ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶಂಕರ್‌ನಾಗ್, ಪುನೀತ್‌ ರಾಜ್‌ಕುಮಾರ್‌ ಜತೆಗೆ ಎಂದೂ ನೋಡಿರದ, ಅತಿ ಅಪರೂಪದ ಮಾಸ್ಟರ್‌ ಮಂಜುನಾಥ್‌ ಅವ್ರ Exclusive ಫೋಟೋಗಳು

ಶಂಕರ್‌ನಾಗ್, ಪುನೀತ್‌ ರಾಜ್‌ಕುಮಾರ್‌ ಜತೆಗೆ ಎಂದೂ ನೋಡಿರದ, ಅತಿ ಅಪರೂಪದ ಮಾಸ್ಟರ್‌ ಮಂಜುನಾಥ್‌ ಅವ್ರ EXCLUSIVE ಫೋಟೋಗಳು

  • ಕನ್ನಡ ಚಿತ್ರರಂಗ ಮತ್ತು ನಟನೆಯಿಂದ ಕಳೆದ ಕೆಲ ದಶಕಗಳಿಂದ ದೂರವೇ ಉಳಿದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮಾಸ್ಟರ್‌ ಮಂಜುನಾಥ್‌, ಇಂದಿಗೂ ಎಲ್ಲರ ನೆನಪಿನಂಗಳದಲ್ಲಿದ್ದಾರೆ. ಎಲ್ಲರ ಬಾಲ್ಯವನ್ನು ಹಸಿರಾಗಿಸಿದ್ದ ಈ ನಟ ಸದ್ಯ ಐಟಿ ಕಂಪನಿಯ ಉದ್ಯೋಗಿ. ಮಡದಿ, ಮಕ್ಕಳು ಜತೆ ಸುಖಜೀವನ ನಡೆಸುತ್ತಿದ್ದಾರೆ. ಇಲ್ಲಿವೆ ಮಾಲ್ಡುಡಿ ಡೇಸ್‌ ಸ್ವಾಮಿಯ ಅವ್ರ EXCLUSIVE ಫೋಟೋಗಳು

ಮಾಸ್ಟರ್‌ ಮಂಜುನಾಥ್‌ ಅಂದ ತಕ್ಷಣ 90ರ ಕಾಲಘಟ್ಟದ ಅವರ ಸಾಕಷ್ಟು ಸಿನಿಮಾಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಾಲ್ಗುಡಿ ಡೇಸ್, ರಣಧೀರ, ಸಾಂಗ್ಲಿಯಾನ, ಅಂಜದ ಗಂಡು, ರಣರಂಗ, ಯುದ್ಧಕಾಂಡ, ಕಿಂದರಿ ಜೋಗಿ.. ಹೀಗೆ ಒಂದಕ್ಕಿಂತ ಒಂದು ಸಿನಿಮಾಗಳ ಮೂಲಕವೇ ಇಂದಿಗೂ ನಾಡಿನ ಜನರ ಮನದಲ್ಲಿದ್ದಾರೆ. ಆದರೆ, ತೆರೆಮೇಲಿನ ಕಲರ್‌ಫುಲ್‌ ಪಾತ್ರಗಳಂತೆ, ತೆರೆ ಹಿಂದೆಯೂ ಅಷ್ಟೇ ಏರಿಳಿತಗಳನ್ನು ಕಂಡಿದ್ದಾರೆ ಮಾಸ್ಟರ್‌ ಮಂಜುನಾಥ್‌. ಸದ್ಯ ಸಿನಿಮಾ ಬಿಟ್ಟು, IT ಉದ್ಯೋಗದಲ್ಲಿದ್ದಾರೆ. ಮಡದಿ ಮಗನ ಜತೆ ಜೀವನ ಸಾಗಿಸುತ್ತಿದ್ದಾರೆ. ಎಲ್ಲರ ಬಾಲ್ಯವನ್ನು ಹಸಿರಾಗಿಸಿದ್ದ ಮಾಸ್ಟರ್‌ ಮಂಜುನಾಥ್‌ ಅವ್ರ ಅಪರೂಪದ ಫೋಟೋಗಳು ಇಲ್ಲಿವೆ.  
icon

(1 / 11)

ಮಾಸ್ಟರ್‌ ಮಂಜುನಾಥ್‌ ಅಂದ ತಕ್ಷಣ 90ರ ಕಾಲಘಟ್ಟದ ಅವರ ಸಾಕಷ್ಟು ಸಿನಿಮಾಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಾಲ್ಗುಡಿ ಡೇಸ್, ರಣಧೀರ, ಸಾಂಗ್ಲಿಯಾನ, ಅಂಜದ ಗಂಡು, ರಣರಂಗ, ಯುದ್ಧಕಾಂಡ, ಕಿಂದರಿ ಜೋಗಿ.. ಹೀಗೆ ಒಂದಕ್ಕಿಂತ ಒಂದು ಸಿನಿಮಾಗಳ ಮೂಲಕವೇ ಇಂದಿಗೂ ನಾಡಿನ ಜನರ ಮನದಲ್ಲಿದ್ದಾರೆ. ಆದರೆ, ತೆರೆಮೇಲಿನ ಕಲರ್‌ಫುಲ್‌ ಪಾತ್ರಗಳಂತೆ, ತೆರೆ ಹಿಂದೆಯೂ ಅಷ್ಟೇ ಏರಿಳಿತಗಳನ್ನು ಕಂಡಿದ್ದಾರೆ ಮಾಸ್ಟರ್‌ ಮಂಜುನಾಥ್‌. ಸದ್ಯ ಸಿನಿಮಾ ಬಿಟ್ಟು, IT ಉದ್ಯೋಗದಲ್ಲಿದ್ದಾರೆ. ಮಡದಿ ಮಗನ ಜತೆ ಜೀವನ ಸಾಗಿಸುತ್ತಿದ್ದಾರೆ. ಎಲ್ಲರ ಬಾಲ್ಯವನ್ನು ಹಸಿರಾಗಿಸಿದ್ದ ಮಾಸ್ಟರ್‌ ಮಂಜುನಾಥ್‌ ಅವ್ರ ಅಪರೂಪದ ಫೋಟೋಗಳು ಇಲ್ಲಿವೆ.  (Photos\ Master Manjunath Twitter)

1987-88ರಲ್ಲಿ ಒಡಿಶಾದ ಭುವನೇಶ್ವರದಲ್ಲಿ ನಡೆದ 5 ನೇ ಅಂತರರಾಷ್ಟ್ರೀಯ ಮಕ್ಕಳ ಸಿನಿಮೋತ್ಸವದಲ್ಲಿ ಸ್ವಾಮಿ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರವನ್ನು ಪ್ರಶಸ್ತಿ. ಇದು ಮಾಸ್ಟರ್‌ ಮಂಜುನಾಥ್‌ ಅವರ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ. ಪ್ರಶಸ್ತಿ ರೂಪದಲ್ಲಿ ಬೆಳ್ಳಿ ಆನೆ ನೀಡಲಾಗಿತ್ತು. 
icon

(2 / 11)

ಗಂಭೀರ ವದನ ಪುಟಾಣಿ ಮಾಸ್ಟರ್‌ ಮಂಜುನಾಥ್‌
icon

(3 / 11)

ಗಂಭೀರ ವದನ ಪುಟಾಣಿ ಮಾಸ್ಟರ್‌ ಮಂಜುನಾಥ್‌

ನನ್ನ ಸಣ್ಣ ಬೆಚ್ಚಗಿನ ಕೆಂಪು ಆಕ್ಸೈಡ್ ಹೌಸ್‌ನಲ್ಲಿ ನನ್ನ ಟ್ರೋಫಿಗಳು ಮತ್ತು ಪದಕಗಳೊಂದಿಗೆ  1990ರಲ್ಲಿ
icon

(4 / 11)

ನನ್ನ ಸಣ್ಣ ಬೆಚ್ಚಗಿನ ಕೆಂಪು ಆಕ್ಸೈಡ್ ಹೌಸ್‌ನಲ್ಲಿ ನನ್ನ ಟ್ರೋಫಿಗಳು ಮತ್ತು ಪದಕಗಳೊಂದಿಗೆ  1990ರಲ್ಲಿ

ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಅಂಬರೀಶ್‌ ಮತ್ತು ರಮೇಶ್‌ ಭಟ್‌ ಜತೆಗೆ ಮತ್ಸರ ಸಿನಿಮಾ ಶೂಟಿಂಗ್‌ ಕ್ಷಣ
icon

(5 / 11)

ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಅಂಬರೀಶ್‌ ಮತ್ತು ರಮೇಶ್‌ ಭಟ್‌ ಜತೆಗೆ ಮತ್ಸರ ಸಿನಿಮಾ ಶೂಟಿಂಗ್‌ ಕ್ಷಣ

ಬಾಂಬೆಯಲ್ಲಿ ನ್ಯೂಟ್ರಾಮುಲ್ ಜಾಹೀರಾತಿನ ಚಿತ್ರೀಕರಣದ ವೇಳೆ ತೆಗೆದ ಫೋಟೋ ಇದು. ರಾಷ್ಟ್ರೀಯ ಬ್ರ್ಯಾಂಡ್‌ಗಾಗಿ ಮಾಸ್ಟರ್‌ ಮಂಜುನಾಥ್‌ ಅವರ ಮೊದಲ ಮಾಡೆಲಿಂಗ್ ಕ್ಲಿಕ್‌
icon

(6 / 11)

ಬಾಂಬೆಯಲ್ಲಿ ನ್ಯೂಟ್ರಾಮುಲ್ ಜಾಹೀರಾತಿನ ಚಿತ್ರೀಕರಣದ ವೇಳೆ ತೆಗೆದ ಫೋಟೋ ಇದು. ರಾಷ್ಟ್ರೀಯ ಬ್ರ್ಯಾಂಡ್‌ಗಾಗಿ ಮಾಸ್ಟರ್‌ ಮಂಜುನಾಥ್‌ ಅವರ ಮೊದಲ ಮಾಡೆಲಿಂಗ್ ಕ್ಲಿಕ್‌

ಆತ್ಮೀಯ ಗೆಳೆಯ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಒಡಿಶಾದ ಭುವನೇಶ್ವರ್ 1987-88ರಲ್ಲಿ 5ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಮಾಸ್ಟರ್‌ ಮಂಜುನಾಥ್‌ ಮತ್ತು ಸ್ನೇಹಿತರು.
icon

(7 / 11)

ಆತ್ಮೀಯ ಗೆಳೆಯ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಒಡಿಶಾದ ಭುವನೇಶ್ವರ್ 1987-88ರಲ್ಲಿ 5ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಮಾಸ್ಟರ್‌ ಮಂಜುನಾಥ್‌ ಮತ್ತು ಸ್ನೇಹಿತರು.

ಟಿ ಎಸ್ ನಾಗಾಭರಣ ಅವರ ನಿರ್ದೇಶನದ ಸ್ಟೋನ್ ಬಾಯ್ (1992) ಸಿನಿಮಾ ಸಂದರ್ಭದಲ್ಲಿ ಮಾರಿಷಸ್‌ನಲ್ಲಿ..
icon

(8 / 11)

ಟಿ ಎಸ್ ನಾಗಾಭರಣ ಅವರ ನಿರ್ದೇಶನದ ಸ್ಟೋನ್ ಬಾಯ್ (1992) ಸಿನಿಮಾ ಸಂದರ್ಭದಲ್ಲಿ ಮಾರಿಷಸ್‌ನಲ್ಲಿ..

ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ಶಂಕರ್‌ನಾಗ್‌, ರಮೇಶ್‌ ಭಟ್‌ ಅವರ ಜತೆಗೆ ಮಾಸ್ಟರ್‌ ಮಂಜುನಾಥ್
icon

(9 / 11)

ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ಶಂಕರ್‌ನಾಗ್‌, ರಮೇಶ್‌ ಭಟ್‌ ಅವರ ಜತೆಗೆ ಮಾಸ್ಟರ್‌ ಮಂಜುನಾಥ್

ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆದ ಮಾಸ್ಟರ್‌ ಮಂಜುನಾಥ್‌ 
icon

(10 / 11)

ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆದ ಮಾಸ್ಟರ್‌ ಮಂಜುನಾಥ್‌ 

1987ರ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಕಮಲ್‌ ಹಾಸನ್‌ ಮತ್ತು ಅರ್ಚನಾ ಅವರೊಂದಿಗೆ ಮಾಸ್ಟರ್‌ ಮಂಜುನಾಥ್
icon

(11 / 11)

1987ರ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಕಮಲ್‌ ಹಾಸನ್‌ ಮತ್ತು ಅರ್ಚನಾ ಅವರೊಂದಿಗೆ ಮಾಸ್ಟರ್‌ ಮಂಜುನಾಥ್

ಇತರ ಗ್ಯಾಲರಿಗಳು