ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  The Judgement: ಕ್ರೇಜಿಸ್ಟಾರ್‌ ರವಿಚಂದ್ರನ್‌ ‘ದಿ ಜಡ್ಜ್‌ಮೆಂಟ್‌’ ಚಿತ್ರಕ್ಕೆ ಸಿಕ್ತು ಆನೆ ಬಲ; ಬಿಡುಗಡೆಯ ಹೊಣೆ ಹೊತ್ತ ಬಾಲಿವುಡ್ ಸಂಸ್ಥೆ!

The Judgement: ಕ್ರೇಜಿಸ್ಟಾರ್‌ ರವಿಚಂದ್ರನ್‌ ‘ದಿ ಜಡ್ಜ್‌ಮೆಂಟ್‌’ ಚಿತ್ರಕ್ಕೆ ಸಿಕ್ತು ಆನೆ ಬಲ; ಬಿಡುಗಡೆಯ ಹೊಣೆ ಹೊತ್ತ ಬಾಲಿವುಡ್ ಸಂಸ್ಥೆ!

  • ಜಿ9 ಕಮ್ಯೂನಿಕೇಷನ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ದಿ ಜಡ್ಜ್‌ಮೆಂಟ್‌ ಸಿನಿಮಾದ ಬಿಡುಗಡೆಯ ಜವಾಬ್ದಾರಿಯನ್ನು ದೊಡ್ಡ ಸಂಸ್ಥೆಯೇ ವಹಿಸಿಕೊಂಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಅದ್ದೂರಿ ತಾರಾಬಳಗ ಹೊಂದಿರುವ ಈ ಸಿನಿಮಾ ಶೀಘ್ರದಲ್ಲಿ ತೆರೆಗೆ ಬರಲಿದೆ.

ಇತ್ತೀಚಿಗೆ ಡಾ. ರಾಜಕುಮಾರ್ ಹುಟ್ಟುಹಬ್ಬದ ದಿನದಂದು ಚಿತ್ರೀಕರಣ ಮುಗಿಸಿಕೊಂಡಿದ್ದ ದಿ ಜಡ್ಜ್‌ಮೆಂಟ್‌ ಸಿನಿಮಾ, ಟೀಸರ್‌ ಮೂಲಕ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. 
icon

(1 / 7)

ಗುರುರಾಜ್‌ ಕುಲಕರ್ಣಿ ಈ ಸಿನಿಮಾದ ನಿರ್ದೇಶನ ಮಾಡಿದ್ದು, ನಿರ್ಮಾಣದಲ್ಲೂ ಪಾಲುದಾರರು. ಈಗ ಇದೇ ಚಿತ್ರಕ್ಕೆ ಆನೆ ಬಲ ಸಿಕ್ಕಿದೆ. ಅಂದರೆ ದೊಡ್ಡ ಕಂಪನಿಯೇ ಈ ಸಿನಿಮಾವನ್ನು ರಿಲೀಸ್‌ ಮಾಡುವ ಹೊಣೆ ಹೊತ್ತಿದೆ. 
icon

(2 / 7)

ಚಿತ್ರದ ವಿತರಣೆ ಹಕ್ಕನ್ನು ಪ್ರತಿಷ್ಠಿತ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಪಡೆದುಕೊಂಡಿದೆ. ಈ ಹೆಸರಾಂತ ಸಂಸ್ಥೆಯ ಮೂಲಕ ದಿ ಜಡ್ಜ್‌ಮೆಂಟ್‌ ಚಿತ್ರ ಬಿಡುಗಡೆಯಾಗಲಿದೆ. 
icon

(3 / 7)

ವಿಶೇಷ ಏನೆಂದರೆ ಈ ಚಿತ್ರದ ವಿತರಣೆ ಅಷ್ಟೇ ಅಲ್ಲದೆ, ಮುಂದೆ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುವ  ಚಿತ್ರಗಳ ನಿರ್ಮಾಣದಲ್ಲೂ ಸಹಯೋಗ ನೀಡುವುದಾಗಿ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ತಿಳಿಸಿದೆ ಎಂದು ನಿರ್ದೇಶಕ ಗುರುರಾಜ್‌ ಕುಲಕರ್ಣಿ ತಿಳಿಸಿದ್ದಾರೆ. 
icon

(4 / 7)

ಕೋರ್ಟ್ ಡ್ರಾಮ ಶೈಲಿಯ ಈ ಚಿತ್ರಕ್ಕೆ ಪಿ.ಕೆ. ಹೆಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಕೆಂಪರಾಜ್ ಅವರ ಸಂಕಲನವಿದೆ.  
icon

(5 / 7)

ರವಿಚಂದ್ರನ್, ದಿಗಂತ್, ಧನ್ಯಾ ರಾಮ್‌ಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ
icon

(6 / 7)

ನಿರ್ದೇಶಕರನ್ನೂ ಸೇರಿ ಒಟ್ಟು ಐವರು ಬಂಡವಾಳ ಹೂಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಕೋರ್ಟ್ ರೂಮ್ ಥ್ರಿಲ್ಲರ್ ದಿ ಜಡ್ಜ್ ಮೆಂಟ್ ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಿರ್ದೇಶಕರದ್ದು. 
icon

(7 / 7)

IPL_Entry_Point

ಇತರ ಗ್ಯಾಲರಿಗಳು