ಬೆಳ್ಳಿತೆರೆ ಮೇಲೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಅಬ್ಬರ! ಮರು ಬಿಡುಗಡೆ ಆಗ್ತಿದೆ 2017ರಲ್ಲಿ ಬಂದ ಈ ಸಿನಿಮಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಳ್ಳಿತೆರೆ ಮೇಲೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಅಬ್ಬರ! ಮರು ಬಿಡುಗಡೆ ಆಗ್ತಿದೆ 2017ರಲ್ಲಿ ಬಂದ ಈ ಸಿನಿಮಾ

ಬೆಳ್ಳಿತೆರೆ ಮೇಲೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಅಬ್ಬರ! ಮರು ಬಿಡುಗಡೆ ಆಗ್ತಿದೆ 2017ರಲ್ಲಿ ಬಂದ ಈ ಸಿನಿಮಾ

  • Anjani Putra Re-Release: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಅಂಜನಿ ಪುತ್ರ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. 2017ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಆರು ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ. ಹಾಗಾದರೆ, ಯಾವಾಗ ಬಿಡುಗಡೆ? ಹೀಗಿದೆ ಮಾಹಿತಿ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ, ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಅಂಜನಿಪುತ್ರ. 
icon

(1 / 8)

2017ರ ಡಿಸೆಂಬರ್‌ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಮಾಸ್‌ ಪ್ರೇಕ್ಷಕರ ಮನಸ್ಸು ಗೆದ್ದಿತ್ತು.
icon

(2 / 8)

ಎಂ.ಎನ್.ಕೆ‌ ಮೂವೀಸ್ ಬ್ಯಾನರ್‌ ಎಂ.ಎನ್ ಕುಮಾರ್  ಅಂಜನಿ ಪುತ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈಗ ಇದೇ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್‌ ಮಾಡಿದ್ದಾರೆ. 
icon

(3 / 8)

ಮೇ 10 ರಂದು ಅಂಜನಿ ಪುತ್ರ ರಾಜ್ಯಾದ್ಯಂತ ಮರು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪುನೀತ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. 
icon

(4 / 8)

ರವಿ ಬಸ್ರೂರ್ ಅವರ‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ "ಬಾರಿ ಖುಷಿ ಮರ್ರೆ ನಂಗೆ" ಸೇರಿ ಎಲ್ಲ ಹಾಡುಗಳು‌ ಜನಪ್ರಿಯವಾಗಿದ್ದವು. 
icon

(5 / 8)

ಸದ್ಯ ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೂ ಹೊಸ ಸಿನಿಮಾಗಳ ಆಗಮನವಾಗ್ತಿಲ್ಲ. ಇದನ್ನೇ ಎನ್‌ಕ್ಯಾಶ್‌ ಮಾಡಿಕೊಂಡ ನಿರ್ಮಾಪಕರು ಪುನೀತ್‌ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. 
icon

(6 / 8)

2014ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ಪೂಜೈ ಚಿತ್ರದ ರಿಮೇಕ್‌ ಈ ಅಂಜನಿ ಪುತ್ರ ಸಿನಿಮಾ. 
icon

(7 / 8)

ಮೂಲ ಚಿತ್ರದಲ್ಲಿ ವಿಶಾಲ್‌ ನಾಯಕನಾಗಿ ನಟಿಸಿದರೆ, ಶ್ರುತಿ ಹಾಸನ್‌ ನಾಯಕಿಯಾಗಿದ್ದರು. ಹರಿ ಈ ಸಿನಿಮಾ ನಿರ್ದೇಶನ ಮಾಡಿದ್ದರು. 
icon

(8 / 8)

ಇತರ ಗ್ಯಾಲರಿಗಳು