Salaar cast: ಅಷ್ಟಕ್ಕೂ ‘ಸಲಾರ್’ ಏಕೆ ನೋಡಬೇಕು? ಇದು ಕನ್ನಡಿಗರ ತೆಲುಗು ಸಿನಿಮಾ; ಹೀಗಿವೆ ‘ಪಂಚ’ ಕಾರಣಗಳು
- Salaar: ಸಲಾರ್ ಸಿನಿಮಾ ಇಂದು (ಡಿ. 22) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ. ಆದರೆ, ಇದೇ ತೆಲುಗು ಸಿನಿಮಾ ಕನ್ನಡಿಗರ ಪಾಲಿಗೆ ತುಂಬ ವಿಶೇಷ. ಇಲ್ಲಿ ಕನ್ನಡದ ಕಲಾವಿದರಿದ್ದಾರೆ, ಕನ್ನಡದ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಹಾಗಾಗಿ ಕನ್ನಡಿಗರಿಗೂ ಈ ಸಿನಿಮಾ
- Salaar: ಸಲಾರ್ ಸಿನಿಮಾ ಇಂದು (ಡಿ. 22) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ. ಆದರೆ, ಇದೇ ತೆಲುಗು ಸಿನಿಮಾ ಕನ್ನಡಿಗರ ಪಾಲಿಗೆ ತುಂಬ ವಿಶೇಷ. ಇಲ್ಲಿ ಕನ್ನಡದ ಕಲಾವಿದರಿದ್ದಾರೆ, ಕನ್ನಡದ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಹಾಗಾಗಿ ಕನ್ನಡಿಗರಿಗೂ ಈ ಸಿನಿಮಾ
(1 / 6)
Salaar: ಸಲಾರ್ ಸಿನಿಮಾ ಇಂದು (ಡಿ. 22) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ. ಆದರೆ, ಇದೇ ತೆಲುಗು ಸಿನಿಮಾ ಕನ್ನಡಿಗರ ಪಾಲಿಗೆ ತುಂಬ ವಿಶೇಷ. ಇಲ್ಲಿ ಕನ್ನಡದ ಕಲಾವಿದರಿದ್ದಾರೆ, ಕನ್ನಡದ ತಂತ್ರಜ್ಞರು ಕೆಲಸ ಮಾಡಿದ್ದಾರೆ.
(2 / 6)
ಉಗ್ರಂ ಚಿತ್ರದ ಕಥೆ: 2014ರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಸಿನಿಮಾ ಬಿಡುಗಡೆ ಆಗಿತ್ತು. ಶ್ರೀಮುರಳಿ ನಾಯಕನಾಗಿ ನಟಿಸಿದ್ದ ಉಗ್ರಂ ಚಿತ್ರದ ಸ್ಯಾಂಡಲ್‌ವುಡ್‌ನಲ್ಲಿ ಒಂದು ಹೊಸ ದಾಖಲೆ ಬರೆದಿತ್ತು. ಸೋಲಿನ ಹಾದಿ ಹಿಡಿದ್ದಿದ್ದ ಶ್ರೀಮುರಳಿಗೆ ಗೆಲುವು ತಂದುಕೊಟ್ಟಿತ್ತು. ಆ ಸಿನಿಮಾ ಬಳಿಕ, ಇದೇ ಉಗ್ರಂ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡುವ ಮತ್ತು ಪ್ರಭಾಸ್ ನಾಯಕ ಎಂಬಿತ್ಯಾದಿ ಚರ್ಚೆಗಳು 9 ವರ್ಷದ ಹಿಂದೆಯೇ ಸದ್ದು ಮಾಡಿದ್ದವು. ಇದೀಗ ಅದೇ ಉಗ್ರಂ ಕಥೆಯನ್ನೇ ಆಧರಿಸಿ ಸಲಾರ್ ಮೂಡಿಬಂದಿದೆ. ಮೇಕಿಂಗ್ ವಿಚಾರದಲ್ಲಿ ಮತ್ತು ಆಡಿಯನ್ಸ್ ಪಲ್ಸ್ ಹಿಡಿದಿಟ್ಟುಕೊಳ್ಳುವ ಅಂಶಗಳನ್ನು ಹೆಚ್ಚು ಸೇರಿಸಿದ್ದಾರೆ ನಿರ್ದೇಶಕರು.
(3 / 6)
ಕೆಜಿಎಫ್ ಸರಣಿಯ Extend ವರ್ಷನ್: ಕೆಜಿಎಫ್ ಮೊದಲ ಸಿನಿಮಾಗಿಂತ ಚಾಪ್ಟರ್ 2 ಮೇಕಿಂಗ್ ರೋಚಕವಾಗಿತ್ತು. ಇದೀಗ ಅದೇ ಕೆಜಿಎಫ್ ಚಾಪ್ಟರ್ 2ಗಿಂತ 10 ಪಟ್ಟು ಹಿರಿದಾಗಿದೆ ಸಲಾರ್ ಸಿನಿಮಾ. ಬಜೆಟ್ ವಿಚಾರದಲ್ಲಿ ಕೆಜಿಎಫ್ 2ಕ್ಕೆ 100 ಕೋಟಿ ಮೊತ್ತವನ್ನು ಹೊಂಬಾಳೆ ಫಿಲಂಸ್ ಸುರಿದರೆ, ಸಲಾರ್ ಚಿತ್ರಕ್ಕೆ ಬರೋಬ್ಬರಿ 270 ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡಿದೆ ಹೊಂಬಾಳೆ ಫಿಲಂಸ್. ಅದಕ್ಕೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಮೇಕಿಂಗ್ ವಿಚಾರದಲ್ಲಿ ಮೈ ರೋಮಾಂಚನ ಎನಿಸುವಂತೆ ದೃಶ್ಯಗಳನ್ನೇ ಕಟ್ಟಿಕೊಟ್ಟಿದೆ ಇಡೀ ತಂಡ.
(4 / 6)
ಕನ್ನಡ ಕಲಾವಿದರ ಪಾರಮ್ಯ: ಸಲಾರ್ ಸಿನಿಮಾದಲ್ಲಿನ ಇನ್ನೊಂದು ವಿಶೇಷ ಏನೆಂದರೆ, ಇಡೀ ಚಿತ್ರದಲ್ಲಿ ಕನ್ನಡಿಗ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಕೆಜಿಎಫ್ ಮೊದಲ ಭಾಗದಲ್ಲಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು ಸಲಾರ್‌ನಲ್ಲಿ ಖಳನಾಗಿ ಮುಂದುವರಿದಿದ್ದಾರೆ. ಕನ್ನಡದ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ಖ್ಯಾತ ಪೋಷಕ ನಟ ರವಿ ಭಟ್, ಉತ್ತರ ಕರ್ನಾಟಕ ಮೂಲದ ನಟ ನವೀನ್ ಶಂಕರ್, ರಕ್ತ ಸಿಕ್ತ ಅವತಾರದಲ್ಲಿ ಸಲಾರ್ ಚಿತ್ರದಲ್ಲಿ ಎದುರಾಗಿದ್ದಾರೆ. ಕನ್ನಡದ ನಟ ಪ್ರಮೋದ್, ಭಜರಂಗಿ ಸೇರಿ ಹಲವು ಕನ್ನಡದ ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಜನಪ್ರಿಯ ವಿಲನ್ ಮಧು ಗುರುಸ್ವಾಮಿ ಸಲಾರ್‌ನಲ್ಲಿದ್ದಾರೆ.
(5 / 6)
ಕನ್ನಡದ ತಂತ್ರಜ್ಞರ ಮಾಸ್ಟರ್‌ಪೀಸ್: ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ, ರವಿ ಬಸ್ರೂರು ಸಲಾರ್‌ನ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಲಾರ್‌ನ ಒಂದೊಂದು ಫ್ರೇಮ್ ಅಚ್ಚುಕಟ್ಟಾಗಿ ಕಾಣಿಸಲು ಮುಖ್ಯ ಕಾರಣ ಭುವನ್ ಗೌಡ. ಕೆಜಿಎಫ್ ಬಳಿಕ ಈ ಜೋಡಿ ಇಲ್ಲಿಯೂ ಮೋಡಿ ಮಾಡುತ್ತಿದೆ. ಸದ್ಯ ಬಿಡುಗಡೆ ಆಗಿರುವ ಹಾಡುಗಳು ಮತ್ತು ಚಿತ್ರದ ಬಿಜಿಎಂ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಭುವನ್ ಗೌಡ ಅವರ ಕ್ಯಾಮರಾ ವರ್ಕ್ ಸಿನಿಮಾದ ಹೈಲೈಟ್‌ಗಳಲ್ಲೊಂದು.
(6 / 6)
ಕನ್ನಡದ ನಿರ್ದೇಶಕ, ಕನ್ನಡದ ನಿರ್ಮಾಪಕ: ಸಲಾರ್ ಸಿನಿಮಾ ನಿರ್ದೇಶನ ಮಾಡಿದ್ದು ಪ್ರಶಾಂತ್ ನೀಲ್. ಉಗ್ರಂ, ಕೆಜಿಎಫ್ ಬಳಿಕ ಸಲಾರ್ ಅನ್ನೋ ಮತ್ತೊಂದು ಲೋಕವನ್ನು ಪ್ಯಾನ್ ಇಂಡಿಯಾ ಪ್ರೇಕ್ಷಕನ ಮುಂದೆ ತಂದಿದ್ದಾರವರು. ಇವರೂ ಕೂಡ ಕನ್ನಡದವರೇ. ನಿರ್ಮಾಣದ ವಿಚಾರದಲ್ಲಿ ಹೇಳುವುದಾದರೆ, ಸಲಾರ್ ನಿರ್ಮಾಣ ಮಾಡಿದ್ದು ಹೊಂಬಾಳೆ ಫಿಲಂಸ್. ಕನ್ನಡದ ಈ ಚಿತ್ರ ನಿರ್ಮಾಣ ಸಂಸ್ಥೆ, ಇದೀಗ ಪರಭಾಷೆಯಲ್ಲೂ ತನ್ನ ಛಾಪು ಮೂಡಿಸಿದೆ. ಕರುನಾಡೇ ಮೆಚ್ಚುವ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ಇತರ ಗ್ಯಾಲರಿಗಳು