ದೊಡ್ಮನೆಯ ತುಂಬ ಅಭಿಮಾನಿ ದೇವರುಗಳ ಹೆಜ್ಜೆಗುರುತು; ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರಕ್ಕೆ ಸಿಕ್ತು ಫ್ಯಾನ್ಸ್‌ ಆಶೀರ್ವಾದ PHOTOS-sandalwood news pepe trailer release day a crowd of fans came to vinay rajkumars house to bless him mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೊಡ್ಮನೆಯ ತುಂಬ ಅಭಿಮಾನಿ ದೇವರುಗಳ ಹೆಜ್ಜೆಗುರುತು; ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರಕ್ಕೆ ಸಿಕ್ತು ಫ್ಯಾನ್ಸ್‌ ಆಶೀರ್ವಾದ Photos

ದೊಡ್ಮನೆಯ ತುಂಬ ಅಭಿಮಾನಿ ದೇವರುಗಳ ಹೆಜ್ಜೆಗುರುತು; ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರಕ್ಕೆ ಸಿಕ್ತು ಫ್ಯಾನ್ಸ್‌ ಆಶೀರ್ವಾದ PHOTOS

  • ದೊಡ್ಮನೆಯ ತುಂಬ ಅಭಿಮಾನಿ ದೇವರುಗಳ ಹೆಜ್ಜೆಗುರುತು. ರಾಜ್ಯದ ನಾನಾ ಭಾಗಗಳಿಂದ ದೊಡ್ಮನೆಯ ಅಭಿಮಾನಿಗಳು ಇಂದು ರಾಘವೇಂದ್ರ ರಾಜ್ ಕುಮಾರ್ ಅವರ ಮನೆಗೆ ಆಗಮಿಸಿದ್ದರು. ಇದಕ್ಕೆ ಕಾರಣ ಪೆಪೆ. ಹೌದು, ಪೆಪೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದ ಟ್ರೇಲರ್‌ ಸಹ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ದಂಡೇ ಸದಾಶಿವನಗರಕ್ಕೆ ಆಗಮಿಸಿತ್ತು.

ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪೆಪೆ. ಈ ಸಿನಿಮಾದ ಮೇಲೆ ದೊಡ್ಮನೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇದೆ. ಇಷ್ಟು ದಿನ ಕ್ಲಾಸ್ ಆಗಿದ್ದ ವಿನಯ್ ರಾಜ್‌ಕುಮಾರ್ ಈ ಬಾರಿ ಮಾಸ್ ಅವತಾರವೆತ್ತಿದ್ದಾರೆ.
icon

(1 / 7)

ತೆರೆಮೇಲೆ ಲವರ್‌ಬಾಯ್‌, ಮಿಡಲ್‌ ಕ್ಲಾಸ್‌ ಹುಡುಗನಾಗಿಯೇ ಕಂಡಿದ್ದ ವಿನಯ್‌ ರಾಜ್‌ಕುಮಾರ್‌, ಇದೀಗ ತಮ್ಮ ಸ್ಟ್ರೇಂಥ್ ಏನು ಎಂಬುದನ್ನು ತೋರಿಸಲು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಆಟೋ ಸಾರಥಿಗಳಿಂದ ಚಿತ್ರದ ರಿಲೀಸ್ ಡೇಟ್ ಸಹ ಅನೌನ್ಸ್ ಮಾಡಿ ಸರ್ಪ್ರೈಸ್‌ ನೀಡಿತ್ತು ಪೆಪೆ ತಂಡ. 
icon

(2 / 7)

ಇದೀಗ ಇದೇ ಪೆಪೆ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು (ಭಾನುವಾರ) ದೊಡ್ಮನೆಗೆ ಆಗಮಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ವಿನಯ್ ರಾಜ್ ಕುಮಾರ್ ಅವರನ್ನ ಕಂಡು ಪುಳಕಿತರಾದರು.
icon

(3 / 7)

 ಈ ಸಂದರ್ಭದಲ್ಲಿ ವಿನಯ್ ರಾಜ್ ಕುಮಾರ್ ಅವರ ಸಹೋದರ ಯುವರಾಜ್ ಕುಮಾರ್ ಕೂಡ ಫ್ಯಾನ್ಸ್ ಜೊತೆಗೆ ಫೋಟೋ ಕ್ಲಿಕಿಸಿಕೊಂಡು ಸಂತೋಷ ಹಂಚಿದ್ರು.
icon

(4 / 7)

ಇಂದು ಸಂಜೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಪೆಪೆ ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ.
icon

(5 / 7)

ಪೆಪೆ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹೆಚ್ಚಾಗಿದ್ದು ಆಗಸ್ಟ್ 30ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 
icon

(6 / 7)

ಶ್ರೀಲೇಶ್ ಎಸ್ ನಾಯರ್ ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಒಂದು ರೀತಿ ಪರಿಪೂರ್ಣ ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ.
icon

(7 / 7)

ಇತರ ಗ್ಯಾಲರಿಗಳು