Megha Shetty Birthday: ಮೇಘಾ ಶೆಟ್ಟಿ ಬರ್ತ್‌ಡೇಗೆ ಸಿನಿಮಾ ತಂಡಗಳಿಂದ ಸಿಕ್ತು ಭರ್ಜರಿ ಉಡುಗೊರೆ PHOTOS
- ಬರ್ತ್‌ಡೇ ಖುಷಿಯಲ್ಲಿದ್ದಾರೆ ಸ್ಯಾಂಡಲ್‌ವುಡ್ ನಟಿ ಮೇಘಾ ಶೆಟ್ಟಿ. ಕಿರುತೆರೆ ಮೂಲಕ ಗಮನ ಸೆಳೆದ ನಟಿ ಮೇಘಾ, ಸದ್ಯ ಬೆಳ್ಳಿತೆರೆ ಮೇಲೆಯೇ ಹೆಚ್ಚು ಗಮನ ಹರಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಇವರ ಬರ್ತ್‌ಡೇ ನಿಮಿತ್ತ, ಮೂರು ಸಿನಿಮಾಗಳಿಂದ ವಿಶೇಷ ಉಡುಗೊರೆ ಸಿಕ್ಕಿದೆ.

(1 / 6)
ಜೀ ಕನ್ನಡದಲ್ಲಿ ಪ್ರಸಾರ ಕಂಡಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಯ ವೀಕ್ಷಕರ ಗಮನ ಸೆಳೆದ ನಟಿ ಮೇಘಾ ಶೆಟ್ಟಿ. ಇದೀಗ ಇದೇ ನಟಿ ಬರ್ತ್‌ಡೇ ಖುಷಿಯಲ್ಲಿದ್ದಾರೆ. (Instagram\ Megha Shetty)
(2 / 6)
ಸೀರಿಯಲ್ ಬಳಿಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದ ಈ ನಟಿ, ಹಲವು ಸಿನಿಮಾಗಳಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದಾರೆ.
(3 / 6)
2022ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುವ ಮೂಲಕ ಖಾತೆ ತೆರೆದಿದ್ದರು. ಅದಾದ ಬಳಿಕ ದಿಲ್‌ಪಸಂದ್, ಕಳೆದ ವರ್ಷ ತೆರೆಕಂಡಿದ್ದ ಕೈವ ಸಿನಿಮಾಗಳಲ್ಲೂ ನಟಿಸಿದ್ದರು.
(4 / 6)
ಇದೀಗ ಇದೇ ನಟಿ ಬರ್ತ್‌ಡೇ ನಿಮಿತ್ತ ಅವರು ಮುಂಬರುವ ಸಿನಿಮಾಗಳಿಂದ ಪೋಸ್ಟರ್‌ಗಳು ಉಡುಗೊರೆ ರೂಪದಲ್ಲಿ ಸಿಕ್ಕಿವೆ. ಆ ಪೈಕಿ ಆಪರೇಷನ್ ಲಂಡನ್ ಕೆಫೆ ಚಿತ್ರತಂಡದಿಂದ ಬರ್ತ್‌ಡೇ ಪೋಸ್ಟರ್ ರಿಲೀಸ್ ಮಾಡಲಾಗಿದೆ.
(5 / 6)
ಇತ್ತ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಗ್ರಾಮಾಯಣ ಸಿನಿಮಾದಲ್ಲಿಯೂ ಮೇಘಾ ಶೆಟ್ಟಿ, ಹಳ್ಳಿ ಹುಡುಗಿಯಾಗಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು