ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಾರಿವಳು ಕೆಂಪು ಸೀರೆಯಲ್ಲಿ ಬೆಳದಿಂಗಳ ಬಾಲೆಯಂತೆ ನಕ್ಕ ಬೆಡಗಿ? ಸ್ಯಾಂಡಲ್‌ವುಡ್‌ನಲ್ಲಿ ಕೋಲ್ಮಿಂಚು ಹರಿಸಿದ ಸರಳ ಸ್ವಾತಿಷ್ಟ ಸುಂದರಿ

ಯಾರಿವಳು ಕೆಂಪು ಸೀರೆಯಲ್ಲಿ ಬೆಳದಿಂಗಳ ಬಾಲೆಯಂತೆ ನಕ್ಕ ಬೆಡಗಿ? ಸ್ಯಾಂಡಲ್‌ವುಡ್‌ನಲ್ಲಿ ಕೋಲ್ಮಿಂಚು ಹರಿಸಿದ ಸರಳ ಸ್ವಾತಿಷ್ಟ ಸುಂದರಿ

  • Swathishta Krishnan: ಒಂದು ಸರಳ ಪ್ರೇಮಕಥೆ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಸ್ವಾತಿಷ್ಟ ಕೃಷ್ಣನ್‌ ಇನ್‌ಸ್ಟಾಗ್ರಾಂನಲ್ಲಿ ಹೊಸಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಂಪು ಸೀರೆಯಲ್ಲಿ ಕೆಂದಾವರೆ ಅರಳಿದಂತೆ ನಕ್ಕ ಅವರ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಯಾರಿವಳು ಸುಂದರಿ? ಕನ್ನಡ ಸಿನಿಮಾದಲ್ಲಿ ಅವಕಾಶ ಪಡೆದ ಈ ನಟಿಯ ಹಿನ್ನಲೆ ಏನು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇದೆ. ದಕ್ಷಿಣ ಭಾರತದ ಹೊಸ ಕ್ರಶ್‌ನಂತೆ ಕಂಗೊಳಿಸುತ್ತಿರುವ ಈ ನಟಿ ವಿನಯ್‌ ರಾಜ್‌ ಕುಮಾರ್‌ ಜತೆ ಒಂದು  ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದರು.
icon

(1 / 12)

ಸ್ವಾತಿಷ್ಟ ಕೃಷ್ಣನ್‌ ಅವರು ಒಂದು ಸರಳ ಪ್ರೇಮಕಥೆ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.  ಇದಕ್ಕೂ ಮೊದಲು ಹಾಫ್‌ ಬಾಯ್ಲ್‌ ಎಂಬ ತಮಿಳು ವೆಬ್‌ ಸರಣಿಯಲ್ಲಿ ನಟಿಸಿದ್ದರು. ಜತೆಗೆ, ತಮಿಳಿನ ಜಡಾ, ಕೀ, ವಿಕ್ರಮ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(2 / 12)

ಹೊಸ ಅವಕಾಶಗಳನ್ನು ಎದಿರುನೋಡುತ್ತಿರುವ ಉದಯೋನ್ಮುಖ ನಟಿ ಸ್ವಾತಿಷ್ಟಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಅಭಿಮಾನಿ ಬಳಗವಿದೆ. 
icon

(3 / 12)

ಇವರು ಹಂಚಿಕೊಳ್ಳುವ ಫೋಟೋಗಳಿಗೆ, ಇವರ ಸರಳ ಫ್ಯಾಷನ್‌ ಲುಕ್‌ಗೆ, ಹರೆಯದ ಹುಡುಗರ ಹೃದಯಕ್ಕೆ ಕಿಚ್ಚು ಹತ್ತಿಸುವಂತಹ ಸುಂದರಿಗೆ ಸಾಕಷ್ಟು ಫ್ಯಾನ್ಸ್‌ ಇದ್ದಾರೆ. 
icon

(4 / 12)

ಈ ನಟಿ ಇತ್ತೀಚೆಗೆ ಒಂದು ಸರಳ ಪ್ರೇಮಕಥೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಅದು ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗಿತ್ತು. ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ಸ್ವಾದಿಷ್ಟ ಮತ್ತು ವಿನಯ್‌ ರಾಜ್‌ ಕುಮಾರ್ ವಿವಾಹವಾಗುವ ಸನ್ನಿವೇಶದ ಫೋಟೋಗಳನ್ನು ಹಂಚಿಕೊಂಡಿದ್ದರು.
icon

(5 / 12)

ಸ್ವಾತಿಷ್ಟ ಕೃಷ್ಣನ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು.  ಮೊದಲಿನ ಸ್ಲೈಡ್‌ನಲ್ಲಿ ಕೇವಲ ಮದುಮಗಳು ಸ್ವಾತಿಷ್ಟ ಕೃಷ್ಣನ್‌ ಫೋಟೋ ಇತ್ತು. ಎರಡು ಮತ್ತು ಮೂರನೇ ಸ್ಲೈಡ್‌ನಲ್ಲೂ ಮದುಮಗಳ ಫೋಟೋ ಇತ್ತು. ಮದು ಮಗ ಯಾರು ಎಂಬ ಅಚ್ಚರಿಯಿಂದಲೇ ಫ್ಯಾನ್ಸ್‌ ಮುಂದಿನ ಫೋಟೋ ನೋಡಿದ್ದಾರೆ. ಅಲ್ಲಿದ್ದದ್ದು ಕನ್ನಡ ನಟ ವಿನಯ್‌ ರಾಜ್‌ ಕುಮಾರ್‌.
icon

(6 / 12)

ಇದೇನೂ ಸುದ್ದಿ ಇಲ್ಲದೆ, ಸದ್ದಿಲ್ಲದೆ ಮದುವೆಯಾದ್ರ ಎಂದು ಸಾಕಷ್ಟು ಜನರು ಅಂದುಕೊಂಡರು ಫ್ಯಾನ್ಸ್‌. ಕೇವಲ ಕರ್ನಾಟಕ ಮತ್ತು ತಮಿಳುನಾಡಿನ ಅಭಿಮಾನಿಗಳಿಗೆ ಇದು ಒಂದು ಕ್ಷಣ ಅಚ್ಚರಿ ತಂದಿತ್ತು. ಒಂದಿಷ್ಟು ಜನರಿಗೆ ಈ ಫೋಟೋದ ಹಿಂದಿನ ರಹಸ್ಯ ಗೊತ್ತಾಯಿತು. ಇದು ಇತ್ತೀಚೆಗೆ ಬಿಡುಗಡೆಯಾದ ಒಂದು ಸರಳ ಪ್ರೇಮಕಥೆ ಸಿನಿಮಾದ ಫೋಟೋಗಳು ಎಂದು ಅರ್ಥ ಆಯ್ತು.
icon

(7 / 12)

ಆದ್ರೆ, ಸಿನಿಮಾದ ಇತರೆ ಸ್ಟಿಲ್‌ಗಳನ್ನು ಬಿಟ್ಟು ಮದುವೆಯ ಸ್ಟಿಲ್‌ ಅನ್ನೇ ಯಾಕೆ ಆಯ್ಕೆ ಮಾಡಿಕೊಂಡ್ರು ಎಂದು ಸಾಕಷ್ಟು ಜನರು ತಲೆಗೆ ಹುಳಬಿಟ್ಟುಕೊಂಡ್ರು.
icon

(8 / 12)

ಒಂದು ಸರಳ ಪ್ರೇಮಕಥೆ, ಬಿಹಾಂಡ್‌ ದಿ ಸೀನ್ಸ್‌. ಈ ಸಿನಿಮಾವನ್ನು ತುಂಬಾ ಇಷ್ಟಪಟ್ಟೆ. ಅನುರಾಗ, ಅತಿಶಯ ಮತ್ತು ಎಲ್ಲಾ ಸಿಬ್ಬಂದಿಗೆ ನನ್ನ ಪ್ರೀತಿಯ ಹಾರೈಕೆ" ಎಂದು ಈ ಫೋಟೋಗಳಿಗೆ ಸ್ವಾತಿಷ್ಟ ಕ್ಯಾಪ್ಷನ್‌ ನೀಡಿದ್ದಾರೆ. 
icon

(9 / 12)

ಸ್ವಾತಿಷ್ಟ ಕೃಷ್ಣನ್‌ ಅವರು ಈ ಫೋಟೋಗಳಿಗೆ ಸಾಕಷ್ಟು ಅಭಿಮಾನಿಗಳು "ಕಂಗ್ರಾಜ್ಯುಲೇಷನ್‌" "ಜೋಡಿ ಚೆನ್ನಾಗಿದೆ" "ಜೋಡಿ ಚೆನ್ನಾಗಿಲ್ಲ" ಎಂದೆಲ್ಲ ಕಾಮೆಂಟ್‌ ಮಾಡಿದ್ದರು. 
icon

(10 / 12)

ಕರ್ನಾಟಕ ಮೂಲದ ಈ ಪ್ರತಿಭಾನ್ವಿತ ನಟಿ ದಕ್ಷಿಣ ಭಾರತದ ಹೊಸ ಕ್ರಶ್‌ ಆಗಿ ಅಭಿಮಾನಿಗಳ ಕಣ್ಣಲ್ಲಿ ಕೋಲ್ಮಿಂಚು ಹರಿಸುತ್ತಿದ್ದಾರೆ. ಕನ್ನಡ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಕನಸಿನಲ್ಲಿದ್ದಾರೆ. 
icon

(11 / 12)

ಎಂತ ಬಾವುಡೋ ಎಂಬ ತೆಲುಗು ಮತ್ತು ತಮಿಳು ಮ್ಯೂಸಿಕ್‌ ವಿಡಿಯೋದಲ್ಲೂ ಇವರು ಅಭಿಮಾನಿಗಳ ಮನ ಸೆಳೆದಿದ್ದಾರೆ. ಬ್ಯಾಚುಲರ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಆಂಡ್‌ ಇನ್‌ಸ್ಟ್ರುಮೆಂಟೇಷನ್‌ ವಿಷಯದಲ್ಲಿ ಪದವಿ ಪಡೆದಿರುವ ಈಕೆ ಈಗ ತಮಿಳು, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. 
icon

(12 / 12)

ಇತರ ಗ್ಯಾಲರಿಗಳು