Pooja Gandhi: ಕುವೆಂಪು ಆಶಯದ ಮಂತ್ರ ಮಾಂಗಲ್ಯ ಮದುವೆ ಬಳಿಕ ಕುಪ್ಪಳ್ಳಿಯ ಕವಿಶೈಲಕ್ಕೆ ಪೂಜಾ ಗಾಂಧಿ ಭೇಟಿ
- ಕನ್ನಡ, ಕರ್ನಾಟಕದ ವಿಚಾರದಲ್ಲಿ ನಟಿ ಪೂಜಾ ಗಾಂಧಿಗೆ ಅತಿಯಾದ ಅಭಿಮಾನ. ಕನ್ನಡ ಮಾತನಾಡುವುದರ ಜತೆಗೆ ಕನ್ನಡ ಬರವಣಿಗೆಯನ್ನೂ ಕಲಿತಿದ್ದಾರವರು. ಅಷ್ಟಕ್ಕೆ ಮುಗಿಯಲಿಲ್ಲ. ಇತ್ತೀಚೆಗಷ್ಟೇ ಕುವೆಂಪು ಅವರ ಆಶಯದಂತೆ ಉದ್ಯಮಿ ವಿಜಯ್ ಘೋರ್ಪಡೆ ಅವರ ಜತೆಗೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಕವಿಶೈವಕ್ಕೆ ಭೇಟಿ ನೀಡಿದ್ದಾರೆ.

(1 / 9)
ನವೆಂಬರ್ 29ರಂದು ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ವರಿಸಿದ್ದರು ಪೂಜಾ ಗಾಂಧಿ.
(2 / 9)
ಬೆಂಗಳೂರಿನ ಯಲಹಂಕದಲ್ಲಿ ನಡೆದ ಈ ಸರಳ ವಿವಾಹ ಕಾರ್ಯಕ್ರಮದಲ್ಲಿ ಆತ್ಮೀಯರು ಮತ್ತು ಎರಡೂ ಕುಟುಂಬಗಳ ಆಪ್ತರಷ್ಟೇ ಭಾಗವಹಿಸಿದ್ದರು.
(3 / 9)
ಅದ್ಧೂರಿ ವಿವಾಹವಾಗುವ ಸಿನಿಮಾ ಸೆಲೆಬ್ರಿಟಿಗಳ ನಡುವೆ ಪೂಜಾ ಗಾಂಧಿ ವಿಭಿನ್ನವಾಗಿ ಗುರುತಿಸಿಕೊಂಡು, ಎಲ್ಲರಿಂದಲೂ ಮೆಚ್ಚುಗೆ ಪಡೆದರು.
(4 / 9)
ಕನ್ನಡ ಮತ್ತು ಕುವೆಂಪು ಮೇಲಿನ ಅಭಿಮಾನವನ್ನು ಮತ್ತೊಮ್ಮೆ ಹೊರಗೆಡವಿದ್ದಾರೆ. ನೇರವಾಗಿ ತೀರ್ಥಹಳ್ಳಿಯ ಕುಪ್ಪಳ್ಳಿಗೆ ತೆರಳಿದ್ದಾರೆ.
(5 / 9)
ಮದುವೆ ಬಳಿಕ ವಿದೇಶಗಳಿಗೆ ಹನಿಮೂನ್‌ಗೆ ತೆರಳುವ ಜೋಡಿಯ ನಡುವೆ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ವಿಶೇಷವಾಗಿ ಕಾಣಿಸಿದ್ದಾರೆ.
(6 / 9)
ಕುಪ್ಪಳ್ಳಿಯ ಕವಿಶೈಲಕ್ಕೆ ತೆರಳಿ ಕವಿ ಸಮಾಧಿ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕುವೆಂಪು ಮನೆಗೂ ಭೇಟಿ ನೀಡಿ ಬಂದಿದ್ದಾರೆ.
(8 / 9)
ಕನ್ನಡದ ಕನ್ನಡತಿ ಶ್ರೀಮತಿ ಪೂಜಾ ಗಾಂಧಿ, ಸವಿ ಹಾರೈಕೆಗಳು ಪೂಜಾ ಗಾಂಧಿ ಎಂಬಿತ್ಯಾದಿ ಕಾಮೆಂಟ್‌ಗಳನ್ನು ಹಾಕುತ್ತ ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಇತರ ಗ್ಯಾಲರಿಗಳು