Ragini Dwivedi: ತೃತೀಯ ಲಿಂಗಿಗಳ ಏಳಿಗೆಗೆ ಕೈ ಜೋಡಿಸಿದ ರಾಗಿಣಿ ದ್ವಿವೇದಿ; ನಟಿಯ ಕಾರ್ಯಕ್ಕೆ ಸಿಕ್ತು ಮಂಗಳಮುಖಿಯರ ಆಶೀರ್ವಾದ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ragini Dwivedi: ತೃತೀಯ ಲಿಂಗಿಗಳ ಏಳಿಗೆಗೆ ಕೈ ಜೋಡಿಸಿದ ರಾಗಿಣಿ ದ್ವಿವೇದಿ; ನಟಿಯ ಕಾರ್ಯಕ್ಕೆ ಸಿಕ್ತು ಮಂಗಳಮುಖಿಯರ ಆಶೀರ್ವಾದ

Ragini Dwivedi: ತೃತೀಯ ಲಿಂಗಿಗಳ ಏಳಿಗೆಗೆ ಕೈ ಜೋಡಿಸಿದ ರಾಗಿಣಿ ದ್ವಿವೇದಿ; ನಟಿಯ ಕಾರ್ಯಕ್ಕೆ ಸಿಕ್ತು ಮಂಗಳಮುಖಿಯರ ಆಶೀರ್ವಾದ

  • Ragini Dwivedi: ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇತ್ತೀಚೆಗಷ್ಟೇ (ಮೇ 24) ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಅವರ ಹಲವು ಸಿನಿಮಾಗಳೂ ಲಾಂಚ್‌ ಆಗಿದ್ದು, ಸಿನಿಮಾ ತಂಡಗಳ ಜತೆಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ನಡುವೆ ವೇದಿಕೆ ಮೇಲೆ ವಿಶೇಷ ಅತಿಥಿಗಳಿಂದ ರಾಗಿಣಿ ಅಷ್ಟೇ ವಿಶೇಷವಾದ ಆಶೀರ್ವಾದವೂ ದಕ್ಕಿದೆ. ಅದಕ್ಕೆ ಕಾರಣವೂ ಇದೆ.

ನಟಿ ರಾಗಿಣಿ ಒಂದಲ್ಲ ಎರಡಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. (Instagram/ rraginidwivedi)
icon

(1 / 7)

ಹೀಗೆ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಾಗಿರುವ ರಾಗಿಣಿ ಇತ್ತೀಚೆಗಷ್ಟೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ತೃತೀಯ ಲಿಂಗಿಗಳಿಂದ ವಿಶೇಷ ಆಶೀರ್ವಾದ ಪಡೆದಿದ್ದಾರೆ. (Instagram/ rraginidwivedi)
icon

(2 / 7)

ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕೈದು ಮಂದಿ ತೃತೀಯ ಲಿಂಗಿಗಳನ್ನು ವೇದಿಕೆ ಮೇಲೆ ಕರೆದು ಅವರಿಂದಲೇ ಮಾತನಾಡಿಸಿದ್ದಾರೆ. (Instagram/ rraginidwivedi)
icon

(3 / 7)

ಇದೇ ವೇಳೆ ಚೈತ್ರಾ ಎನ್ನುವವರು ಕೋವಿಡ್‌ ಸಮಯದಲ್ಲಿ ರಾಗಿಣಿ ಮಾಡಿದ ಸಹಾಯವನ್ನು ನೆನಪು ಮಾಡಿಕೊಂಡಿದ್ದಾರೆ. (Instagram/ rraginidwivedi)
icon

(4 / 7)

ರಾಜ್ಯದಲ್ಲಿ ಎಲ್ಲೆಲ್ಲಿ ಟ್ರಾನ್ಸ್‌ಜೆಂಡರ್ಸ್‌ ಇದ್ದಾರೋ ಅವರೆಲ್ಲರ ಬಗ್ಗೆ ವಿಶೇಷ ಇನಿಷಿಯೇಟಿವ್ ತೆಗೆದುಕೊಂಡು ಆಹಾರ ಸೇರಿ ಆರೋಗ್ಯ ಸೇವೆಯನ್ನೂ ರಾಗಿಣಿ ತಮ್ಮ ಟ್ರಸ್ಟ್‌ ಮೂಲಕ ಒದಗಿಸಿದ್ದರು. ಈ ವರ್ಷವೂ ಆ ಕಾರ್ಯ ಮುಂದುವರಿದೆ. (Instagram/ rraginidwivedi)
icon

(5 / 7)

ರಾಜ್ಯದಲ್ಲಿರುವ ತೃತೀಯ ಲಿಂಗಿಗಳ ಆರೋಗ್ಯದಿಂದ ಹಿಡಿದು, ಶಿಕ್ಷಣವೂ ತುಂಬ ಮುಖ್ಯ. ಈ ನಿಟ್ಟಿನಲ್ಲಿ ನಮಗೆ ಸರ್ಕಾರದಿಂದ ನಿಗಮ ಮಂಡಳಿ ಮಾಡಬೇಕೆಂಬ ಒತ್ತಾಯವನ್ನೂ ಮುಂದಿಟ್ಟಿದ್ದೇವೆ ಎಂದರು ತೃತೀಯ ಲಿಂಗಿ ಚೈತ್ರಾ. (Instagram/ rraginidwivedi)
icon

(6 / 7)

ಇದೆಲ್ಲದರ ಉಸ್ತುವಾರಿಯನ್ನು ಪೂರ್ತಿ ರಾಗಿಣಿ ದ್ವಿವೇದಿ ಸದ್ಯ ವಹಿಸಿಕೊಂಡಿದ್ದು, ನಟಿಯ ಈ ಕಾರ್ಯಕ್ಕೆ ಟ್ರಾನ್ಸ್‌ಜೆಂಡರ್‌ ಸಮುದಾಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. (Instagram/ rraginidwivedi)
icon

(7 / 7)

ಇತರ ಗ್ಯಾಲರಿಗಳು