Dil Kush Trailer: ಕರಿಮಣಿ ಸೀರಿಯಲ್ ಖ್ಯಾತಿಯ ಸ್ಪಂದನಾ ಸೋಮಣ್ಣ ಹೊಸ ಸಿನಿಮಾ ದಿಲ್ ಖುಷ್‌ಗೆ ಸಾಥ್ ನೀಡಿದ ಶ್ರೀಮುರಳಿ
- ಕರಿಮಣಿ ಸೀರಿಯಲ್ ನಟಿ ಸ್ಪಂದನಾ ಸೋಮಣ್ಣ ನಟನೆಯ ಹೊಸ ಸಿನಿಮಾ ದಿಲ್ ಖುಷ್. ಈಗ ಇದೇ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಈ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ನಟ ಶ್ರೀಮುರಳಿ ಆ ಟ್ರೇಲರ್ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ ರಿಲೀಸ್ ಮಾಡಿಕೊಟ್ಟಿದ್ದಾರೆ.

(1 / 6)
ಜಯಪ್ರಭ ಕಲರ್ ಫ್ರೇಮ್ಸ್ ಬ್ಯಾನರ್‌ನಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾ ಶೇಖರ್ ನಿರ್ಮಿಸಿರುವ ಸಿನಿಮಾ ದಿಲ್‌ಖುಷ್. ಪ್ರಮೋದ್ ಜಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
(2 / 6)
ಇತ್ತೀಚೆಗಷ್ಟೇ ದಿಲ್ ಖುಷ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಶ್ರೀಮುರಳಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ತಿಂಗಳ 22ರಂದು ತೆರೆಗೆ ಬರಲಿದೆ.
(3 / 6)
ಸಿಂಪಲ್ ಸುನಿ ಅವರ ಬಳಿ ಕೆಲಸ ಮಾಡಿದ್ದ ಪ್ರಮೋದ್ ಜಯ ಅವರು ನಿರ್ದೇಶಿಸಿರುವ ಚೊಚ್ಚಲ ಚಿತ್ರವಿದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.
(4 / 6)
ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ನಿರ್ದೇಶನವಿದೆ. ಪ್ರದ್ಯೋತನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
(5 / 6)
ನಿವಾಸ್ ನಾರಾಯಣ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿರುವ ದಿಲ್ ಖುಷ್ ಚಿತ್ರದ ನಾಯಕನಾಗಿ ರಂಜಿತ್ ನಟಿಸಿದ್ದಾರೆ.
ಇತರ ಗ್ಯಾಲರಿಗಳು