ಯಶ್‌ ಟಾಕ್ಸಿಕ್‌ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಜನ ಹೀರೋಯಿನ್ಸ್‌; ನಾಲ್ವರಲ್ಲಿ ಯಶ್‌ ರೊಮ್ಯಾನ್ಸ್‌ ಯಾರ ಜತೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಶ್‌ ಟಾಕ್ಸಿಕ್‌ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಜನ ಹೀರೋಯಿನ್ಸ್‌; ನಾಲ್ವರಲ್ಲಿ ಯಶ್‌ ರೊಮ್ಯಾನ್ಸ್‌ ಯಾರ ಜತೆ?

ಯಶ್‌ ಟಾಕ್ಸಿಕ್‌ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಜನ ಹೀರೋಯಿನ್ಸ್‌; ನಾಲ್ವರಲ್ಲಿ ಯಶ್‌ ರೊಮ್ಯಾನ್ಸ್‌ ಯಾರ ಜತೆ?

ಕೆಜಿಎಫ್ 2 ಬಳಿಕ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಡ್ರಗ್ ಮಾಫಿಯಾ ಹಿನ್ನೆಲೆಯಲ್ಲಿ ವಿಭಿನ್ನ ಪರಿಕಲ್ಪನೆಯೊಂದಿಗೆ ಈ ಸಿನಿಮಾ ಮೂಡಿಬರಲಿದೆ. ಮಲಯಾಳಂ ನಿರ್ಮಾಪಕಿ ಗೀತು ಮೋಹನ್‌ದಾಸ್‌ ಈ ಚಿತ್ರದ ನಿರ್ದೇಶಕಿ. ಈ ಚಿತ್ರದಲ್ಲಿ ಬರೋಬ್ಬರಿ ನಾಲ್ವರು ನಾಯಕಿಯರು!

ಯಶ್ ಟಾಕ್ಸಿಕ್‌ ಚಿತ್ರದಲ್ಲಿ ಒಟ್ಟು ನಾಲ್ವರು ನಾಯಕಿಯರು ಮುಖ್ಯ ಪಾತ್ರಗಳಲ್ಲಿ  ನಟಿಸುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆ ನಾಲ್ವರ ಪೈಕಿ ಮೂವರು ಬಾಲಿವುಡ್ ಸುಂದರಿಯರಾದರೆ, ಇನ್ನೊಬ್ಬ ನಟಿ ದಕ್ಷಿಣದ ಟಾಪ್ ನಟಿ ಎಂದು ಈಗಾಗಲೇ ಸುದ್ದಿಯಾಗಿದೆ. 
icon

(1 / 5)

ಈ ಆಕ್ಷನ್ ಚಿತ್ರದಲ್ಲಿ ನಯನತಾರಾ ಯಶ್ ಸಹೋದರಿಯಾಗಿ ಆಶ್ಚರ್ಯಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾತ್ರವು ನಯನತಾರಾ ಅವರ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ. 
icon

(2 / 5)

ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ 'ಟಾಕ್ಸಿಕ್' ಚಿತ್ರದಲ್ಲಿ ನಾಯಕಿಯರಾಗಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇವರ ಪೈಕಿ ಯಾರ ಜತೆ ಯಶ್‌ ರೊಮ್ಯಾನ್ಸ್‌ ಮಾಡಲಿದ್ದಾರೆ? ಎಂಬುದು ಸದ್ಯದ ಪ್ರಶ್ನೆ
icon

(3 / 5)

ಬಾಲಿವುಡ್‌ ನಟಿ ಹುಮಾ ಖುರೇಷಿ ಟಾಕ್ಸಿಕ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವು ನೆಗೆಟಿವ್ ಶೇಡ್‌ನಲ್ಲಿ ಇರಲಿದೆ ಎನ್ನಲಾಗುತ್ತಿದೆ. 
icon

(4 / 5)

ಟಾಕ್ಸಿಕ್‌ ಚಿತ್ರ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರವನ್ನು ಕೆವಿಎನ್‌ ಸಂಸ್ಥೆ ಪ್ರೊಡ್ಯೂಸ್‌ ಮಾಡುತ್ತಿದೆ.  
icon

(5 / 5)

ಇತರ ಗ್ಯಾಲರಿಗಳು