Sindhu Menon: ಸಿಂಧು ಮೆನನ್‌ ಈಗ 3 ಮಕ್ಕಳ ತಾಯಿ; ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿರುವ ನಂದಿ ಸಿನಿಮಾ ನಾಯಕಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sindhu Menon: ಸಿಂಧು ಮೆನನ್‌ ಈಗ 3 ಮಕ್ಕಳ ತಾಯಿ; ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿರುವ ನಂದಿ ಸಿನಿಮಾ ನಾಯಕಿ

Sindhu Menon: ಸಿಂಧು ಮೆನನ್‌ ಈಗ 3 ಮಕ್ಕಳ ತಾಯಿ; ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿರುವ ನಂದಿ ಸಿನಿಮಾ ನಾಯಕಿ

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ನಾಯಕಿಯಾಗಿಯೂ ಮಿಂಚಿದ ನಟಿಯರಲ್ಲಿ ಸಿಂಧು ಮೆನನ್‌ ಕೂಡಾ ಒಬ್ಬರು. ಸಿಂಧು ಸಿನಿಮಾಗಳಲ್ಲಿ ಡಿಮ್ಯಾಂಡ್‌ ಇರುವಾಗಲೇ ಮದುವೆಯಾಗಿ ವಿದೇಶಕ್ಕೆ ಹಾರಿದ್ದರು. 

ಈಗ ಸಿಂಧು ಮೆನನ್‌ ಮೂರು ಮಕ್ಕಳ ತಾಯಿ. ಪತಿ ಹಾಗೂ ಮಕ್ಕಳೊಂದಿಗಿನ ನಂದಿ ಸಿನಿಮಾ ನಟಿಯ ಇನ್ನಷ್ಟು ಫೋಟೋಗಳು ಇಲ್ಲಿವೆ. 
icon

(1 / 13)

1994 ರಲ್ಲಿ ತೆರೆ ಕಂಡ 'ರಶ್ಮಿ' ಸಿನಿಮಾ ಮೂಲಕ ಸಿಂಧು ಮೆನನ್‌ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. ಈ ಸಿನಿಮಾದಲ್ಲಿ ಸಿಂಧು ನಟಿ ಶ್ರುತಿಯ ಬಾಲ್ಯದ ಪಾತ್ರದಲ್ಲಿ ನಟಿಸಿದ್ದರು. 
icon

(2 / 13)

ಹುಲಿಯಾ, ಕನಸಲೂ ನೀನೇ ಮನಸಲೂ ನೀನೇ, ಪ್ರೇಮ ಪ್ರೇಮ ಪ್ರೇಮ, ಮಾರಿ ಕಣ್ಣು ಹೋರಿ ಮ್ಯಾಗಿ, ಜೇನಿನ ಹೊಳೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಿಂಧು ಬಾಲನಟಿಯಾಗಿ ನಟಿಸಿದರು. 
icon

(3 / 13)

2002ರಲ್ಲಿ ತೆರೆ ಕಂಡ 'ನಂದಿ' ಸಿನಿಮಾ ಮೂಲಕ ಸಿಂಧು ಮೆನನ್‌ ನಾಯಕಿಯಾಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದರು. ಈ ಚಿತ್ರದಲ್ಲಿ ಸಿಂಧು ಸುದೀಪ್‌ ಜೊತೆ ಡ್ಯೂಯೆಟ್‌ ಹಾಡಿದ್ದರು. 
icon

(4 / 13)

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ಸಿಂಧು ಮೆನನ್‌ ಬಾಲನಟಿಯಾಗಿ ನಾಯಕಿಯಾಗಿ ನಟಿಸಿದ್ದಾರೆ. 
icon

(5 / 13)

ಸಿಂಧು ಮೆನನ್‌ ಮೂಲತ: ಮಲಯಾಳಿ ಕುಟುಂಬಕ್ಕೆ ಸೇರಿದವರು. ಮಾತೃ ಭಾಷೆ ಮಲಯಾಳಂ ಆದರೂ ಸಿಂಧು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿದ್ದರಿಂದ ಅವರಿಗೆ ಚೆನ್ನಾಗಿ ಕನ್ನಡ ಬರುತ್ತದೆ. 
icon

(6 / 13)

ಸಿನಿಮಾದಲ್ಲಿ ಬೇಡಿಕೆಯ ನಟಿ ಆಗಿರುವಾಲೇ ಸಿಂಧು ಮೆನನ್‌ ಹೆತ್ತವರು ನೋಡಿದ ಪ್ರಭು ಎಂಬುವರನ್ನು 25 ಏಪ್ರಿಲ್‌ 2003 ರಲ್ಲಿ ಮದುವೆ ಆದರು. 
icon

(7 / 13)

ಮದುವೆ ಆದ ನಂತರ ಲಂಡನ್‌ಗೆ ತೆರಳಿದ ಸಿಂಧು, ಈಗ ಪತಿ ಪ್ರಭು ಹಾಗೂ ಮೂವರು ಮಕ್ಕಳೊಂದಿಗೆ ಅಲ್ಲೇ ನೆಲೆಸಿದ್ದಾರೆ. 
icon

(8 / 13)

ಇನ್ಫರ್ಮೇಷನ್‌ ಟೆಕ್ನಾಲಜಿ ಉದ್ಯೋಗಿ ಆಗಿರುವ ಪ್ರಭು ತಮಿಳುನಾಡು ಮೂಲದವರು. 
icon

(9 / 13)

ಇನ್ಫರ್ಮೇಷನ್‌ ಟೆಕ್ನಾಲಜಿ ಉದ್ಯೋಗಿ ಆಗಿರುವ ಪ್ರಭು ತಮಿಳುನಾಡು ಮೂಲದವರು. 

ಸಿಂಧು ಮೆನನ್‌ ಹಾಗೂ ಪ್ರಭು ದಂಪತಿಗೆ ಒಬ್ಬ ಪುತ್ರಿ, ಇಬ್ಬರು ಗಂಡು ಮಕ್ಕಳಿದ್ದಾರೆ. 
icon

(10 / 13)

ಸಿಂಧು ಮೆನನ್‌ ಹಾಗೂ ಪ್ರಭು ದಂಪತಿಗೆ ಒಬ್ಬ ಪುತ್ರಿ, ಇಬ್ಬರು ಗಂಡು ಮಕ್ಕಳಿದ್ದಾರೆ. 

ಮಗಳ ಹೆಸರು  ಸ್ವೆಟ್ಲಾನಾ (10 ವರ್ಷ) ಮೊದಲ ಮಗನ ಹೆಸರು ಸಾತ್ವಿಕ್‌ (5), ಎರಡನೇ ಮಗ ಸುವಾನ್‌ (2)
icon

(11 / 13)

ಮಗಳ ಹೆಸರು  ಸ್ವೆಟ್ಲಾನಾ (10 ವರ್ಷ) ಮೊದಲ ಮಗನ ಹೆಸರು ಸಾತ್ವಿಕ್‌ (5), ಎರಡನೇ ಮಗ ಸುವಾನ್‌ (2)

ಕೇರಳ ಕುಟ್ಟಿ ಸಿಂಧು, ತಮಿಳು ಹುಡುಗನನ್ನು ಮದುವೆ ಆಗಿ ವಿದೇಶದಲ್ಲಿ ನೆಲೆಸಿದ್ದರೂ ಹುಟ್ಟಿ ಬೆಳೆದ ಕರ್ನಾಟಕವನ್ನು ಮರೆತಿಲ್ಲ. ಆಗ್ಗಾಗ್ಗೆ ಕನ್ನಡ ಸಿನಿಮಾ ನೆನಪುಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ ಕೂಡಾ ಸಿಂಧು ಅವರ ಫೋಟೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು. 
icon

(12 / 13)

ಸಿಂಧು ಮೆನನ್ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಫ್ಯಾಮಿಲಿ ಜವಾಬ್ದಾರಿಯಲ್ಲಿ ಬ್ಯುಸಿ ಇರುವ ಸಿಂಧು ಅಭಿಮಾನಿಗಳ ಬೇಡಿಯನ್ನು ಈಡೇರಿಸಲಿದ್ದಾರಾ ನೋಡಬೇಕು. 
icon

(13 / 13)

ಇತರ ಗ್ಯಾಲರಿಗಳು