರಲಾಲ್ ಜೀವನದ ಕಥೆ ಎಲ್ಲರ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದ ಟೀಸರ್ ನೋಡಿರುವ ಕಿಚ್ಚ ಸುದೀಪ್ ಮನಸಾರೆ ಹೊಗಳಿದ್ದಾರೆ.
(1 / 7)
ಹರ್ಷಪ್ರಿಯಾ ನಿರ್ದೇಶನದ ಹೆಜ್ಜಾರು ಎಂಬ ಕನ್ನಡ ಸಿನಿಮಾ ಇದೇ ಜುಲೈ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಗತ್ ಆಳ್ವಾ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಟಿಸಿದ ಈ ಚಿತ್ರದ ಪ್ಯಾರಲಾಲ್ ಜೀವನದ ಕಥೆ ಎಲ್ಲರ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದ ಟೀಸರ್ ನೋಡಿರುವ ಕಿಚ್ಚ ಸುದೀಪ್ ಮನಸಾರೆ ಹೊಗಳಿದ್ದಾರೆ. ಈ ಸಿನಿಮಾ ವಿಶೇಷ ಕಾನ್ಸೆಪ್ಟ್ ಹೊಂದಿದೆ, ವಿಶೇಷ ಕಥೆ ಹೊಂದಿದೆ. ನನಗೂ ಒಂದು ಕಥೆ ಬರೆಯಿರಿ ಎಂದು ನಿರ್ದೇಶಕರನ್ನು ಹುರಿದುಂಬಿಸಿದ್ದಾರೆ.
(2 / 7)
ಕಿಚ್ಚ ಸುದೀಪ್‌ಗೆ ಇಷ್ಟವಾಯ್ತು ಹೆಜ್ಜಾರು ಟೀಸರ್: "ನನಗೆ ನೀವು ತೋರಿಸಿದ ಹೆಜ್ಜಾರು ಸಿನಿಮಾದ ಟೀಸರ್ ತುಂಬಾ ಇಷ್ಟ ಆಯ್ತು. ಅದರ ಆಲೋಚನೆ, ಪರಿಕಲ್ಪನೆ ಎಲ್ಲವೂ ವಿಭಿನ್ನವಾಗಿದೆ. ತುಂಬಾ ಅದ್ಭುತವಾಗಿ ಶೂಟ್ ಮಾಡಿದ್ದೀರಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
(3 / 7)
ಈ ಸಿನಿಮಾ ತೆಗೆದ ಲೊಕೆಷನ್ ನೋಡಿ ನನಗೆ ಖುಷಿಯಾಯ್ತು, ನನಗೂ ಅಲ್ಲಿಗೆ ಹೋಗಬೇಕೆನಿಸುತ್ತದೆ. ತುಂಬಾ ಚೆನ್ನಾಗಿದೆ. ಕಲಾವಿದರೆಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಲ್ಲರಿಗೂ ಅಭಿನಂದನೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
(4 / 7)
ಭಗತ್ ಮತ್ತು ಶ್ವೇತ ಅವರೇ ಆಲ್ ದಿ ಬೆಸ್ಟ್. ಸ್ಕ್ರಿನ್ ಮೇಲೆ ಇಬ್ಬರೂ ಚೆನ್ನಾಗಿ ಕಾಣಿಸ್ತಾ ಇದ್ರಿ. ಹೆಜ್ಜಾರು ಟೈಟಲ್ ಕೂಡ ಬಹಳ ಅದ್ಭುತವಾಗಿದೆ. ನನಗೆ ಬಹಳಷ್ಟು ಇಷ್ಟವಾಯ್ತು ಎಂದು ಸುದೀಪ್ ಹೇಳಿದ್ದಾರೆ.
(5 / 7)
ಇದೇ ಸಂದರ್ಭದಲ್ಲಿ ಗೋಪಾಲ್ ದೇಶಪಾಂಡೆಯವರ ನಟನೆಯನ್ನು ಸುದೀಪ್ ಹಾಡಿ ಹೊಗಳಿದ್ದಾರೆ. ಗೋಪಾಲ್ ಅವರೇ ನಿಮ್ಮ ಎಷ್ಟೋ ಸಿನಿಮಾಗಳನ್ನು ನೋಡಿದ್ದೇನೆ. ನೀವು ಪರದೆ ಮೇಲೆ ಬಂದರೆ ಒಂದು ಕಲೆ. ಅದ್ಭುತವಾಗಿ ಕಲಾವಿದರಾಗಿ ನೀವು ನಿಮ್ಮನ್ನು ನೀವು ಬೆಳೆಸಿಕೊಂಡಿದ್ದೀರಿ. ನೀವು ಫೆಂಟಾಸ್ಟಿಕ್ ಆಕ್ಟರ್ ಎಂದು ಸುದೀಪ್ ಹೊಗಳಿದ್ದಾರೆ.
(6 / 7)
ನನಗೆ ಈ ಸಿನಿಮಾದ ಕಾನ್ಸೆಪ್ಟ್ ಇಷ್ಟವಾಯ್ತು. ಈ ಸಿನಿಮಾ ನೋಡಲು ಕಾತರನಾಗಿದ್ದೇನೆ. ಚಿತ್ರತಂಡದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದ ಹರ್ಷಿಪ್ರಿಯರಿಗೂ ಅಭಿನಂದನೆ ತಿಳಿಸಿದ್ದಾರೆ.
(7 / 7)
ಹೆಜ್ಜಾರು ಸಿನಿಮಾದ ವಿಶೇಷ: ಎರಡು ಯುಗಳ ಇಬ್ಬರು ವ್ಯಕ್ತಿಗಳ ಜಿಜ್ಞಾಸೆಯ ಜೀವನದ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ರಾಜಾರಂ 1965ರಲ್ಲಿ ಜನಿಸಿದರೆ ಭಗತ್ 1995ರಲ್ಲಿ ಜನಿಸಿದ್ದಾರೆ. ಇವರಿಬ್ಬರ ಪ್ಯಾರಲಾಲ್ ಕಥೆಯನ್ನು ಇದು ಹೇಳುತ್ತದೆ. ಚಿತ್ರಕ್ಕೆ ಭಗತ್ ಆಳ್ವ ನಾಯಕ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿ. ಗೋಪಾಲ್ ದೇಶಪಾಂಡೆ, ನವೀನ್ ಕೃಷ್ಣ, ಮುನಿ ಮತ್ತು ಅರುಣ್ ಬಾಲರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು